WhatsApp Group
Join Now
ಗದಗ ಜಿಲ್ಲೆ ರೋಣ ತಾಲೂಕಿನ ಜಕ್ಕಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ವಿಂಡ್ ಕಂಪನಿಗಳ ದಬ್ಬಾಳಿಕೆ ಮಿತಿಮೀರಿದೆ. ಕಂಪನಿಗಳ ಭಾರಿ ಯಂತ್ರೋಪಕರಣಗಳನ್ನು ಹೊತ್ತ ವಾಹನಗಳ ಸತತ ಸಂಚಾರದಿಂದಾಗಿ ಗ್ರಾಮದ ರಸ್ತೆಗಳು ಸಂಪೂರ್ಣ ಹದಗೆಟ್ಟು ಗುಂಡಿಮಯವಾಗಿವೆ.
ಸಾರ್ವಜನಿಕರ ಸಂಚಾರಕ್ಕೆ ಸಂಚಕಾರ ತಂದಿರುವ ಈ ಕಂಪನಿಗಳ ವಿರುದ್ಧ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ, RTI ಮೂಲಕ ಕಂಪನಿಗಳು ಪಾವತಿಸಿರುವ ತೆರಿಗೆ ಮತ್ತು ಪಡೆದಿರುವ ಅನುಮತಿಗಳ ಬಗ್ಗೆಯೂ ಮಾಹಿತಿ ಕೇಳಲಾಗಿದೆ.
ತಕ್ಷಣವೇ ಹಾಳಾದ ರಸ್ತೆಗಳನ್ನು ಕಂಪನಿಗಳೇ ದುರಸ್ತಿ ಮಾಡಿಕೊಡಬೇಕು.
ಸಾರ್ವಜನಿಕರ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು.
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.



