ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇನಾಂ ಗೋನಕೊಪ್ಪ ಗ್ರಾಮದಲ್ಲಿ ಲಿಂಗರಾಜ ದೇಸಾಯಿ ಅವರ ಟ್ರಸ್ಟಿನ ಆಸ್ತಿಯಲ್ಲಿ ಅಕ್ರಮವಾಗಿ ಹಗಲು ಹೊತ್ತಿನಲ್ಲಿ ಮರಂ( ಮಣ್ಣು ) ಸಾಗಾಟ ಸುಮಾರು ತಿಂಗಳಿನಿಂದ ನಡಿತಾ ಇದೆ.
ಇದರ ಬಗ್ಗೆ ನವಲಗುಂದ ಶಿರಸಂಗಿ ಟ್ರಸ್ಟ್ ಕಾವಲುಗಾರನಾದ ಬಸವರಾಜ ಹರ್ಲಾಪುರ ಇವರು ಶುಕ್ರವಾರ ಸಪ್ಟೆಂಬರ್ 5 ರಂದು 112ಕ್ಕೆ ಕರೆ ಮಾಡಿ ಅಕ್ರಮವಾಗಿ ಮಣ್ಣು ಸಾಗಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ನೀಡಿದ ಮೇಲೆ 112 ಸವದತ್ತಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಅಕ್ರಮವಾಗಿ ಮರಳು ತುಂಬುವ ಸ್ಥಳಕ್ಕೆ ನವಲಗುಂದ ಶಿರಸಂಗಿ ಟ್ರಸ್ಟ್ ಕಾವಲುಗಾರನಾದ ಬಸವರಾಜ ಹರ್ಲಾಪುರ ಅವರನ್ನು ಕರೆದುಕೊಂಡು ಹೋದರು ಅಲ್ಲಿ ದೇಸಾಯಿ ನವಲಗುಂದ ಶಿರಸಂಗಿ ಟ್ರಸ್ಟ್ ನ 20/ಬಿ ಆಸ್ತಿಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುವುದು ಕಂಡುಬಂದಿದ್ದು ಸ್ಥಳದಲ್ಲಿ ಪೊಲೀಸರು ನಾಲ್ಕು ಲಾರಿ ಹಾಗೂ ಒಂದು ಜೆಸಿಬಿಯನ್ನು ಜಪ್ತಿ ಮಾಡಿದರು ಆನಂತರ ಘಟನೆ ಸ್ಥಳಕ್ಕೆ ಸವದತ್ತಿ ಪಿಎಸ್ಐ ಆಗಮಿಸಿ ಇದರ ಬಗ್ಗೆ ತನಿಖೆ ನಡೆಸಿದ್ದಾರೆ
ದೇಸಾಯಿ ನವಲಗುಂದ ಶಿರಸಂಗಿ ಟ್ರಸ್ಟ್ ನ 20/B ಆಸ್ತಿಯಲ್ಲಿ ಅಕ್ರಮವಾಗಿ ಮರಂ(ಗರ್ಚು) ಸಾಗಣಿಕೆ ನಡೆಯುತ್ತಿದ್ದು , ಜಿಲ್ಲಾ ಡಳಿತ ಕಣ್ಮುಚ್ಚಿ ಕುಳಿತಿದೆ. ಸರ್ಕಾರದ ಬೊಕ್ಕಸಕ್ಕೆ ಲಕ್ಷಗಟ್ಟಲೇ ನಷ್ಟವಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಪರವಾನಗಿ ಪಡೆಯದೆ ಹಗಲು ರಾತ್ರಿ ಎನ್ನದೇ ಅಕ್ರಮವಾಗಿ ಜೆಸಿಬಿ ಮೂಲಕ ಮರಂ ಸಾಗಾಣೆ ಮಾಡುತ್ತಿರುವ ದೃಶ್ಯ ಲಭ್ಯವಾಗಿದೆ.

ಗ್ರಾಮ ಪಂಚಾಯತ್, ತಾಲೂಕು ಕಚೇರಿಯ ಕಂದಾಯ ಇಲಾಖೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮೋದನೆ ಪಡೆಯದೆ ಅಕ್ರಮವಾಗಿ ಸಾಗಾಣಿಕೆ ನಡೆದಿದೆ. ಈ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರೂ ಮೌನ ವಹಿಸಿರುವುದು ನೋಡಿದರೆ ಸರ್ಕಾರಿ ನೌಕರರು ಬೊಕ್ಕಸಕ್ಕೆ ನಷ್ಟವನ್ನು ಉಂಟು ಮಾಡುತ್ತಿದ್ದಾರೆ ಎನ್ನುವ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ.
ಅಕ್ರಮವಾಗಿ ಮರಂ ತೆಗೆದವರ ವಿರುದ್ಧ ದೇಸಾಯಿ ನವಲಗುಂದ ಶಿರಸಂಗಿ ಟ್ರಸ್ಟ್ ನ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ದೇಸಾಯಿ ನವಲಗುಂದ ಶಿರಸಂಗಿ ಟ್ರಸ್ಟ್ ನ ಕಾರಬಾರಿಗಳು ಹಾಗೂ ಶಿರಸಂಗಿ ಲಿಂಗರಾಜ್ ಟ್ರಸ್ಟ್ ನ ಎಫ್ ಡಿ ಸಿ ಸಿದ್ದು ಪಾಟೀಲ್ ಹೇಳಿದರು.