ರಾಮದುರ್ಗ | ವಾಜಪೇಯಿ ನಗರದ 5ನೇ ದಿನದ ಗಣಪತಿ ವಿಸರ್ಜನೆ.

WhatsApp Group Join Now

ಬೆಳಗಾವಿ ಜಿಲ್ಲೆ, ರಾಮದುರ್ಗ ಪಟ್ಟಣದ ವಾಜಪೇಯಿ ನಗರದಲ್ಲಿ ಗಣೇಶೋತ್ಸವ ನಿಮಿತ್ತ ಆ. 27ರಂದು ಪ್ರತಿಷ್ಠಾಪಿಸಲಾಗಿದ್ದ ಹಲವು ಗಣಪತಿ ಮೂರ್ತಿಗಳನ್ನು ಐದನೇ ದಿನವಾದ ಭಾನುವಾರ ವಿಸರ್ಜಿಸಲಾಯಿತು.

ಪಟ್ಟಣದ ಸಾರ್ವಜನಿಕ ಸ್ಥಳಗಳು ಹಾಗೂ ಮನೆಗಳಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಮನೆಗಳಲ್ಲಿ ಪ್ರತಿಷ್ಠಾಪಿಸಲಾದ ಮೂರ್ತಿಗಳನ್ನು ಕುಟುಂಬದ ಸದಸ್ಯರೆಲ್ಲರೂ ಸೇರಿಕೊಂಡು ವಿಸರ್ಜನಾ ಸ್ಥಳಕ್ಕೆ ಕೊಂಡೊಯ್ದು ವಿಸರ್ಜಿಸಿದರು.

ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ಟ್ರ್ಯಾಕ್ಟರಗಳ ಮೂಲಕ ವಿಸರ್ಜನಾ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಮೆರವಣಿಗೆಯುದ್ದಕ್ಕೂ ಜಮಾಯಿಸಿದ್ದ ಯುವಜನತೆ, ಕುಣಿತದೊಂದಿಗೆ ಪಟಾಕಿಗಳ ಸದ್ದು ಸಹ ಜೋರಾಗಿತ್ತು.

ರಾಮದುರ್ಗ ಪಟ್ಟಣದಲ್ಲಿರುವ ಮಲಪ್ರಭಾ ನದಿ, ಹಾಗೂ ಹೊರವಲಯದ ಘಟಕನೂರ ನದಿಯಲ್ಲಿ ಅಲ್ಲಿಯೇ ಬಹುತೇಕ ಮೂರ್ತಿಗಳ ವಿಸರ್ಜನೆಯಾಯಿತು.

ತಾಲ್ಲೂಕಿನಲ್ಲಿ ಮೂರ್ತಿಗಳ ವಿಸರ್ಜನೆ ಶಾಂತಿಯುತವಾಗಿ ನಡೆಯಿತು. ಎಲ್ಲ ಕಡೆಯೂ ಪೊಲೀಸರು, ಬಿಗಿ ಭದ್ರತೆ ಕೈಗೊಂಡಿದ್ದರು.

About The Author