ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ
ರಾಜಾರೋಷವಾಗಿ ನಡೆಯುತ್ತಿದ್ದರು ಅಕ್ರಮ ತಡೆಯಬೇಕಿದ್ದ ಅಧಿಕಾರಿಗಳು ಮಾತ್ರ ಇಲ್ಲಿ ಏನು ನಡೆಯುತ್ತಿಲ್ಲವೆಂಬಂತೆ ಜಾಣ ಕುರುಡುತನ ಪ್ರದರ್ಶನದ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ರಾಮದುರ್ಗ ಪಟ್ಟಣದಲ್ಲಿ 16 ಸಿಸಿ ಟಿವಿ ಕ್ಯಾಮೆರಾ ಇದ್ದರೂ ಕೂಡ ಇಷ್ಟೆಲ್ಲಾ ಅಕ್ರಮ ಮರಳನ್ನು ಟ್ರ್ಯಾಕ್ಟರ್ ಮೂಲಕ ಸಾಗಿಸುವುದು ಬೇಸರದ ಸಂಗತಿಯಾಗಿದೆ.
ಹಾಗಾದರೆ ರಾಮದುರ್ಗದಲ್ಲಿ 16 ಸಿಸಿಟಿವಿ ಕ್ಯಾಮೆರಾ ಇರುವುದು ಯಾಕೆ ಎಂಬುವುದು ಪ್ರಶ್ನೆಯಾಗಿದೆ?

ಅಕ್ರಮ ಮರಳು ದಂಧೆಕೋರರಿಗೆ ಕಡಿವಾಣ ಹಾಕಬೇಕಾದ ಅಧಿಕಾರಿಗಳಿಂದಲೇ ದಂಧೆಕೋರರಿಗೆ ಸಾಥ್ ಸಿಗುತ್ತಿದೆ.
ಸುರೇಬಾನ ಪೋಲಿಸ್ ಠಾಣೆ ಹಾಗೂ ರಾಮದುರ್ಗ ಪೊಲೀಸ ಉಪಾಧೀಕ್ಷಕರ ಕಾರ್ಯಾಲಯ ಮುಂದೆನೇ ಅಕ್ರಮ ಮರಳು ತುಂಬಿದ ಟ್ಯಾಕ್ಟರ್ಗಳು ರಾಜಾರೋಷವಾಗಿ ಹಾದು ಹೋಗುತ್ತಿವೆ.

ರಾಮದುರ್ಗ ತಾಲ್ಲೂಕಿನಲ್ಲಿ ಬಹಳ ವರ್ಷದಿಂದ ಅಕ್ರಮ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಾ ಇದೆ.
ಮಲಪ್ರಭಾ ನದಿಯುವುದಕ್ಕೂ ಚಾಲನೆ ಕಂಡಿದೆ ನದಿ ತೀರದಲ್ಲಿ ಹಾಗೂ ಹಳ್ಳದಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ.
ಮಲಪ್ರಭಾ ನದಿ ಪಾತ್ರದ ಕೆಲವು ಸ್ಥಳದಲ್ಲಿ ಅನಧಿಕೃತವಾಗಿ ಮರಳು ಎತ್ತುವ ಕೆಲಸ ನಡೆಯುತ್ತಿದೆ.
ಇಷ್ಟಾದರೂ ತಾಲೂಕು ಆಡಳಿತ ಅಕ್ರಮ ಮರಳು ದಂಧೆ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಮಾಹಿತಿ ಕೊಟ್ಟಾಗ ಮಾತ್ರ ಕಾಟಾಚಾರಕ್ಕಾಗಿ ಹೋಗಿ ಅಕ್ರಮ ಮರಳನ್ನು ಜಪ್ತಿ ಮಾಡುತ್ತಾರೆ.
ಅಕ್ರಮ ಮರಳು ಜಪ್ತಿ ಮಾಡಿದ ನಂತರ ಕೇವಲ ಎರಡು ದಿನ ಮಾತ್ರ ಬಂದು ಆಗುತ್ತದೆ ಇದಾದ ನಂತರ ಮತ್ತೆ ರಾಜಾರೋಷವಾಗಿ ಅಕ್ರಮ ಮರಳು ದಂಧೆ ನಡೆಯುತ್ತದೆ.
ರಾತ್ರಿ ಹೊತ್ತು ಸುರೇಭಾನ, ಮುಳ್ಳೂರು, ಕಲ್ಲೂರು, ಕಿತ್ತೂರು ಹಾಗೂ ರಾಮದುರ್ಗ ಪಟ್ಟಣದಲ್ಲಿ ಬೀಟ್ ಪೊಲೀಸರು ಏನು ಮಾಡುತ್ತಾರೆ ಎಂಬುವುದು ಸಾರ್ವಜನಿಕರ ಪ್ರಶ್ನೆ ಆಗಿದೆ?
ರಾಮದುರ್ಗ ತಾಲೂಕಿನ ಹೋಲಿಗೊಪ್ಪ, ತುರನೂರು, ಸುರೇಬಾನ, ಕೊಳಚಿ, ಅವರಾದಿ,
ಗೊನ್ನಾಗರ, ಕಲಾಲ, ಕಿತ್ತೂರು, ಕಲ್ಲೂರು ಮುಳ್ಳೂರು,ಚಿಪ್ಪಲಕಟ್ಟಿ, ಉಜ್ಜಿನ ಕೊಪ್ಪ, ಕಟ್ಟಕೋಳ, ಕೆ ಜುನಿಪೇಠ, ಹಳೆ ತೊರಗಲ, ಸಂಗಳ, ಸೇರಿದಂತೆ ಇನ್ನೂ ಅನೇಕ ಗ್ರಾಮಗಳಲ್ಲಿ ಮಲಪ್ರಭಾ ಹಾಗೂ ಹಳ್ಳದ ಪಾತ್ರದಲ್ಲಿ ಮರಳು ಎತ್ತುವ ಕೆಲಸ ನಡೆದಿದೆ.
ಮರಳುಕೋರರಿಗೆ ಯಾರ ಭಯವಿಲ್ಲದೆ ಅಕ್ರಮ ಮರಳುದಂಧೆ ನಡೆಸಿ
ರಾಮದುರ್ಗ ತಾಲೂಕಿನ ಸಂಪನ್ಮೂಲ ಲೂಟಿ ಮಾಡುತ್ತಿರುವುದು ಖೇದಕರ ಸಂಗತಿಯಾಗಿದೆ.
ಕೆಲವೊಂದು ಕಡೆ ಖಾಸಗಿ ಜಮೀನಿನಲ್ಲಿ ಮರಳು ತೆಗೆಯುವಂತಿಲ್ಲ ಎಂಬ ನಿಯಮಗಳು ಇದ್ದರೂ ಕೂಡ ಸರಕಾರದ ಆದೇಶವನ್ನು ಗಾಳಿಗೆ ತೂರಿ ತಮಗೆ ಇಷ್ಟ ಬಂದ ಹಾಗೆ ಮರಳು ತುಂಬುವ ಕೆಲಸ ನಡೆಯುತ್ತಿದೆ.
ಹಗಲು ರಾತ್ರಿ ಎನ್ನದೇ ಬೇಕಾಬಿಟ್ಟಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ನಡೆಯುತ್ತಿದ್ದು; ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ. ಎಸ್. ಗುಳೇದ ಇತ್ತ ಗಂಭೀರ ಗಮನ ಹರಿಸಬೇಕಿದೆ