WhatsApp Group Join Now

ಕೂಡ್ಲಿಗಿ , ಹೆಚ್ ಬಿ ಹಳ್ಳಿ ಕಳ್ಳತನ ಪ್ರಕರಣಗಳನ್ನು ಭೇದಿಸಿದ – ಕೂಡ್ಲಿಗಿ ಪೊಲೀಸರು

ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣ ಸೇರಿದಂತೆ, ಹಗರಿಬೊಮ್ಮನಹಳ್ಳಿ ಯಲ್ಲಿ ಜರುಗಿರುವ. ಕಳ್ಳತನಗಳ ಪ್ರಕರಣಗಳನ್ನು ಕೂಡ್ಲಿಗಿ ಪೊಲೀಸರು ಭೇದಿಸಿ, ಮೂವರು ಕಳ್ಳರನ್ನು ಬಂಧಿಸಿ ಅವರಿಂದ ಭಾರೀ ಬೆಲೆಯ ಆಭರಣಗಳನ್ನು ಜಪ್ತಿ ಮಾಡಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ಪಟ್ಟಣದ, 1 ನೇ ವಾರ್ಡ್ ಶ್ರೀಊರಮ್ಮ ದೇವಿ ಪಾದಗಟ್ಟೆ ಹತ್ತಿರದ ಗಲ್ಲಿ ವಾಸಿಗಳು. ಹಾಗೂ ನ್ಯಾಯಾಂಗ ಇಲಾಖೆಯ ನೌಕರರೋರ್ವರ, ಮನೆ ಕಳ್ಳತನ ಪ್ರಕರಣ ಒಳಗೊಂಡಂತೆ. ನೆರೆ ತಾಲೂಕು ಹಗರಿಬೊಮ್ಮನಹಳ್ಳಿಯಲ್ಲಿ ಜರುಗಿರುವ, ಕಳ್ಳತನಗಳಲ್ಲಿ ಭಾಗಿಯಾಗಿದ್ದಾರೆನ್ನಲಾದ. ಮತ್ತು ರಾಜ್ಯಾದ ಹಲವೆಡೆಯ ಕೆಲ ಠಾಣೆಗಳ ವ್ಯಾಪ್ತಿಯಲ್ಲಿ ಜರುಗಿರುವ, ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುವ. ಮೂವರು ಕುಖ್ಯಾತ ಕಳ್ಳರನ್ನು ಕೂಡ್ಲಿಗಿ ಪೊಲೀಸರು ಬಂಧಿಸಿದ್ದಾರೆ, ಅವರು ಕದ್ದಿರುವ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಿಕೊಂಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಠ‍ಾಣಾಧಿಕಾರಿಗಳು, ಅವರ ಉನ್ನತಾಧಿಕಾರಿಗಳ ಮಾರ್ಗದರ್ಶನದಂತೆ ಪತ್ರಿಕಾಗೋಷ್ಠಿ ನಡೆಸಿ ಪ್ರಕಟಣೆ ನೀಡಿದ್ದಾರೆ. ಅವಳಿ ತಾಲೂಕುಗಳ ವಿವಿದೆಡೆಯ ನಾಲ್ಕು ಮನೆಗಳ ಕಳ್ಳತನ
ಪಟ್ಟಣದ 1 ನೇ ವಾರ್ಡ್ ನಲ್ಲಿ ಜರುಗಿದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೂಡ್ಲಿಗಿ ಪೊಲೀಸರು. ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹರಿಬಾಬು ರವರ ನಿರ್ಧೇಶನದಂತೆ, ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ದೊಡ್ಮನಿ ಮಾರ್ಗದರ್ಶನದಲ್ಲಿ. ಸಿಪಿಐ ಪ್ರಹ್ಲಾದ್ ಆರ್ ಚೆನ್ನಗಿರಿ , ಹಾಗೂ ಹೆಚ್.ಬಿ.ಹಳ್ಳಿ ಸಿಪಿಐ ವಿಕಾಸ್ ಪಿ ಲಂಬಾಣಿ ರವರ ನೇತೃತ್ವದಲ್ಲಿ. ಕೂಡ್ಲಿಗಿ ಪಿಎಸ್ಐ ಸಿ.ಪ್ರಕಾಶ್ ಹಾಗೂ ಪೊಲೀಸ್ ಸಿಬ್ಬಂದಿಯವರು, ಮನೆ ಕಳ್ಳತನ ಪ್ರಕರಣಗಳನ್ನು ಭೇದಿಸಿದ್ದಾರೆ. ಮೂವರು ಕುಖ್ಯಾತ ಕಳ್ಳರ ಬಂಧನ- ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆನ್ನಲಾದ , ಆರೋಪಿಗಳಾದ ಹೆಚ್.ಬಿ.ಹಳ್ಳಿ ಪಟ್ಟಣದ ರಾಮ್ ರಹೀಮ್ ನಗರವಾಸಿ. ಎಂ ಇಂದ್ರ ಅಲಿಯಾಸ್ ದುರ್ಗಪ್ಪ ತಂದೆ ನಾಗೇಶ್ , 25 ವರ್ಷ ಬಟ್ಟೆ ವ್ಯಾಪಾರಿ. ಮತ್ತು ಹೆಚ್.ಬಿ.