ರಾಮದುರ್ಗ,ಬಾದಾಮಿ: ಮಲಪ್ರಭಾ ನದಿಗೆ ನೀರು ಬಿಡಲು ರೈತರಿಂದ ಒತ್ತಾಯ

WhatsApp Group Join Now

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿಯ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ನೀರು ಬಿಡಬೇಕೆಂದು ರಾಮದುರ್ಗ ಹಾಗೂ ಬದಾಮಿ ತಾಲೂಕಿನ ರೈತರು ಜಲ ಸಂಪನ್ಮೂಲ ಇಲಾಖೆ ಕರ್ನಾಟಕ ನೀರಾವರಿ ನಿಗಮ ನಿಯಮಿತ ಅಧಿಕ್ಷರ ಅಭಿಯಂತರರ ಕಾರ್ಯಾಲಯ ಮಲಪ್ರಭಾ ಎಡದಂಡೆ ಕಾಲುವೆ ನಿರ್ಮಾಣ ವೃತ್ತ ನವಿಲುತೀರ್ಥ ಆಡಳಿತ ಅಧಿಕಾರಿ ಮಮತಾ ಮೂಲಿಮನಿ, ಹಾಗೂ ವಿಭಾಗ ಅಧಿಕಾರಿ ಕಿರಣ ಗುಬ್ಬನ್ನವರ್ ಇವರಿಗೆ ಮಲಪ್ರಭಾ ನದಿಗೆ ಮತ್ತು ಎಡದಂಡೆ ಕಾಲುವೆಗೆ ಜಾನುವಾರಗಳಿಗೆ ಕುಡಿಯಲಿಕ್ಕೆ ಮತ್ತು ಕೆರೆ ಕಟ್ಟೆ ಗಳನ್ನು ತುಂಬಿಸಿಕೊಳ್ಳಲಿಕ್ಕೆ ನೀರು ಬಿಡಬೇಕೆಂದು ರೈತರಿಂದ ಒತ್ತಾಯಿಸಿ ಮನವಿ ಸಲ್ಲಿಸಿದರು.

ರೋನಿ ಮಳೆ ಸರಿಯಾದ ಸಮಯಕ್ಕೆ ಆಗಿದ್ದರಿಂದ ರೈತರು ತಮ್ಮ ಜಮಿನುಗಳನ್ನು ಸಂಪೂರ್ಣವಾಗಿ ಬಿತ್ತನೆ ಮಾಡಿದ್ದಾರೆ ಆದರೆ ಈಗ ಮಳೆರಾಯ ಕೈ ಕೊಟ್ಟಿದ್ದರಿಂದ ರೈತರು ಬಿತ್ತನೆ ಮಾಡಿದ ಬೆಳೆಗಳು ನೀರು ಇಲ್ಲದೆ ಸಂಪೂರ್ಣವಾಗಿ ನಾಶವಾಗುತ್ತಿದ್ದರೆ ಮತ್ತು ಜಾನುವಾರುಗಳಿಗೆ ಕುಡಿಯಲಿಕ್ಕೆ ನೀರಿಲ್ಲದೆ ಪರದಾಡುತ್ತಿದ್ದಾವೆ.

