WhatsApp Group
Join Now
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಪೊಲೀಸ್ ಠಾಣೆ ವತಿಯಿಂದ ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆ ಕಾರ್ಯಕ್ರಮ ಜರಗಿತು.
ಈ ವೇಳೆ ಎಎಸ್ಐ ರವಿ ಎಂ ಯರಗಟ್ಟಿ ಮಾತನಾಡಿ ಹಿಂದೂ–ಮುಸ್ಲಿಮ್ ಸೌಹಾರ್ದಕ್ಕೆ ಹೆಸರಾಗಿರುವ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು.
ಪ್ರತಿವರ್ಷದಂತೆ ಈ ವರ್ಷವೂ ಸಹ ಮೊಹರಂ ಹಬ್ಬವನ್ನು ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಶಾಂತರೀತಿಯಲ್ಲಿ ಮೊಹರಂ ಆಚರಣೆ ಮಾಡುವಂತೆ ಜನತೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಹಿಂದೂ–ಮುಸ್ಲಿಮ್ ಸಮಾಜದ ಮುಖಂಡರು ಇದ್ದರು.