ಅಥಣಿ ಕಲ್ಲು ಗಣಿಗಾರಿಕೆ ವಿರುದ್ಧ ಜಾನುವಾರುಗಳ ಸಮೇತ ಧರಣಿ

WhatsApp Group Join Now

ಅಥಣಿ ಕಲ್ಲು ಗಣಿಗಾರಿಕೆಯ ಧೂಳಿನಿಂದ ತೀವ್ರ ತೊಂದರೆಗೀಡಾಗಿರುವ ಗಸ್ತಿ ಕುಟುಂಬ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಬುಧವಾರ ಇಲ್ಲಿನ ಮಿನಿ ವಿಧಾನಸೌಧ ತಹಶೀಲ್ದಾರ್‌ಕಚೇರಿಯ ಆವರಣದಲ್ಲಿ ಜಾನುವಾರುಗಳ ಸಮೇತ ಧರಣಿ ನಡೆಸುತ್ತಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ತಮ್ಮ ಅಳಲು ತೋಡಿಕೊಂಡ ರಾಮಪ್ಪ ಗಸ್ತಿ ಕಳೆದ ಹತ್ತು ವರ್ಷಗಳಿಂದ ಕಲ್ಲು ಗಣಿಗಾರಿಕೆಯ ಧೂಳಿನಿಂದ ನಮ್ಮ ಕುಟುಂಬ ಹೈರಾಣಾಗಿದೆ, ಕುಟುಂಬದ ಸದಸ್ಯರಿಗೆ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು,

ಈ ಗಣಿಗಾರಿಕೆಯಿಂದ ಬರುವ ಧೂಳಿನಿಂದ ನಮ್ಮ ಕುಟುಂಬವನ್ನು ರಕ್ಷಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಕಚೇರಿ ಅಲೆದು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದ್ದರಿಂದ ನಾವು ಆಡಳಿತ ವ್ಯವಸ್ಥೆಗೆ ವಿರುದ್ಧ ಧರಣಿ ನಡೆಸುವುದು ಅನಿವಾರ್ಯವಾಗಿದೆ. ಅಧಿಕಾರಿಗಳು ನೀಡುವ ಪೋಳ್ಳು ಭರವಸೆಗಳಿಗೆ ನಾವು ಪ್ರತಿಭಟನೆ ಹಿಂಪಡೆಯಲ್ಲ, ಈ ಸಮಸ್ಯೆ ಗೆ ಶಾಶ್ವತ ಪರಿಹಾರ ಆಗುವವರಿಗೆ ನಾವು ಇಲ್ಲಿಗೆ ಪ್ರತಿಭಟನೆ ನಡೆಸುತ್ತೇವೆ ಎಂದ ಅವರು ತಾಲೂಕು ಆಡಳಿತ ಕಚೇರಿ ಆವರಣದಲ್ಲಿಯೇ ಜಾನುವಾರು ಕಟ್ಟಿ ತಾಲೂಕ ಆಡಳಿತ ವ್ಯವಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಸಿದರಾಯ ಭೋಸಗಿ ಅವರು ಪ್ರತಿಭಟನಾಕಾರರನ್ನು ಭೇಟಿಯಾಗಿ ಸಮಾಧಾನ ಪಡಿಸಲು ಯತ್ನಿಸಿದರು. ಆದರೆ, ಇಷ್ಟು ವರ್ಷಗಳಿಂದ ಅಧಿಕಾರಿಗಳು ನೀಡುತ್ತಾ ಬಂದಿರುವ
ಬಾಯಿಮಾತಿನ ಪೊಳ್ಳು ಭರವಸೆಗಳನ್ನು ನಿರಾಕರಿಸಿದ ಗಸ್ತಿ ಕುಟುಂಬವು, ತಮಗೆ ನ್ಯಾಯಯುತ ಪರಿಹಾರ ಸಿಗುವವರೆಗೂ ತಮ್ಮ ಪ್ರತಿಭಟನೆ ಮುಂದುವರಿಸುವುದಾಗಿ ಪಟ್ಟು ಹಿಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಹಸಿಲ್ಲಾ ಸಿದರಾಯ ಭೋಸಗಿ ಅಥಣಿ ತಾಲೂಕಿನಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಸಮಸ್ಯೆ ತುರ್ತಾಗಿ ಬಗೆಹರಿಸುವ ಸಮಸ್ಯೆ ಅಲ್ಲ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಈ
ಸಮಸ್ಯೆಯನ್ನು ಪರಿಹರಿಸುತ್ತಾರೆ. ನಾವು ಕೂಡ ಈ ಸಮಸ್ಯೆ ಮತ್ತು ಕುಟುಂಬಸ್ಥರು ನಡೆಸುವ ಪ್ರತಿಭಟನೆಯ ಬಗ್ಗೆ ಮಾಹಿತಿ ರವಾನಿಸುತ್ತೇವೆ. ಯಾವುದೇ ಸಮಸ್ಯೆ ಮತ್ತು ಪರಿಹಾರಕ್ಕೆ ಹೋರಾಟ ಮತ್ತು ಧರಣಿ ನಡೆಸುವುದು ಅವರ ಮೂಲಭೂತ ಹಕ್ಕಾಗಿದೆ. ನಾನು ಆ ಕುಟುಂಬದ ಸದಸ್ಯರಿಗೆ ಈಗ ಬೇಸಿಗೆಯ ಬಿಸಿಲಿನ ಉಷ್ಣಾಂಶ ಅಧಿಕ ಇರುವದರಿಂದ ನೆರಳಿನಲ್ಲಿ ಕುಳಿತುಕೊಳ್ಳಿ ಎಂದು ಮನವಿ ಮಾಡಿದ್ದೇನೆ, ಆದಷ್ಟು ಬೇಗನೆ ಈ ಸಮಸ್ಯೆಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

About The Author