ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದ
ಸ್ವಾಮಿ ವಿವೇಕಾನಂದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ಹಲಗತ್ತಿ BLO ಮತ್ತು BLA ರವರ ಸಭೆಯನ್ನು ಎಸ್ ಎಸ್ ಗೋರವನಕೊಳ್ಳ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಹಲಗತ್ತಿ ಗ್ರಾಮದ ಮೂರು ವಾರ್ಡಿನ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯವನ್ನು ನೂರಕ್ಕೆ ನೂರರಷ್ಟು ಯಶಸ್ವಿಯಾಗಿ ಮುಗಿಸಿದ ಹಲಗತ್ತಿ ಗ್ರಾಮದ
ಬಿ ಎಲ್ ಓ ಗಳಾದ ಎಸ್ ಜಿ ರಾಠೋಡ, ಎಸ್ ಎಸ್ ಸಜ್ಜನ, ಬಿ ಎಂ ವಾಲಿಕಾರ, ವ್ಹಾ ಎಸ್ ಪಾಟೀಲ, ಅಂಗನವಾಡಿ ಕಾರ್ಯಕರ್ತೆಯರು ಎಸ್.ಐ ಹಡಗಲಿ, ಎನ್ ಬಿ ಮುಳ್ಳೂರು, ಎಂ ಪಿ ಹೂಗಾರ, ಎಸ್ ಎನ್ ತೋಟಗೇರ, ಎಸ್ ಎಸ್ ಕುರಿ, ಹಾಗೂ ಆಶಾ ಕಾರ್ಯಕರ್ತೆಯರು ಪಿ.ಎಸ್ ಜೆಲ್ಲಿಗೇರಿ, ಎ. ಎ.ಕಂಬಾರ್ , ಎಸ್ ಬಿ ಕಳ್ಳನ್ನವರ, ಜಿ.ಎಸ್ ಖಾನಾಪುರ, ಉಮಾ ರಮೇಶ್ ದೊಡಮನಿ, ಅವರನ್ನು ಹಲಗತ್ತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರು ಸರ್ವ ಸದಸ್ಯರು ಆತ್ಮೀಯವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಎಲ್.ಎಲ್ ಹೂಗಾರ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಎಸ್.ವಿ ಮಾಯನ್ನವರ, ಪಂಚಾಯತಿಯ ಸದಸ್ಯರು ಎಂ.ಜಿ ಮುಧೋಳ, ಎಂ ವೈ ಜಕಾತಿ, ಎಸ ಎಚ್ ತೋಟಗೇರ, ಎ ಆರ್ ದೊಡವಾಡ, ಆಯ ಬಿ ಹಡಗಲಿ, ಎಸ್ ವೈ ಉಪ್ಪಾರ, ಬಿ ಎಂ ಬಿಸನಾಳ, ಪಾಲ್ಗೊಂಡಿದ್ದರು.



