ದ್ವಿಚಕ್ರ ವಾಹನ ಸವಾರರ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ.
ನಾಲ್ಕು ಚಕ್ರ ವಾಹನ ಸವಾರರು ಸೀಟ್ ಬೆಲ್ಟ್ ಕಡ್ಡಾಯವಾಗಿ ಹಾಕಿಕೊಳ್ಳಿ.
ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಸ್ವಯಂ ಚಾಲಿತವಾಗಿ ಆಟೋಮೆಟಿಕ್ ದಂಡ ದಾಖಲಾಗುವುದು ದಂಡಪಾವತಿಸಲು ನಿಮ್ಮ ವಿಳಾಸಕ್ಕೆ ನೇರವಾಗಿ ನೋಟಿಸ್ ಬರುವುದು.
ಸಾರ್ವಜನಿಕರ ಸುರಕ್ಷತೆ ಮತ್ತು ಸಂಚಾರ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆಯು ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ. ಅಪರಾಧ ಕೃತ್ಯಗಳಿಗೆ ಬ್ರೇಕ್ ಹಾಕಲು ಮತ್ತು ನಿಯಮ ಉಲ್ಲಂಘಿಸುವವರನ್ನು ಪತ್ತೆಹಚ್ಚಲು ಆಟೋಮೇಟೆಡ್ ಸಿಸಿಟಿವಿ (Automated CCTV) ಕ್ಯಾಮೆರಾಗಳನ್ನು ಸರ್ಕಾರಿ ಆಸ್ಪತ್ರೆ ಮುಂದೆ ಹಾಗೂ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ
ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಅಳವಡಿಸಲಾಗಿದೆ.
ಸ್ವಯಂಚಾಲಿತ ಪತ್ತೆ (Automated Detection): ಈ ಕ್ಯಾಮೆರಾಗಳು ಕೇವಲ ದೃಶ್ಯಗಳನ್ನು ರೆಕಾರ್ಡ್ ಮಾಡುವುದಷ್ಟೇ ಅಲ್ಲದೆ, ಸಂಚಾರ ನಿಯಮ ಉಲ್ಲಂಘನೆ (ಹೆಲ್ಮೆಟ್ ಧರಿಸದಿರುವುದು, ತ್ರಿಬಲ್ ರೈಡಿಂಗ್) ಮಾಡುವವರನ್ನು ಸ್ವಯಂಚಾಲಿತವಾಗಿ ಗುರುತಿಸುತ್ತವೆ.
ಅಪರಾಧ ನಿಯಂತ್ರಣ: ಪಟ್ಟಣದ ಪ್ರಮುಖ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ನಿಗಾ ಇಡುವುದರಿಂದ ಕಳ್ಳತನ, ಜಗಳ ಅಥವಾ ಯಾವುದೇ ಅಹಿತಕರ ಘಟನೆಗಳು ನಡೆದರೆ ತಕ್ಷಣ ಆರೋಪಿಗಳನ್ನು ಪತ್ತೆಹಚ್ಚಲು ಸಹಾಯವಾಗುತ್ತದೆ.
ಡಿಜಿಟಲ್ ಚಲನ್: ನಿಯಮ ಮೀರಿದ ವಾಹನ ಸವಾರರ ನಂಬರ್ ಪ್ಲೇಟ್ ಆಧರಿಸಿ ನೇರವಾಗಿ ಅವರ ಮೊಬೈಲ್‌ಗೆ ದಂಡದ ಮೆಸೇಜ್ (E-Challan) ಹೋಗುವ ವ್ಯವಸ್ಥೆ ಕೂಡ ಇದರಲ್ಲಿದೆ.
ಒಟ್ಟಿನಲ್ಲಿ, ರಾಮದುರ್ಗ ಪೊಲೀಸರ ಈ ಮುನ್ನೆಚ್ಚರಿಕೆ ಕ್ರಮದಿಂದಾಗಿ ಸಾರ್ವಜನಿಕರಲ್ಲಿ ಸುರಕ್ಷತೆಯ ಭಾವನೆ ಮೂಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ದೊಡ್ಡ ಮಟ್ಟದ ನೆರವಾಗಲಿದೆ.



