
WhatsApp Group
Join Now
ಅಂತರಾಷ್ಟ್ರೀಯ ಮಟ್ಟದಲ್ಲಿ ಸಂವಹನ ಮಾಡುವಂತ ಹ್ಯಾಮ್ ಸ್ಟೇಷನ್ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆಯಲಾಗಿದೆ.
ಇಲ್ಲಿನ ವಿಜ್ಞಾನ ಶಿಕ್ಷಕ ಕೃಷ್ಣಾ ಜೋಶಿ ಹಾಗೂ ಕುಮಾರಿ ರಫೀದಾ ಖಾಜಾಮೈನುದ್ದಿನ ತಹಶಿಲ್ದಾರ್ ಮತ್ತು ಕುಮಾರ್ ವಿನಯ ಬೂಸರಡ್ಡಿ ವಿದ್ಯಾರ್ಥಿಗಳು ಹ್ಯಾಮ್ ಲೈಸೆನ್ಸ್ ಪಡೆದ್ದಾರೆ, ತುರ್ತು ಸಂದರ್ಭದಲ್ಲಿ ಹಾಗೂ ಪರಿಸರದಲ್ಲಿ ಆಗುವ ಅನಾಹುತದ ಸಂದರ್ಭದಲ್ಲಿ ಸಂದೇಶ ರವಾನಿಸಲು ಉಪಯುಕ್ತವಾದ ಸಂವಹಣ ಎಂದು ವಸತಿ ಶಾಲೆಯ ಪ್ರಾಂಶುಪಾಲ ಶೇಖಪ್ಪ ಅರಸನಗಿ ಹೇಳಿದರು.
ಗುರುವಾರ ಮೊರಾರ್ಜಿ ದೇಸಾಯಿ ವಸತಿ ಹ್ಯಾಮ್ ಸ್ಟೇಷನ್ ನಲ್ಲಿ ಮಾತನಾಡಿ ಅವರು. ಅಂತರಾಷ್ಟ್ರೀಯ ಮಟ್ಟದಲ್ಲಿ ಹ್ಯಾಮ್ ಲೈಸೆನ್ಸ್ ಹೊಂದಿದವರ ಜೊತೆಗೆ ನಿರರ್ಗಳವಾಗಿ ಮಾತನಾಡಲು ಅನುಕೂಲವಾಗಿದೆ. ಶಾಲಾ ಆವರಣದಲ್ಲಿ ಹ್ಯಾಮ್ ಲೈಸೆನ್ಸ್ ಬಳಕೆ ಮಾಡುತ್ತಿರುವುದು ತುಂಬಾ ಸಂತೋಷ್ವನ್ನು ವ್ಯಕ್ತಪಡಿಸಿದರು.