WhatsApp Group
Join Now
ಬೆಂಗಳೂರು: ಸಾರಿಗೆ ಸಚಿವ
ರಾಮಲಿಂಗಾರೆಡ್ಡಿ ಬಗ್ಗೆ
ಅವಹೇಳನಕಾರಿಯಾಗಿ ಮಾತನಾಡಿದ್ದ ವ್ಯಕ್ತಿಯೊಬ್ಬನನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುನೇಗೌಡ (50) ಬಂಧಿತ.
ದೊಡ್ಡಬಳ್ಳಾಪುರದ ಮುನೇಗೌಡ,
ತನ್ನ ಚಾಲನಾ ಪರವಾನಗಿ (ಡಿ.ಎಲ್)
ನವೀಕರಣಕ್ಕಾಗಿ ಆರ್‌ಟಿಒಗೆ
ಅರ್ಜಿ
ಸಲ್ಲಿಸಿದ್ದ. ಹಲವು ದಿನವಾದರೂ
ಡಿ.ಎಲ್ ಕೈಗೆ ಸಿಕ್ಕಿರಲಿಲ್ಲ. ಡಿ.ಎಲ್
ನೀಡುವಂತೆ ಹಲವು ಬಾರಿ ಆರ್‌ಟಿಒ
ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಿದ್ದರೂ
ಸ್ಪಂದನೆ ಸಿಕ್ಕಿರಲಿಲ್ಲ. ಇದರಿಂದ ನೊಂದ
ಮುನೇಗೌಡ, ಫೆ. 8ರಂದು ವಿಧಾನಸೌಧ
ಎದುರು ಆಯೋಜಿಸಿದ್ದ ಜನಸ್ಪಂದನಾ
ಕಾರ್ಯಕ್ರಮದಲ್ಲಿ
ಅಹವಾಲು ಸಲ್ಲಿಸಲು ಬಂದಿದ್ದ. ಅಧಿಕಾರಿಗಳು ಸೂಕ್ತ ರೀತಿ ಅಹವಾಲು ಆಲಿಸಿರಲಿಲ್ಲ.
ಮತ್ತಷ್ಟು ಸಿಟ್ಟಾದ ಮುನೇಗೌಡ,
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಗ್ಗೆ ಅವಹೇಳನಕಾರಿಯಾಗಿ
ಮಾತನಾಡಿದ್ದ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು
ಪೊಲೀಸರಿಗೆ ದೂರು ನೀಡಿದ್ದರು.