ದಾಖಲೆಗಳಿಲ್ಲದೆ ಸಾಗುಸುತ್ತಿದ್ದ 5,26,500 ರೂಪಾಯಿ ನಗದು ವಶ

WhatsApp Group Join Now

ಕಣಬರ್ಗಿ ಚಕಪೋಸ್ಟ್ ಬಳಿ ದಾಖಲೆಗಳಿಲ್ಲದೆ ಸಾಗುಸುತ್ತಿದ್ದ 5,26,500 ರೂಪಾಯಿ ನಗದು ವಶ
ಲೋಕಸಭಾ ಚುನಾವಣೆ ಪ್ರಯುಕ್ತ ಉತ್ತರ ಮತಕ್ಷೇತ್ರದ ಚಕಪೋಸ್ಟ ಬಳಿ ಗೋಕಾಕನಿಂದ ಬೆಳಗಾವಿಗೆ ಪ್ರಯಾಣಿಸುತ್ತಿರುವ ಕಾರಿನಲ್ಲಿ ದಾಖಲೆಗಳಿಲ್ಲದೆ ಸಾಗುಸುತ್ತಿದ್ದ 5,26,500 ನಗದು ಹಣವನ್ನು ಚಕಪೋಸ್ಟ ತನಿಖಾ ತಂಡದ ಮುಖ್ಯಸ್ಥರಾದ ಹರ್ಷವರ್ಧನ ಅಗಸರ್ ಮತ್ತು ಮಾಳಮಾರುತಿ ಪೋಲೀಸ್ ಠಾಣೆಯ ಸಿಬ್ಬಂದಿ ಅವರು ವಶಕ್ಕೆ ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಸೂಕ್ತ ದಾಖಲೆಗಳನ್ನು ನೀಡಿ ಹಣವನ್ನು ಪಡೆದುಕೊಳ್ಳಬಹುದು. ಇಲ್ಲವಾದರೆ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

About The Author