ಘಟಪ್ರಭಾ ನದಿ ದಾಟುವ ವೇಳೆ ಜನರನ್ನು ಹೊತ್ತು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ ಪಲ್ಟಿ

WhatsApp Group Join Now

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ನದಿ ದಾಟುವ ವೇಳೆ 13 ಜನರನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಮಗುಚಿಬಿದ್ದ ಘಟನೆ ನಡೆದಿದೆ.

ಘಟಪ್ರಭಾ ನದಿ ದಾಟುವ ವೇಳೆ ಆಯತಪ್ಪಿ ನದಿಗೆ ಟ್ರ್ಯಾಕ್ಟರ್ ಉರುಳಿ ಬಿದ್ದಿದೆ. ಟ್ರ್ಯಾಕ್ಟರ್ನಲ್ಲಿ 13 ಜನರಿದ್ದರು. ಅದರಲ್ಲಿ 12 ಜನರು ಈಜಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಓರ್ವ ಕಣ್ಮರೆಯಾಗಿದ್ದಾರೆ.
13 ಜನರು ಅವರಾದಿಯಿಂದ ನಂದಗಾಂವ್ ಗೆ ಟ್ರ್ಯಾಕ್ಟರ್ ಮೇಲೆ ಕುಳಿತುಕೊಂಡು ಕೂಲಿ ಕೆಲಸಕ್ಕೆಂದು‌ ತೆರಳುತ್ತಿದ್ದರು. ಘಟಪ್ರಭಾ ನದಿ ದಾಟಿಕೊಂಡು ಕೂಲಿ ಕೆಲಸಕ್ಕೆ ಹೋಗಬೇಕಿತ್ತು. ಆದರೆ ಈ ವೇಳೆ ಟ್ರೈಲರ್ ಸಮೇತ ಟ್ರ್ಯಾಕ್ಟರ್ ನೀರಿಗೆ ಮಗುಚಿ ಬಿದ್ದಿದೆ.
ಸ್ಥಳಕ್ಕೆ ಕುಲಗೋಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನೀರಲ್ಲಿ ಕಣ್ಮರೆಯಾಗಿರುವ ಓರ್ವನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

About The Author