
ಕೋಲಾರ: ಸರ್ಕಾರಿ , ಅನುದಾನಿತ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲೆಗಳಲ್ಲಿ ವಾರ್ಷಿಕೋತ್ಸವ ಆಚರಣೆ ಮತ್ತು ಇತರೆ ಸಾಂಸ್ಕ್ರೃತಿಕ ಕಾರ್ಯಕ್ರಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ನಡೆಸುವಂತೆ ಒತ್ತಾಯಿಸಿ ಕನ್ನಡ ಸೇನೆ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಶಿಕ್ಷಣಾಧಿಕಾರಿ ಸಹಿರಾ ಅಂಜಂ ರವರ ಮೂಲಕ ಡಿಡಿಪಿಐ ರವರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಕನ್ನಡಮಿತ್ರ ವೆಂಕಟಪ್ಪ ಮಾತನಾಡಿ, ಸರ್ಕಾರಿ ಹಾಗೂ ಖಾಸಗಿ ಶಾಲೆ, ಕಾಲೇಜುಗಳಲ್ಲಿ ವಾರ್ಷಿಕೋತ್ಸವ ಹಾಗೂ ಇತರೆ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡೆಗಣಿಸಿ ಪರ ಭಾಷೆಗಳಾದ ತಮಿಳು, ತೆಲುಗು ಇತರೆ ಭಾಷೆಗಳಲ್ಲಿ ಹಾಡು, ನೃತ್ಯಗಳು ಪೂರ್ವ ಸಿದ್ದತೆಯನ್ನು ನಡೆಸುತ್ತಿರುವುದು ನಡೆಸುತ್ತಿರುವುದು ನಮ್ಮ ಸಂಘಟನೆಯ ಗಮನಕ್ಕೆ ಬಂದಿದ್ದು, ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಿಗೆ ಕೂಡಲೇ ಡಿಡಿಪಿಐ ರವರು ಸುತ್ತೋಲೆಯ ಮೂಲಕ ತಿಳಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಇದೇ ರೀತಿ ಮುಂದುವರೆದರೆ ಅಂತಹ ಶಾಲೆ, ಶಿಕ್ಷಣ ಸಂಸ್ಥೆಗಳ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಸೇನೆ ಗೌರವಾಧ್ಯಕ್ಷ ಎಸ್.ಸಿ.ವೆಂಕಟಕೃಷ್ಣಪ್ಪ,ಪಿ.ನಾರಾಯಣಪ್ಪ, ತಾಲ್ಲೂಕು ಅಧ್ಯಕ್ಷ ಶಿವಚಂದ್ರಯ್ಯ, ನೀರಾವರಿ ಹೋರಾಟಗಾರ ವಿ.ಕೆ.ರಾಜೇಶ್, ಮಾನವ ಹಕ್ಕುಗಳ ಸಮಿತಿಯ ಗಲ್ ಪೇಟೆ ಸಂತೋಷ್, ಶ್ರೀನಾಥ್, ಕೋಲಾರ ನಗರ ಘಟಕ ಅಧ್ಯಕ್ಷ ನಾಗೇಶ್, ಸಂಚಾಲಕ ಮನೋಹರ್, ನವೀನ್ ಕುಮಾರ್, ಮನೋಜ್ ಕುಮಾರ್, ಜಾಲಿ ಶ್ರೀನಿವಾಸ್, ನಾಗರಾಜ್, ಅನಿಲ್ ಕುಮಾರ್ ಸೇರಿದಂತೆ ಮುಂತಾದವರಿದ್ದರು.