ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಹಿಂದುಗಳ ಹತ್ಯೆ ಹಾಗೂ ರಾಜ್ಯದ ಕೆಲ ಕಡೆಗಳಲ್ಲಿ ಪವಿತ್ರ ಜನಿವಾರ ಧರಿಸಿದ ವಿದ್ಯಾರ್ಥಿಗಳನ್ನು ಸಿ.ಇ.ಟಿ. ಪರೀಕ್ಷಾ ಬರೆಯುವದಕ್ಕೆ ಅವಕಾಶ ನೀಡದೇ ಇರುವ ಕ್ರಮವನ್ನು ಖಂಡಿಸಿ ಸ್ಥಳೀಯ ವಿಶ್ವಹಿಂದು ಪರಿಷತ್ ಹಾಗೂ ಭಜರಂಗದಳ ಹಾಗೂ ಹಲವು ಹಿಂದೂಪರ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಇಬ್ಬರು ಕನ್ನಡಿಗರು ಸೇರಿದಂತೆ 27 ಅಮಾಯಕ ಜನರು ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಅಲ್ಲಿ ಭಯದ ವಾತಾವತವರಣ ಉಂಟಾಗಿದೆ. ವಿಶೇಷವಾಗಿ ಪುರುಷರನ್ನು ಹಿಂದುಗಳೆಂದು ಖಚಿತಪಡಿಸಿಕೊಂಡು ಗುಂಡಿನದಾಳಿ ಮಾಡಿ ಕೊಲೆ ಮಾಡಿದ್ದು ಅತ್ಯಂತ ಖಂಡನೀಯ. ಶಾಂತಿ ನೆಲೆಸಿದ ಕಾಶ್ಮೀರದಲ್ಲಿ ಸಹಿಸದ ಉಗ್ರರು ಮನುಷತ್ವ ಮರೆತು ದಾಳಿ ಮಾಡಿದ್ದು ಭಾರತಾಂಬೆಯ ಮಕ್ಕಾಳಾದ ನಾವು ಸಹಿಸುವದಿಲ್ಲ. ಈ ಘಟನೆಯಿಂದ ಪ್ರತಿಯೊಬ್ಬ ಪ್ರಜೆಗೂ ನೋವುಂಟು ಮಾಡಿ ಕಿಚ್ಚನ್ನು ಎಬ್ಬಿಸಿದೆ. ಹಿಂಸೆಯ ಬೀಜವನ್ನು ಬಿತ್ತುರುವವರನ್ನು ಪತ್ತೆ ಹಚ್ಚಿ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.
ಕರ್ನಾಟಕ ಸರಕಾರ ಶಿವಮೊಗ್ಗ, ಬೀದರ ಹಾಗೂ ಧಾರವಾಡ ಸಿ.ಇ.ಟಿ. ಪರೀಕ್ಷಾ ಕೇಂದ್ರಗಳಲ್ಲಿ ಪವಿತ್ರ ಜನಿವಾರ ಧರಿಸಿದ ವಿದ್ಯ್ಯಾರ್ಥಿಗಳನ್ನು ಸಿ.ಇ.ಟಿ. ಪರೀಕ್ಷಾ ಬರೆಯುವದಕ್ಕೆ ಅವಕಾಶ ನೀಡದೇ ಇರುವುದು ಮತ್ತು ವಿದ್ಯ್ಯಾರ್ಥಿಗಳ ವಿರೋಧದ ನಡುವೆಯೂ ಜನಿವಾರ ಕತ್ತರಿಸಿ ತೆಗೆಯಿಸಿದ ಸರಕಾರ ಕ್ರಮ ಅತ್ಯಂತ ಖಂಡನೀಯ ಹಾಗೂ ಅಕ್ಷಮ್ಯ ಅಪರಾಧ. ತಕ್ಷಣದಲ್ಲಿ ತಪ್ಪು ಮಾಡಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಹಿಂದುಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಮನವಿ ಮೂಲಕ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ವಿಚಪಿ ಮುಖಂಡ ಶ್ರೀ ವಿಜೇಯೆಂದ್ರ ತೀರ್ಥ ಜೋಶಿ ಹಾಗೂ ತಾಲೂಕಾ ವಿಚಪಿ ಅಧ್ಯಕ್ಷ ಶ್ರೀ ಪ್ರಕಾಶ್ ಸೂಳಿಭಾವಿ ಶ್ರೀ ವೆಂಕಟೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀ ಲಲ್ಲು ರಾಮ ಮಹಾರಾಜ ಉಪಾಧ್ಯಕ್ಷರಾದ ಶ್ರೀ ಶ್ರೀನಿವಾಸ ಕುರುಡಗಿ ವಕೀಲರು. ಶ್ರೀ ಅಮರ ದೂತ .ಶ್ರೀ ವಿಠ್ಠಲ ಮುರುಡಿ. ಶ್ರೀ ಸಿದ್ದಣ್ಣ ಸೂಳಿಭಾವಿ.
ಬ್ರಾಹ್ಮಣ ಸಮಾಜದ. ಶ್ರೀ ಗಿರೀಶ್ ಕುಲಕರ್ಣಿ .ಎಸ್ ಐ ಕಾಳೆ .ಅಪ್ಪಣ್ಣ ಹಡಪದ. ಗುರುನಾಥ ಅಕ್ಷರದ. ನಾಮದೇವ ಸೋರಿ. ಸತ್ಸಂಗ ಪ್ರಮುಖರು ಶ್ರೀ ಮಂಗಲಾ. ಸೂಳಿಭಾವಿ ಮತ್ತು ಸತ್ಸಂಗ ಮಾತೆಯರು. ಹಾಗೂ ಮಾತ್ರ ಶಕ್ತಿಯ ತಂಡದವರು ಹಾಗೂ ಹಲವಾರು ಹಿಂದೂ ನಾಗರಿಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು