ಉಜ್ಜಿನಕೊಪ್ಪ, ಬೋಚಪಾಳ, ಕಟಕೋಳ ಹೋಬಳಿಯಾದ್ಯಂತ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಅಧಿಕಾರಿಗಳು ವಿಫಲ

WhatsApp Group Join Now

ಉಜ್ಜಿನಕೊಪ್ಪ, ಬೋಚಪಾಳ, ಕಟಕೋಳ ಹೋಬಳಿಯಾದ್ಯಂತ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಅಧಿಕಾರಿಗಳು ವಿಫಲ
ಅಕ್ರಮ ಮರಳು ದಂಧೆ ಕೋರುವರು ಪೊಲೀಸರಿಗೆ ಮಾಸಿಕ ಶುಲ್ಕ 6 ಲಕ್ಷದ 20 ಸಾವಿರ ರೂಪಾಯಿಗಳನ್ನು ನೀಡುತ್ತೇವೆ ಎಂದು ಉಜ್ಜಿನಕೊಪ್ಪ ಗ್ರಾಮದಲ್ಲಿ ಅಕ್ರಮ ಮರಳು ತುಂಬುವರು ಆರೋಪ ಮಾಡಿರುತ್ತಾರೆ
ರಾಮದುರ್ಗ ತಾಲೂಕಿನ ಉಜ್ಜಿನಕೊಪ್ಪ, ಬೋಚಪಾಳ, ಕಟಕೋಳ ಹೋಬಳಿಯಾದ್ಯಂತ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ರಾಜಾರೋಷವಾಗಿ ನಡೆಯುತ್ತಿದ್ದು, ಇದಕ್ಕೆ ಅಂಕುಶ ಹಾಕುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆಂದು ಸಾರ್ವಜನಿಕರು ದೂರಿದ್ದಾರೆ.
ಎಲ್ಲೆಡೆ ಅಕ್ರಮ ಮರಳು ದಂಧೆ ಕಾರುಬಾರು ಪೊಲೀಸರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಈ ದಂಧೆ ಪೊಲೀಸರ ಕೃಪಾಶೀರ್ವಾದದಿಂದಲೇ ನಡೆಯುತ್ತಿದೆ ಎಂಬ ಅನುಮಾನ ಜನರದ್ದು. ಲಾರಿ, ಆರ್ಭಟ ಕಾಣಿಸುತ್ತದೆ. ಜನರಿಗೆ ಎಲ್ಲೆಂದರಲ್ಲಿ ಕಣ್ಣಿಗೆ ಸಿಗುವ ಅಕ್ರಮ ಮರಳು ತುಂಬಿದ ಲಾರಿಗಳು ಪೊಲೀಸರ ಕಣ್ಣಿಗೆ ಏಕೆ ಬೀಳುವುದಿಲ್ಲ ಎಂಬ ಅಚ್ಚರಿಯ ಸಾರ್ವಜನಿಕರದ್ದು. ಕೆಲವು ಕಡೆಗಳಲ್ಲಿ ಮರಳನ್ನು ಸಾಗಿಸುವ ದಾರಿಗಳಿಗೂ ಹಣ ನೀಡಿ ಮರಳನ್ನು ಸಾಗಿಸಲಾಗುತ್ತಿದೆ. ಹಲವು ವರ್ಷಗಳಿಂದ ನಿರಂತರವಾಗಿ ಅಕ್ರಮ ಮರಳುಗಣಿಗಾರಿಕೆ ರಾಮದುರ್ಗ ತಾಲೂಕಿನ ಉಜ್ಜಿನಕೊಪ್ಪ, ಬೋಚಪಾಳ, ಕಟಕೋಳದಲ್ಲಿ ನಡೆಯುತ್ತಿದ್ದರೂ ರಾಜಕಾರಣಿಗಳ, ಅಧಿಕಾರಿಗಳ ಕೃಪಾಕಟಾಕ್ಷದಿಂದ ದಂಧೆಕೋರರ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಲು ಸಾಧ್ಯವಾಗದಿರುವುದು ದುರಂತವೇ ಸರಿ.
ಒಂದು ವರ್ಷದಿಂದ ಅಕ್ರಮ ಮರಳು ದಂಧೆ ರಾಜಾರೋಷವಾಗಿ ಹಾಡ ಹಗಲೇ ನಡೆಯುತ್ತಾ ಇದೆ. ಮಲಪ್ರಭಾ ನದಿಯುವುದಕ್ಕೂ ಚಾಲನೆ ಕಂಡಿದೆ ನದಿ ತೀರದಲ್ಲಿ ಹಾಗೂ ಹಳ್ಳದಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ.
