ಸವದತ್ತಿ ವಕೀಲರ ಸಂಘದಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

WhatsApp Group Join Now

ಛತ್ರಪತಿ ಶಿವಾಜಿ ಮಹಾರಾಜರು 1930ರ ಫೆಬ್ರವರಿ 19 ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಜುನ್ನಾರ್ ಬಳಿ ಜನಿಸಿದರು. ಶಿವಾಜಿ ಮಹಾರಾಜರು ಜನಿಸಿದ ಈ ದಿನವನ್ನೇ ಶಿವಾಜಿ ಜಯಂತಿ ಎಂದು ನಡೆಸಿಕೊಂಡು ಬರಲಾಗುತ್ತಿದ್ದು, ಶಿವಾಜಿ ಜಯಂತಿಯನ್ನು ಫೆಬ್ರವರಿ 19ರಂದು ಆಚರಿಸಲಾಗುವುದು.

ಬೆಳಗಾವಿ ಜಿಲ್ಲೆ ಸವದತ್ತಿ ನಗರದ ಶಿವಾಜಿ ಸರ್ಕಲ್ ನಲ್ಲಿ ಸವದತ್ತಿ ವಕೀಲರ ಸಂಘದಿಂದ
ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವ ಅಂಗವಾಗಿ
ಶಿವಾಜಿ ಮಹಾರಾಜರ ಭಾವಚಿತ್ರ/ಪುತ್ಥಳಿಗೆ ಪುಷ್ಪಾರ್ಚನೆ, ಸಲ್ಲಿಸಿ ಅತ್ಯಂತ ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.

ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಜೆ.ಬಿ. ಮುನವಳ್ಳಿ, ರಾಜೇಶ ಆಲದಕಟ್ಟಿ, ಬಸವರಾಜ ಯರಗಣವಿ, ಎಸ್.ಎಸ್. ದೇವನಗಾವಿ, ವಾಯ್.ಪಿ. ರಾಮಜಾರ, ಆರ್.ಎಮ್. ನಿಡೋಣಿ, ಎಸ್.ಎಸ್. ಮಾನೆ ಜಿ.ವಾಯ್. ಕರಮಲ್ಲಪನವರ, ಬಿ.ಕೆ. ಕಡಕೋಳ, ವಿನಾಯಕ ಮುನವಳ್ಳಿ, ರಾಜು ಹುಂಬಿ, ಜೆ.ಎಮ್.ತಾಂಬೋಳಿ, ಯಶವಂತ ಪಾಸ್ತೆ, ಅರುಣ ಮಾನಗಾವ, ಮಂಜುನಾಥ ಬಾಡಗೇರ, ಮಯೂರ ಕಾರದಗಿ, ಜಗದೀಶ ಅಗಡಿ, ವಿನಯ ಮುನವಳ್ಳಿ, ಫಕೀರಪ್ಪ ಹಟ್ಟಿ, ವಿನಯ್ ಅಂಗಡಿ, ಶಿವಾಜಿ ಬೇವಿನಕೊಪ್ಪ, ಶಿವು ಬರಮಗೌಡ್ರ, ಅಜಯ ಕಿಟದಾಳ ಸೇರಿದಂತೆ ಅನೇಕರು ಇದ್ದರು.

About The Author