
ಕರ್ನಾಟಕದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಫಲಿತಾಂಶ ನೋಡೋದಕ್ಕೆ, ಮೊದಲಿಗೆ ತಮ್ಮ ರಿಜಿಸ್ಟರ್ ನಂಬರ್ / ರೋಲ್ ನಂಬರ್ ಹೊಂದಿರಬೇಕು.
ವಿದ್ಯಾರ್ಥಿಗಳು, ಪರೀಕ್ಷಾ ಪ್ರವೇಶ ಪತ್ರದಲ್ಲಿ ನೀಡಿರುವ ರಿಜಿಸ್ಟರ್ ನಂಬರ್ ಮೂಲಕವೇ ಕರ್ನಾಟಕ ಶಾಲೆ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿ ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಬಹುದು.
ಇದಕ್ಕೆ ನೀವು kseab.karnataka.gov.in ಗೆ ಭೇಟಿ ನೀಡಬಹುದು.
SSLC ವಿದ್ಯಾರ್ಥಿಗಳು ತೀವ್ರ ಕುತೂಹಲದಿಂದ ಕಾಯುತ್ತಿದ್ದ ಪರೀಕ್ಷಾ ಫಲಿತಾಂಶ ಇನ್ನೆರಡು ದಿನಗಳಲ್ಲಿ ಬರಲಿದೆ. 2023 & 24ನೇ ಸಾಲಿನಲ್ಲಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ರಿಸಲ್ಟ್ ನೋಡಲು ಕಾಯುತ್ತಿದ್ದಾರೆ.
ಎಸ್‌ಎಸ್‌ಎಲ್‌ಸಿ ರಿಸಲ್ಟ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.
2023 & 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 2750 ಪರೀಕ್ಷಾ ಕೇಂದ್ರಗಳಲ್ಲಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 4.41 ಲಕ್ಷ ಬಾಲಕರು & 4.28 ಲಕ್ಷ ಬಾಲಕಿಯರು ಸೇರಿದ್ದರು.
ಇದೀಗ, ಇವರೆಲ್ಲರ ಭವಿಷ್ಯ ನಿರ್ಧಾರ ಮಾಡುವ ಫಲಿತಾಂಶ ಬಿಡುಗಡೆ ಆಗಲು ದಿನಗಣನೆ ಆರಂಭ ಆಗಿದೆ. ಮೇ 10 ರಂದು ಈಗ ಫಲಿತಾಂಶ ಬಿಡುಗಡೆ ಆಗುವ ನಿರೀಕ್ಷೆ ಇದೆ. ಇನ್ನು ಸಾಮಾನ್ಯ ವಿದ್ಯಾರ್ಥಿಗಳ ಜೊತೆಯಲ್ಲಿ 18,225 ಖಾಸಗಿ ವಿದ್ಯಾರ್ಥಿಗಳು & 41,375 ರೀ ಎಕ್ಸಾಮ್ ಬರೆದಿದ್ದ ವಿದ್ಯಾರ್ಥಿಗಳು ಕೂಡ ಸೇರಿದ್ದಾರೆ.
ಹೀಗಾಗಿ ಇವರೆಲ್ಲರ ಭವಿಷ್ಯ ಮೇ 09 ರಂದು ನಿರ್ಧಾರ ಆಗಲಿದೆ.
ಈ ಮೂಲಕವಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮೇ 09 ರಂದು ನಿರ್ಧಾರ ಆಗಲಿದೆ. ಹಾಗೇ ಫಲಿತಾಂಶವನ್ನ ವೀಕ್ಷಿಸಲು ಕೆಲವು ಕಡೆ ವಿಶೇಷ ವ್ಯವಸ್ಥೆ ಮಾಡುವ ನಿರೀಕ್ಷೆ ಇದೆ.