ಮಲಪ್ರಭಾ ನದಿ ಪಾತ್ರದ ಕೆಲವು ಸ್ಥಳದಲ್ಲಿ ಅನಧಿಕೃತವಾಗಿ ಮರಳು ಎತ್ತುವ ಕೆಲಸ ನಡೆಯುತ್ತಿದೆ ಇಷ್ಟಾದರೂ ತಾಲೂಕು ಆಡಳಿತ ಅಕ್ರಮ ಮರಳು ದಂಧೆ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಅಕ್ರಮ ಫಿಲ್ಟರ್ ಮರಳುದಂಧೆ:- ಕೃಷಿ ಭೂಮಿಯಲ್ಲಿರುವ ಮರಳನ್ನು ನೀರಿನಿಂದ ಫಿಲ್ಟರ್ ಮಾಡಿ ಪಟ್ಟಣ ಪ್ರದೇಶಗಳಿಗೆ ಸಾಗಿಸಲಾಗುತ್ತಿದೆ.
ಅಕ್ರಮ ಮರಳು ಕೂರರಿಗೆ ಯಾರ ಭಯವಿಲ್ಲದೆ ಅಕ್ರಮ ಮರಳುದಂದೆ ನಡೆಸಿ ರಾಮದುರ್ಗ ತಾಲೂಕಿನ ಸಂಪನ್ಮೂಲ ಲೂಟಿ ಮಾಡುತ್ತಿರುವುದು ಖೇದಕರ ಸಂಗತಿಯಾಗಿದೆ ಕೆಲವೊಂದು ಕಡೆ ಖಾಸಗಿ ಜಮೀನಿನಲ್ಲಿ ಮರಳು ತೆಗೆಯುವಂತಿಲ್ಲ ಎಂಬ ನಿಯಮಗಳು ಇದ್ದರೂ ಕೂಡ ಸರಕಾರದ ಆದೇಶವನ್ನು ಗಾಳಿಗೆ ತೂರಿ ತಮಗೆ ಇಷ್ಟ ಬಂದ ಹಾಗೆ ಮರಳು ತುಂಬುವ ಕೆಲಸ ನಡೆಯುತ್ತಿದೆ.
ಆದರೆ ಮರಳು ಲೂಟಿಕೋರರು ಅಧಿಕಾರಿಗಳನ್ನು ಕೈಗೆ ಹಾಕಿಕೊಂಡು ಮರಳುದಂಧೆ ನಡೆಸುತ್ತಿದ್ದರೂ ಪೊಲೀಸರಾಗಲಿ, ತಹಶೀಲ್ದಾರ್ ಆಗಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಾಗಲಿ ಮರಳುದಂಧೆಕೋರರನ್ನು ಹಿಡಿದು ಕಠಿಣ ಶಿಕ್ಷೆ ನೀಡದೆ ಇರುವುದು ಅಕ್ರಮ ಮರಳುಗಾರಿಕೆ ನಡೆಸುವವರಿಗೆ ಹಾಲುಜೇನು ಸವಿದಂತಾಗಿದೆ. ಅಕ್ರಮ ಮರಳುಗಣಿಗಾರಿಕೆ ನಡೆಯುತ್ತಿರುವುದು ಪೊಲೀಸರಿಗೆ ತಿಳಿದಿರುತ್ತದೆ. ಆದರೆ ಮಾಸಿಕವಾಗಿ ಇಂತಿಷ್ಟು ಹಣ ಪಡೆದು ಸುಮ್ಮನಿದ್ದಾರೆ ಎಂಬ ಆರೋಪ ಕೇಳಿ ಬರುತ್ತದೆ. ಅಕ್ರಮ ಮರಳು ದಂಧೆ ಕೋರುವರು ಪೊಲೀಸರಿಗೆ ಮಾಸಿಕ ಶುಲ್ಕ 6 ಲಕ್ಷದ 20 ಸಾವಿರ ರೂಪಾಯಿಗಳನ್ನು ನೀಡುತ್ತೇವೆ ಎಂದು ಆರೋಪ ಮಾಡಿರುತ್ತಾರೆ
ಪೊಲೀಸರು ದಂಧೆಕೋರರಿಂದ ಹಣ ಪಡೆಯದಿದ್ದರೆ ಅಕ್ರಮ ಮರಳುಗಾರಿಕೆ ತಡೆಗಟ್ಟುವುದು ಕಷ್ಟಸಾದ್ಯವೇನಲ್ಲ. ಅದೇರೀತಿ ಕಂದಾಯ ಇಲಾಖೆಯ ಅಧಿಕಾರಿಗಳು , ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಿಬ್ಬಂದಿಗಳು ಹಣ ಪಡೆದು ಮರಳುಗಣಿಗಾರಿಕೆಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುವುದು ಸುಳ್ಳೇನಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

About The Author