ಆದಷ್ಟು ಬೇಗನೆ ವಾರ್ಡ್ ನಂ 18ರ ಸಾರ್ವಜನಿಕ ಶೌಚಾಲಯವನ್ನು ತೆರವು ಗೊಳಿಸಿ ಹೊಸದಾಗಿ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು.
ರಾಮದುರ್ಗ ಪಟ್ಟಣದ ವಾರ್ಡ್ ನಂಬರ್ 18 ಯುನಿಯನ್ ಬ್ಯಾಂಕ ಹತ್ತಿರ ಮತ್ತು ಗಡದಕೇರಿ ಮದ್ಯದಲ್ಲಿರುವ ಸಾರ್ವಜನಿಕ ಶೌಚಾಲಯ ಸಂಪೂರ್ಣ ದುರಸ್ತಿಯಲ್ಲಿರುತ್ತದೆ ಸಂಡಾಸ ಬಾಂಡೆ ಅಳವಡಿಸುವುದು ಮತ್ತು ಸೆಪ್ಟಿಕ್ ಟ್ಯಾಂಕಗೆ ಪೈಪಲೈನ್ ಅಳವಡಿಸಿ ಗಟಾರಕ್ಕೆ ಹೋಗುವ ವ್ಯವಸ್ಥೆ ಮಾಡಬೇಕೆಂದು ಪುರಸಭೆಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರು ಕೂಡ ಇದುವರೆಗೆ ದುರಸ್ತಿ ಮಾಡದೆ ಇರುವುದು ಬೇಸರದ ಸಂಗತಿಯಾಗಿದೆ ಸ್ವಚ್ಛತೆ ಇಲ್ಲದೇ ಗಬ್ಬು ನಾರುತ್ತಿರುವ ವಾರ್ಡ್ ನಂ 18ರ ಸಾರ್ವಜನಿಕ ಶೌಚಾಲಯ ಸಾಂಕ್ರಾಮಿಕ ರೋಗ ಹರಡುವ ಸಮಯದಲ್ಲಿ ಸ್ವಚ್ಚತೆ ಕಾಪಾಡಿ ಅಂತ ಹೇಳುವ ಸರ್ಕಾರಿ ಅಧಿಕಾರಿಗಳು ಸ್ವಚ್ಚತೆ ಕಾಪಾಡುವಲ್ಲಿ ವಿಫಲವಾಗಿದೆ. ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ. ಗಬ್ಬೆದ್ದು ದುರ್ವಾಸನೆ ಬರುತ್ತಿದ್ದು ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ ನೋಡಿದರೆ, ಆಗ ನಮಗೆ ಅಲ್ಲಿಗೆ ಹೋಗುವುದೇ ಬೇಡ ಎನ್ನುವ ಮನಸ್ಸಾಗುವುದು. ಆದರೆ ಕೆಲವೊಂದು ಸಲ ಅನಿವಾರ್ಯವಾಗಿ ಹೋಗಲೇಬೇಕಾದ ಪರಿಸ್ಥಿತಿ ಬಂದಿದೆ
ಶೌಚಾಲಯದ ತೊಟ್ಟಿಗಳು ತುಂಬಿ ಬ್ಲಾಕ್ ಆಗಿ ತಿಳಿ ನೀರು ಅರಿಯದೆ ಇರುವುದರಿಂದ ಶೌಚಾಲಯ ಗೊಬ್ಬೆದ್ದು ನಾರುತ್ತಿರುವುದು ಶೌಚಾಲಯದ ಬಾಂಡೆಗಳು ಸಂಪೂರ್ಣ ಹದಗೆಟ್ಟು ಹೋಗಿರುವ ದೃಶ್ಯ ಕಂಡು ಬರುತ್ತದೆ ಸಾರ್ವಜನಿಕರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ಬಂದಿದೆ ಪಕ್ಕದಲ್ಲಿರುವ ಮನೆಯಲ್ಲಿ ವಾಸಿಸುವ ಸ್ಥಳಿಯರು ನರಕಯಾತನೆ ಅನುಭವಿಸುತ್ತಿದ್ದಾರೆ.
ಸಾರ್ವಜನಿಕ ಶೌಚಾಲಯ ಎನ್ನುವುದು ಹಲವಾರು ರೀತಿಯ ಸೋಂಕುಗಳನ್ನು ಹರಡುವಂತಹ ತಾಣವಾಗಿದೆ ಇಲ್ಲಿರುವ ಸಂಡಾಸ ಬಾಂಡೆಗಳು ಕೆಟ್ಟು ಹೋಗಿದ್ದು, ನೀರಿನ ವ್ಯವಸ್ಥೆ ಇಲ್ಲದೆ ದುರ್ವಾಸನೆ ಮತ್ತು ಈಗ ನಿರ್ಮಿಸಿರುವ ಸೆಪ್ಟಿಕ್ ಟ್ಯಾಂಕನಲ್ಲಿರುವ ನೀರು ಗಟಾರಕ್ಕೆ ಸಂಪರ್ಕ ಕೊಡದೇ ಇರುವದರಿಂದ ಅಲ್ಲಿಯೇ ನಿಂತು ದುರ್ವಾಸನೆ ಬರುತ್ತದೆ, ಈ ಸಾರ್ವಜನಿಕ ಶೌಚಾಲಯಕ್ಕೆ ವಿದ್ಯುತ್ ಸಂಪರ್ಕ ಇರುವುದಿಲ್ಲ ರಾತ್ರಿ ಹೊತ್ತು ಶೌಚಾಲಯಕ್ಕೆ ಹೋಗುವುದೇ ಜನರಿಗೆ ಭಯವಾಗಿದೆ. ನೀರು ನಿಲ್ಲುವದರಿಂದ ಹಾವು ಕ್ರಿಮಿ ಕೀಟಗಳು ಹೆಚ್ಚಾಗುತ್ತಿವೆ. ಇದರಿಂದ ಚಿಕ್ಕ ಚಿಕ್ಕ ಮಕ್ಕಳಿಗೆ ಮತ್ತು ವೃದ್ಧರ ‘ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರಿದೆ. ಶೌಚಾಲಯದ ನೀರು ಗಡದಕೇರಿಯಲ್ಲಿರುವ ಬಸವೇಶ್ವರ ದೇವಸ್ಥಾನದ ಮುಂದೆ ಬಂದು ನಿಲ್ಲುತ್ತಿದೆ ಆದಷ್ಟು ಬೇಗನೆ ಸಾರ್ವಜನಿಕ ಶೌಚಾಲಯವನ್ನು ತೆರವು ಗೊಳಿಸಿ ಹೊಸದಾಗಿ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು.