ಬಾಲೆಹೊಸೂರ ಗ್ರಾಮದಲ್ಲಿ ಮಾನವ ಸರಪಳಿ ವೇಳೆ ಜೇನು ಹುಳುಗಳು ದಾಳಿ

WhatsApp Group Join Now

ಗದಗ ಜಿಲ್ಲೆ ಲಕ್ಷ್ಮೀಶ್ವರ ತಾಲೂಕಿನ ಬಾಲೆಹೊಸೂರ ಗ್ರಾಮದಲ್ಲಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಮಾನವ ಸರಪಳಿ ನಿರ್ಮಾಣ ಮಾಡಿದ ವೇಳೆಯಲ್ಲಿ ವಿದ್ಯಾರ್ಥಿಗಳ ಮೇಲೆ ಜೇನು ಹುಳುಗಳು ದಾಳಿ ನಡೆಸಿವೆ. ಘಟನೆಯಲ್ಲಿ
ಇಬ್ಬರು ಶಿಕ್ಷಕಿಯರ ಮುಖ, ತಲೆ, ಕೈಗೆ ಜೇನು ಹುಳುಗಳು ಕಚ್ಚಿ ಗಾಯಗೊಳಿಸಿವೆ.

ಶಿಗ್ಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ಸರಸ್ವತಿ ಗುಡಿಸಾಗರ, ಸರೋಜಾ ದಿಂಡೂರು ಜೇನು ಹುಳುಗಳು ಕಚ್ಚಿಸಿಕೊಂಡು ಶಿಕ್ಷಕಿಯರಿಗೆ ಸ್ಥಳದಲ್ಲಿ ಇದ್ದ ಶಿರಹಟ್ಟಿ ಕ್ಷೇತ್ರದ ಶಾಸಕ ಸ್ವತಃ ವೈದ್ಯರಾದ ಡಾ. ಚಂದ್ರು ಲಮಾಣಿ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

About The Author