ಗುಟ್ಕಾ ಉಗಿಯಲು ಬಸ್‌ನ ಕಿಟಕಿ ಆಚೆ ತಲೆ ಹಾಕಿದ್ದಾಗ ಹಿಂದಿನಿಂದ ಟಿಪ್ಪ‌ರ್ ಡಿಕ್ಕಿ ಹೊಡೆದು ರುಂಡ ಕಟ್!

WhatsApp Group Join Now

ಧಾರವಾಡ ಜಿಲ್ಲೆ ಹುಬ್ಬಳ್ಳಿ -ಲಕ್ಷ್ಮೀಶ್ವರ ಮುಖ್ಯ ರಸ್ತೆಯ ಕೊಪ್ಪದ ಕೆರೆಯ ಬಳಿ
ಕುಂದಗೋಳ ಚಲಿಸುವ ಬಸ್‌ನ ಕಿಟಕಿ ಯಿಂದ ಹೊರಗೆ ತಲೆ ಹಾಕಿದ್ದ ವಿದ್ಯಾರ್ಥಿಯೊಬ್ಬನಿಗೆಹಿಂಬ ದಿಯಿಂದ ಬಂದ ಟಿಪ್ಪರ್ ಲಾರಿ ಡಿಕ್ಕಿಯಾಗಿ ಆತನ ರುಂಡವೇ ಕಟ್ ಆಗಿ ಬಿದ್ದು, ಸ್ಥಳದಲ್ಲೇ ಪ್ರಾಣ ಕಳೆದು ಕೊಂಡಿರುವ ಘಟನೆ ಹುಬ್ಬಳ್ಳಿ -ಲಕ್ಷ್ಮೀಶ್ವರ ಮುಖ್ಯ ರಸ್ತೆಯ ಕೊಪ್ಪದ ಕೆರೆಯ ಬಳಿ ಬುಧವಾರ ಸಂಜೆ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿಯನ್ನು ಕುಂದಗೋಳ ತಾಲೂಕಿನ ಶಿರೂರು ಗ್ರಾಮದ ನಿವಾಸಿ ಫಕ್ಕೀರೇಶ ಮುತ್ತಳ್ಳಿಮಠ ವಯಸ್ಸು 17 ಎಂದು ಗುರುತಿಸಲಾಗಿದೆ. ಫಕೀರೇಶ ಬಸ್ಸಿನ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ. ಆತ ಗುಟ್ಕಾ ಉಗುಳುವ ಉದ್ದೇಶದಿಂದ ಕಿಟಕಿಯ ಹೊರಗೆ ತಲೆಯನ್ನು ಹಾಕಿದ್ದಾನೆ ಎನ್ನಲಾಗಿದೆ. ಇದೇ ಸಮಯದಲ್ಲಿ ಬಸ್ಸಿನ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಕಿಟಕಿಯಿಂದ ಹೊರಗಿದ್ದ ಫಕ್ಕೀರೇಶ ತಲೆಗೆ ಭೀಕರವಾಗಿ ಡಿಕ್ಕಿಹೊಡೆದಿದೆ. ಟಿಪ್ಪರ್‌ ಡಿಕ್ಕಿಯಾದ ರಭಸಕ್ಕೆ ವಿದ್ಯಾರ್ಥಿಯ ದೇಹದಿಂದ ಬೇರ್ಪಟ್ಟಿದ್ದು, ರಸ್ತೆಗೆ ಬಿದ್ದಿದೆ. ದೇಹವು ಬಸ್ಸಿನ ಕಿಟಕಿಯ ಬಳಿಯೇ ನೇತಾಡುತ್ತಿದ್ದ ದೃಶ್ಯ ಸ್ಥಳೀ ಯರಲ್ಲಿ ಮತ್ತು ಸಹ ಪ್ರಯಾಣಿಕರಲ್ಲಿ ನಡುಕ ಹುಟ್ಟಿಸುವಂತಿತ್ತು.

About The Author