ಹಳ್ಳಿ ತಾಲೂಕಿನ ಯಡ್ರಮ್ಮನಹಳ್ಳಿ ಗ್ರಾಮ ವಾಸಿ, ಕರಿಮಣಿ ಮಾಲೆ ವ್ಯಾಪಾರಿಯಾದ. ವಲ್ಲಿ ಅಲಿಯಾಸ್ ಸುಭಾಷ್ ತಂದೆ ವೆಂಕಟೇಶ್ 23 ವರ್ಷ, ಮರಿಯಮ್ಮನಹಳ್ಳಿ ಪಟ್ಟಣದ ಸಂತೆ ಮಾರ್ಕೆಟ್ ಹತ್ತಿರದ, ಪಾದಗಟ್ಟೆ ಗುಡಿ ಹತ್ತಿರದ ವಾಸಿಯಾದ. ಡ್ರೈವರ್ ಗೌಡ ತಂದೆ ಲೇಸನ್ ಗೌಡ 34 ವರ್ಷ, ಈ ಮೂವರು ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ರಾಜ್ಯದ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ರಾಜ್ಯದ ಹಲವೆಡೆಯ 10-15 ಠಾಣೆಗಳಲ್ಲಿ. ಇವರ ವಿರುದ್ಧ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಗಳಿದ್ದು, ವಾರೆಂಟ್ ಗಳು ಬಾಕಿ ಇರುತ್ತವೆ ಎಂದು ಠಾಣಾಧಿಕಾರಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. 22ಲಕ್ಷರೂ ಬೆಲೆಯ ವಸ್ತುಗಳ ಜಪ್ತಿ– ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯ 2 ಕಳ್ಳತನ ಪ್ರಕರಣಗಳು, ಹಾಗೂ ಹಗರಿಬೊಮ್ಮನಹಳ್ಳಿ ಠಾಣೆ ವ್ಯಾಪ್ತಿಯ 2 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು. ಈ ನಾಲ್ಕು ಮನೆ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳು ಕದ್ದಿದ್ದ, ಒಟ್ಟು 215 ಗ್ರಾಂ ಬಂಗಾರದ ಆಭರಣಗಳು. 2 ಕೆಜಿ ಬೆಳ್ಳಿ ಆಭರಣಗಳು ಹಾಗೂ 2ಲಕ್ಷ ರೂ ಬೆಲೆಯ, ಒಂದು ಸ್ವಿಫ್ಟ್ ಡಿಸೈರ್ ಕಾರು ಸೇರಿದಂತೆ. ಒಟ್ಟು 22,00,750 ರೂಪಾಯಿ ಬೆಲೆಬಾಳುವ, ವಸ್ತುಗಳನ್ನು ಜಪ್ತಿ ಮಾಡಿಕೊಂಡಿಕೊಂಡಿರುವುದಾಗಿ ಪ್ರಕಟಣೆಯಲ್ಲಿ ವಿವರಿಸಲಾಗಿದೆ. SP ಯವರಿಂದ ಅಭಿನಂದನೆ
ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ, ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ದೊಡ್ಮನಿ, ಸಿಪಿಐಗಳಾದ ಪ್ರಹ್ಲಾದ್ ಆರ್ ಚನ್ನಗಿರಿ, ಹಾಗೂ ವಿಕಾಸ್ ಪಿ ಲಂಬಾಣಿ. ಪಿಎಸ್ ಐ ಸಿ.ಪ್ರಕಾಶ್ ರವರನ್ನು. ಮತ್ತು ಕಾರ್ಯಚರಣೆಯಲ್ಲಿ ಭಾಗಿಯಾಗಿರುವ, ಅಪರಾಧ ಪತ್ತೆ ವಿಭಾಗದ ಪೊಲೀಸ್ ಸಿಬ್ಬಂದಿಯವರಾದ, ಎಎಸ್ಐ ಮುಜವರ್ ಭಾಷಾ, ಮುಖ್ಯಪೇದೆಗಳಾದ ತಿಪ್ಪೇಸ್ವಾಮಿ , ಬದ್ದಿ ಬಸಪ್ಪ , ಬಂಡೆ ರಾಘವೇಂದ್ರ , ಮಂಜುನಾಥ, ಬಸವರಾಜ, ಕುಮಾರ ಪತ್ರಿ, ರಾಜೇಂದ್ರ ಪ್ರಸಾದ , ಹಸಾನುಲ್ಲಾ, ಇರ್ಷಾದ್, ಅಂಜಿನಪ್ಪ, ಕೊಟ್ರೇಶ್, ಸೂಲದಳ್ಳಿ ಹಂಪಣ್ಣ ,ಮಲ್ಲಿಕಾರ್ಜುನ, ಹೇಮಲತಾ , ಬಾಗಳಿ ಕೊಟ್ರೇಶ್ ರವರನ್ನು. ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹರಿಬಾಬು ರವರು, ಅಭಿನಂದಿಸಿದ್ದು ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆಂದು ತಿಳಿದು ಬಂದಿದೆ.

About The Author