WhatsApp Group
Join Now
ಬೆಳಗಾವಿ ಜಿಲ್ಲೆ ರಾಮದುರ್ಗ ನಗರದ ಉಮೇಶ ಕುಶಾಲ ಬಡಿಗೇರ ವಯಸ್ಸು 34 ವರ್ಷ ಉದ್ಯೋಗ ಬಡಿಗತನ ಸಾ: ರಾದಾಪೂರಪೇಠ, ರಾಮದುರ್ಗ ಇವನು ಸುಮಾರು 4-5 ವರ್ಷಗಳಿಂದ ಅತಿಯಾಗಿ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದನು.
ದಿನಾಂಕ: 19/02/2026 ರಂದು ಮುಂಜಾನೆ 07:00 ಗಂಟೆ ಸುಮಾರಿಗೆ ಸರಾಯಿ ಕುಡಿದ ನಸೇಯಲ್ಲಿ ತನ್ನ ಹೆಂಡತಿಯೊಂದಿಗೆ ಜಗಳ ಮಾಡಿಕೊಂಡು ರಾಮದುರ್ಗ ತನ್ನ ಮನೆಯಿಂದ ಹೋಗಿ ದಿನಾಂಖ: 19/02/2026 ರಂದು ಮುಂಜಾನೆ 07:00 ಗಂಟೆಯಿಂದ ದಿನಾಂಕ: 21/02/2026 ರಂದು ಮದ್ಯಾಹ್ನ 01:00 ಗಂಟೆಯ ನಡುವಿನ ಅವಧಿಯಲ್ಲಿ ರಾಮದುರ್ಗ ನಗರದ ಹದ್ದಿಯಲ್ಲಿರುವ ಪಾಲರೇಶಾ ಕುಟುಂಬದವರ ಬಾವಿಯಲ್ಲಿ ತನ್ನಷ್ಟಕ್ಕೆ ತಾನೆ ಜಿಗಿದು ಆತ್ಮಹತ್ಯೆ ಮಾಡಿಕೊಂಡು ಮರಣ ಹೊಂದಿದ್ದು ಇರುತ್ತದೆ.
ಈ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ



