ಕಾಗವಾಡ ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ ತಂದೆಗೆ ₹25000 ದಂಡ ವಿಧಿಸಿದ ನ್ಯಾಯಾಧೀಶರು

WhatsApp Group Join Now

ಸಾರ್ವಜನಿಕ ಸುರಕ್ಷತೆ ಮತ್ತು ರಸ್ತೆ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಬೆಳಗಾವಿ ಜಿಲ್ಲಾ ಪೊಲೀಸರು ಅಳವಡಿಸಿರುವ ಎ.ಎನ್.ಪಿ.ಆ‌ರ್ (Automatic Number Plate Recognition Camera – ANPR) ತಂತ್ರಜ್ಞಾನವು ಇಂದು ಕಠಿಣ ಕಾನೂನು ಜಾರಿಗೆ ಪ್ರಬಲ ಅಸ್ತ್ರವಾಗಿ ಪರಿಣಮಿಸಿದೆ.

ಇತ್ತೀಚೆಗೆ ನಡೆದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣವೊಂದರಲ್ಲಿ, ಮಾನ್ಯ JMFC ನ್ಯಾಯಾಲಯ ಕಾಗವಾಡ, cc no 579/26 ಇದರಲ್ಲಿ ಸದರಿ ಅಪ್ರಾಪ್ತ ಬಾಲಕನ ತಂದೆಯಾದ ಮಕ್ರಂದ್ ಮಲ್ಲಪ್ಪ ಮಗದುಮ್ ಸಾಕಿನ್ ಮಂಗಸುಳಿ ಈತನು ತನ್ನ ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನ ಚಲಾಯಿಸಲು ಕೊಟ್ಟಿದ್ದು ಸದರಿ ತಂದೆಯು ತನ್ನ ಮಗ ಅಪ್ರಾಪ್ತ ಇರುವುದು ಗೊತ್ತಿದ್ದರೂ ಸಹ ತನ್ನ ಮಗನಿಗೆ ದ್ವಿಚಕ್ರ ವಾಹನ ನಡೆಸಲು ಕೊಟ್ಟಿದ್ದು ಕಾನೂನು ಬಾಹಿರವಾಗಿರುವುದರಿಂದ, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಆರೋಪಿಗೆ 25,000 ರೂಪಾಯಿ ದಂಡ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.

ನ್ಯಾಯಾಧೀಶರ ದೂರದೃಷ್ಟಿ ಮತ್ತು ಕಾನೂನಿನ ಕಟ್ಟುನಿಟ್ಟಿನ ಜಾರಿ ಪ್ರಕರಣದಲ್ಲಿ ನ್ಯಾಯಾಧೀಶರು ವಹಿಸಿದ ಪಾತ್ರ ಅತ್ಯಂತ ಪ್ರಮುಖವಾಗಿದೆ. ಕೇವಲ ಒಂದು ಸಂಚಾರ ನಿಯಮ ಉಲ್ಲಂಘನೆಯನ್ನು ಸಾಮಾನ್ಯ ಪ್ರಕರಣ ಎಂದು ಪರಿಗಣಿಸದೆ, ಸಾರ್ವಜನಿಕರ ಜೀವದ ಸುರಕ್ಷತೆ ಮತ್ತು ಕಾನೂನಿನ ಘನತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಮಾನ್ಯ ನ್ಯಾಯಾಧೀಶರು ಅತ್ಯಂತ ಗಂಭೀರವಾಗಿ ವಿಚಾರಣೆ ನಡೆಸಿದ್ದಾರೆ., ತಪ್ಪು ಮಾಡಿದವರಿಗೆ ದಂಡದ ಮೂಲಕ ಎಚ್ಚರಿಕೆ ನೀಡುವ ಮೂಲಕ, ‘ಕಾನೂನು ಯಾರೊಬ್ಬರಿಗೂ ಮೀರಿದ್ದಲ್ಲ’ ಎಂಬ ಸಂದೇಶವನ್ನು ನ್ಯಾಯಾಲಯವು ಬಲವಾಗಿ ಸಾರಿದೆ.

About The Author