ಹುಬ್ಬಳ್ಳಿಯಲ್ಲಿ ಬಾರಿ ಅಗ್ನಿ ಅವಘಡ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಗೋದಾಮಿಗೆ ಬೆಂಕಿ.

WhatsApp Group Join Now

ಹುಬ್ಬಳ್ಳಿಯ ಕುಸುಗಲ್ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ಸ್ ಗೋದಾಮಿನಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಈ ಅಗ್ನಿ ಅವಘಡ.

ಕುಸುಗಲ್ ರಸ್ತೆಯ ಝಡೀಕೋ ಎಂಟರ್ ಪ್ರೈಸಸ್ ಮನೆ ಬಳಕೆಯ ಸಾಮಾನುಗಳ ಗೋದಾಮಿಗೆ ಶಾರ್ಟ್ ಸಕ್ರೂಟ್ ನಿಂದ ಬೆಂಕಿ ತಗುಲಿ ಕೋಟ್ಯಾಂತರ ರೂಪಾಯಿಯ ವಸ್ತುಗಳು ಸುಟ್ಟಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಉಣಕಲ್ ಮಾಲೀಕರಾದ ರವಿ ಜೈನ್ ಎಂಬುವರಿಗೆ ಸೇರಿದ ಎಲೆಕ್ಟ್ರಾನಿಕ್ ಗೋದಾಮಾಗಿದ್ದು, ಏಕಾಏಕಿ ಬೆಂಕಿ ತಗುಲಿದೆ.
ಗೋದಾಮಿನಲ್ಲಿದ್ದ ಟಿವಿ, ಎಸಿ ಮತ್ತು ರೆಫ್ರಿಜರೇಟರ್‌ಗಳಂತಹ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಭಸ್ಮವಾಗಿದ್ದು, ಕೋಟ್ಯಾಂತರ ರೂಪಾಯಿಗಳ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಸ್ಥಳೀಯರು ಪೊಲೀಸ್ ಹಾಗೂ ಆಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ 5ಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನಗಳು ಧಾವಿಸಿ, ಸುಮಾರು 4 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಜಾಸ್ತಿ ಬೆಂಕಿ ಕಾಣಿಸಿಕೊಂಡಿದ್ದರಿಂದ ನೂರಾರು ಜನರು ಗಾಬರಿಗೊಂಡು ನೋಡುತ್ತಿದ್ದಾರೆ. ಕೋಟ್ಯಾಂತರ ರೂಪಾಯಿ ಎಲೆಕ್ಟ್ರಾನಿಕ್ ವಸ್ತುಗಳಗಳಿವೆ. ಆದರೆ ಎಷ್ಟು ನಷ್ಟವಾಗಿದೆ ಎಂಬುದು ತಿಳಿದು ಬಂದಿಲ್ಲ ಎಂದು ಅಗ್ನಿ ಶಾಮಕ ದಳಸ ಸಿಬ್ಬಂದಿ ತಿಳಿಸಿದ್ದಾರೆ.

About The Author