ಆದ್ದರಿಂದ ಮಲಪ್ರಭಾ ನದಿಗೆ ಮತ್ತು ಎಡದಂಡೆ ಕಾಲುವೆಗೆ ನೀರು ಬಿಡಬೇಕೆಂದು ಹಲವಾರು ಬಾರಿ ಮನವಿ ಮಾಡಿಕೊಂಡರು ಯಾವುದೇ ರೀತಿ ನ್ಯಾಯ ಸಿಕ್ಕಿಲ್ಲ. ಮತ್ತು ಬಾದಾಮಿ ತಾಲೂಕಿನ ಶಾಸಕರಾದ ಬಿ ಬಿ ಚಿಮ್ಮನಕಟ್ಟಿ ಯವರಿಂದ ಮತ್ತು ರಾಮದುರ್ಗ ತಾಲೂಕಿನ ಶಾಸಕ ಅಶೋಕ ಮ ಪಟ್ಟಣ ರವರಿಂದ ಅಷ್ಟೇ ಅಲ್ಲದೆ ಬಾಗಲಕೋಟಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಆರ್ ಬಿ ತಿಮ್ಮಾಪೂರ ರವರಿಂದ ದೂರವಾಣಿ ಕರೆ ಮೂಲಕ ಹೇಳಿಸಿದರು ಕೂಡಾ ಅದಕ್ಕೆ ಯಾವುದೇ ರೀತಿ ಕವಡೆ ಕಾಸಿನ ಕಿಮ್ಮತ್ತು ರೈತರಿಗೆ ಸಿಕ್ಕಿಲ್ಲ.

ತಮ್ಮ ಇಲಾಖೆಯ ಅಧಿಕಾರಿಗಳಿಗೆ ಹಲವಾರು ಬಾರಿ ರೈತರು ದೂರವಾಣಿ ಮೂಲಕ ಕೇಳಿಕೊಂಡರು ನಾಳೆ ಬಿಡುತ್ತೇವೆ ನಾಡಿದ್ದು ಬಿಡುತ್ತೇವೆ ಇದೇ ರೀತಿ ಕಾರಣ ಹೇಳುತ್ತಾ ಬಂದಿದ್ದಾರೆ. ಆದರೆ ಅತೀ ಶೀಘ್ರದಲ್ಲಿ ನೀರು ನದಿಗೆ ಮತ್ತು ಕಾಲುವೆಗೆ ನೀರು ಬಿಡದೆ ಹೋದರೆ ಸಾಮೂಹಿಕವಾಗಿ ಆಣೆಕಟ್ಟು ಮುಂಬಾಗದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧರಾಗಿದ್ದೇವೆ.

ಈ ಮೇಲ್ಕಾಣಿಸಿದ ರೈತರ ವಿಷಯ ಅರಿತುಕೊಂಡು ಅಧ್ಯಕ್ಷರಾದ ಲಕ್ಷ್ಮೀ ಹೆಬ್ಬಾಳ್ಳರ (ಸಚಿವೆ) ರವರು ತಕ್ಷಣ ಸ್ಪಂಧಿಸಬೇಕಾಗಿ ವಿನಂತಿ

ಹಾಗೂ ದಯಾಳುಗಳಾದ ತಾವು ಅಂತಹ ಘಟನೆಗಳಿಗೆ ಅಥವಾ ಗಲುಬೆಗಳಿಗೆ ಅನು ಮಾಡಿಕೊಡದೆ ತಕ್ಷಣ ಈ ರೈತರ ಸಮಸ್ಯೆಗೆ ನ್ಯಾಯ ವದಗಿಸಿ ಕೊಡಬೇಕೆಂದು ಆಗ್ರಹಿಸಿದರು.

ಈ ವೇಳೆ ವಾಯ ಎಸ್ ದೇಸಾಯಿಗೌಡರು, ಪಿಕೆಪಿಎಸ್ ಸದಸ್ಯರು, ಎಸ್ಎಂ ಶಿವನ ಗೌಡ್ರ ಮಾಜಿ ಗ್ರಾಮ ಪಂಚಾಯತ್ ಸದಸ್ಯರು, ಎಚ್ ಬಿ ಪಾಟೀಲ್ ಮಾಜಿ ಪಿಕೆಪಿಎಸ್ ಸದಸ್ಯರು, ಎಸ್ ಎಮ್ ಕುಲಕರ್ಣಿ, ರಾಮದುರ್ಗ ಹಾಗೂ ಬದಾಮಿ ತಾಲೂಕಿನ ರೈತರು ಪಾಲ್ಗೊಂಡಿದ್ದರು.

About The Author