ಬೆಟಗೇರಿ:ಕೆನರಾ ಬ್ಯಾಂಕ್‌ನಲ್ಲಿ ಸಾಲ ಮರುಪಾವತಿ ಮತ್ತು ಸ್ವ ಸಹಾಯ ಸಂಘಗಳ ಮೇಳದ ಕಾರ್ಯಕ್ರಮ.

WhatsApp Group Join Now

ಸಕಾಲದಲ್ಲಿ ಸಾಲ ಮರುಪಾವತಿಸಿ ಬ್ಯಾಂಕಿನ ಪ್ರಗತಿಗೆ ಸಹಕರಿಸಿ: ಎಮ್.ಪನೀಶಾಯಣ್ಣ
ಬೆಟಗೇರಿ:ವಿವಿಧ ಯೋಜನೆಗಳಡಿಯಲ್ಲಿ ರೈತರಿಗೆ ಮತ್ತು ಸ್ವಸಹಾಯ ಸಂಘಗಳಿಗೆ ಹಾಗೂ ಗ್ರಾಹಕರಿಗೆ, ಗ್ರಾಮೀಣ ವಲಯದ ಕೆನರಾ ಬ್ಯಾಂಕನಿಂದ ದೊರಕುವ ಸಾಲ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಚಿಕ್ಕೋಡಿ ಕೆನರಾ ಬ್ಯಾಂಕ್ ರಿಜನಲ್ ಆಫೀಸ್‌ನ ಎಜಿಎಮ್ ಎಮ್.ಪನೀಶಾಯಣ್ಣ ಹೇಳಿದರು.

ಗೋಕಾಕ ತಾಲೂಕಿನ ಬೆಟಗೇರಿ ಕೆನರಾ ಬ್ಯಾಂಕ್ ಶಾಖೆಯ ವತಿಯಿಂದ ಇತ್ತೀಚೆಗೆ ನಡೆದ ಸಾಲ ಮರುಪಾವತಿ ಮತ್ತು ಸ್ವ ಸಹಾಯ ಸಂಘಗಳ ಮೇಳ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಬ್ಯಾಂಕಿನಿAದ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಿ ಬ್ಯಾಂಕಿನ ಪ್ರಗತಿಗೆ ಸಹಕಾರ ನೀಡಬೇಕು ಎಂದರು.
ಕರ್ನಾಟಕ ಹಸಿರು ಸೇನೆ ರೈತ ಸಂಘ ರಾಜ್ಯಾಧ್ಯಕ್ಷ ಗಣೇಶ ಇಳಿಗೇರ ಮಾತನಾಡಿ, ಬೆಟಗೇರಿ ಕೆನರಾ ಬ್ಯಾಂಕ್ ಶಾಖೆ ವ್ಯಾಪ್ತಿಯ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ರೈತರು, ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ಗ್ರಾಹಕರು, ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಕೇವಲ ಸಾಲ ಪಡೆದರೆ ಬ್ಯಾಂಕಿನ ಪ್ರಗತಿ ಸಾಧ್ಯವಾಗುವುದಿಲ್ಲಾ, ವಿವಿಧ ಯೋಜನೆಯಡಿಯಲ್ಲಿ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಬ್ಯಾಂಕಿನ ಪ್ರಗತಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.
ಬೆಟಗೇರಿ ಕೆನರಾ ಬ್ಯಾಂಕ್ ಶಾಖೆಯ ಮ್ಯಾನೇಜರ್ ಜಗದೀಶ ಜಾಧವ ಪ್ರಾಸ್ತಾವಿಕವಾಗಿ ಮಾತನಾಡಿ, ಕೆನರಾ ಬ್ಯಾಂಕಿನಿAದ ದೊರಕುವ ವಿವಿಧ ಯೋಜನೆಯ ಸಾಲ, ಸಹಾಯ ಸೌಲಭ್ಯಗಳು, ಸಾಲ ಮರು ಪಾವತಿ ಕುರಿತು ತಿಳಿಸಿದ ಬಳಿಕ ಎಲ್ಲರಿಗೂ ಸಿಹಿ ವಿತರಿಸಲಾಯಿತು. ಈ ವೇಳೆ ಸಾಕಷ್ಟು ಜನ ಸಾಲಗಾರರು ತಮ್ಮ ಸಾಲ ಮರುಪಾವತಿಸಿದರು.
ವಸೂಲಾತಿ ವಿಭಾಗದ ಮ್ಯಾನೇಜರ್ ದಯಾನಂದ ಸ್ವಾಮಿ, ಆಫೀಸರ್ ಮಲಿಕನೂರ, ಮಹಾದೇವ ಗುಡೇರ, ಮುತ್ತೆಪ್ಪ ಕುರುಬರ, ಸ್ಥಳೀಯ ಕೆನರಾ ಬ್ಯಾಂಕಿನ ಪೀಲ್ಡ್ ಆಫೀಸರ್ ದಿನೇಶ ಕುಮಾರ, ಪೃಥ್ವಿ ರಡ್ಡಿ, ನರೇಂದ್ರ ಗಾಡೇಕರ್, ಸಿದ್ದಲಿಂಗಪ್ಪ ವಡೇರ, ಶಿವಾನಂದ ಸಿಂದೂಗಿ, ಮಹಾದೇವ, ರಮೇಶ ಪಾಟೀಲ, ಮಹೇಶ ಪತ್ತಾರ, ಬಸವರಾಜ ಮಾಳಿ, ಬೆಟಗೇರಿ ಕೆನರಾ ಬ್ಯಾಂಕ್ ಶಾಖೆ ವ್ಯಾಪ್ತಿಯ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ರೈತರು, ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ಬೆಟಗೇರಿ ಕೆನರಾ ಬ್ಯಾಂಕ್ ಶಾಖೆಯ ಸಿಬ್ಬಂದಿ, ಗ್ರಾಹಕರು, ಸಾರ್ವಜನಿಕರು, ಇತರರು ಇದ್ದರು.

About The Author