ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸುರೇಬಾನ – ಮನಿಹಾಳ ನೂತನ ಪೊಲೀಸ್ ಠಾಣೆಗೆ ಸುಮಾರು ಅಂದಾಜು ಮೊತ್ತ 1 ಕೋಟಿ 37 ಲಕ್ಷ ರೂ ಗಳ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ಕಾರ್ಯಕ್ರಮವನ್ನು ಸರ್ಕಾರಿ ಮುಖ್ಯ ಸಚೇತಕರು, ಕರ್ನಾಟಕ ವಿಧಾನಸಭೆ ಹಾಗೂ ಶಾಸಕರು ರಾಮದುರ್ಗ, ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರು ಅಶೋಕ ಪಟ್ಟಣ
ಅವರು ನೆರವೇರಿಸಿ ಮಾತನಾಡಿದರು 2018 ರಲ್ಲಿಯೇ ಸುರೇಬಾನ ಉಪ ಠಾಣೆ ಮೇಲ್ದರ್ಜೆಗೇರಿಸಿ, ಪೊಲೀಸ್ ಠಾಣೆಯಾಗಿ ಪರಿವರ್ತನೆ ಮಾಡಿಸಿದ್ದೇನು. ಅದರ ಕಟ್ಟಡ ನಿರ್ಮಾಣ ಸೇರಿದಂತೆ ಕಾರ್ಯಾರಂಭ ಮಾಡಿಸಲು ಮತ್ತೆ ನಾನೇ ಪ್ರಯತ್ನಿಸಬೇಕಾಯಿತು ಎಂದು ಹೇಳಿದರು.
ಬೆಳಗಾವಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಸರಗಿ ಮಾತನಾಡಿ ಅಶೋಕ ಪಟ್ಟಣ ಅವರ ಪ್ರಯತ್ನದ ಫಲವಾಗಿ
ಸುರೇಬಾನ ಪೊಲೀಸ್ ಠಾಣೆಗೆ ಸಿಬ್ಬಂದಿ ಹಾಗೂ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಸುರೇಬಾನ ಸುತ್ತಮುತ್ತಲಿನ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ಶಾಸಕರು
ಠಾಣೆಯನ್ನು ಮಂಜೂರು ಮಾಡಿಸಿದ್ದಾರೆ. ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಸ್ಥಳೀಯ ಅಧಿಕಾರಿಗಳಿಂದ ಆಗಬೇಕು
ಎಂದೂ ಸೂಚನೆ ನೀಡಿದ ಅವರು, ಇಲಾಖೆ ಜನತೆಯ ಕಷ್ಟಗಳಿಗೆ ಸ್ಪಂದಿಸಿ ತೃಪ್ತಿಕರ ಸೇವೆ ಸಲ್ಲಿಸಲು ಬದ್ದವಿದೆ. ಪೊಲೀಸರು ಹೆಲೈಟ್ ಹಾಕುವಂತೆ ಸೂಚನೆ ನೀಡಿದಾಗಲೂ ಜನತೆ ಹೆಲೈಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ ಮಾಡದೇ ಇರುವುದು ಸರಿಯಲ್ಲ. ಕಾನೂನು ಪಾಲನೆಯಿಂದ ನಮ್ಮ ಅಮೂಲ್ಯವಾದ ಜೀವ ರಕ್ಷಣೆಯಾಗುತ್ತದೆ ಎಂದು ಜನತೆ ಅರಿತುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಜಿ.ಬಿ. ರಂಗನಗೌಡ್ರ, ಮುಖಂಡರಾದ ಪರಪ್ಪ ಜಂಗವಾಡ, ಜಿ.ಎಚ್. ಹಣಸಿ, ಸಿದ್ದಿಂಗಪ್ಪ ಸಿಂಗಾರಗೊಪ್ಪ, ಜಹೂರ ಹಾಜಿ, ಗುತ್ತಿಗೆದಾರರಾದ ಬಿ.ಎಂ. ಪಾಟೀಲ, ಸುರೇಬಾನ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಅಶ್ರಫ್ ಬಂದಗಿ, ರಾಮದುರ್ಗ ಸಿಪಿಐ ವಿನಾಯಕ ಬಡಿಗೇರ, ಸವದತ್ತಿ ಸಿಪಿಐ ಸುರೇಶ ಬೆಂಡೆಗುಂಬಳ, ರಾಮದುರ್ಗ ಪಿಎಸ್ಐ ಸವಿತಾ ಮುನ್ಯಾಳ, ಸುರೇಬಾನ ಪಿಎಸ್ಐ ಗುರುರಾಜ ಕಲಬುರಗಿ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.



