ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಕಿಲಬನೂರ ಗ್ರಾಮದಲ್ಲಿ 2027ರ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ – ಮೇ 25ರಿಂದ ಜೂನ್ 8ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ
ಕಿಲಬನೂರ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ದುರ್ಗಾದೇವಿಯ ಜಾತ್ರಾ ಮಹೋತ್ಸವ – 2027ಕ್ಕೆ ಭರ್ಜರಿ ಸಿದ್ಧತೆಗಳು ನಡೆಯಲಿವೆ.
ಗ್ರಾಮದ ಆರಾಧ್ಯ ದೇವತೆಯಾದ ಶ್ರೀ ಗ್ರಾಮ ದೇವತೆಯ ಜಾತ್ರಾ ಮಹೋತ್ಸವವನ್ನು ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸಲು ಗ್ರಾಮಸ್ಥರು ಸಜ್ಜಾಗಿದ್ದಾರೆ.
ಮೇ 25ರ ಮಂಗಳವಾರ ಅಂಕಿ ಹಾಕುವ ಕಾರ್ಯಕ್ರಮದೊಂದಿಗೆ ಜಾತ್ರಾ ಮಹೋತ್ಸವದ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿವೆ.
ಮೇ 28ರ ಶುಕ್ರವಾರ ಗ್ರಾಮ ದೇವತೆಯ ರಥೋತ್ಸವ ಅದ್ಧೂರಿಯಾಗಿ ಜರುಗಲಿದೆ.
ಜೂನ್ 2ರ ಬುಧವಾರ ದೇವಿಯನ್ನು ಸೀಮೆಗೆ ಕಳುಹಿಸುವ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಜೂನ್ 8ರ ಮಂಗಳವಾರ ದೇವಿಯನ್ನು ಗದ್ದುಗೆಗೊಳಿಸುವ ಕಾರ್ಯಕ್ರಮದೊಂದಿಗೆ ಜಾತ್ರಾ ಮಹೋತ್ಸವದ ಪ್ರಮುಖ ವಿಧಿವಿಧಾನಗಳು ಸಂಪನ್ನಗೊಳ್ಳಲಿವೆ.ಎಂದು ಜಾತ್ರಾ ಕಮೀಟಿ ತಿಳಿಸಿದೆ.
ಈ ಸಂದರ್ಭದಲ್ಲಿ ಹಿರಿಯರಾದ ಮುತ್ತಪ್ಪ ಚವಲಾರ್ ಭೀಮಣ್ಣ ದೊಡ್ಡಮನಿ ಶಂಕ್ರಪ್ಪ ಗಾಣಿಗೇರ್ ಬಸಪ್ಪ ದೊಡಮನಿ ಪುಂಡಲಿಕಪ್ಪ ಚೌಡಕಿ ಕುಬೇರ ಗರಡಿಮನಿ ಶಂಕ್ರಣ್ಣ ಮುರುಡಿ ಪ್ರಕಾಶ್ ಸೂಳಿಬಾವಿ ಆನಂದಪ್ಪ ಶಿರಸಂಗಿ ವಿಜಯ ನಾಯಕ್ ಚಿದಾನಂದ್ ದೊಡಮನಿ ಇನ್ನು ಹಲವು ಸಮಾಜದ ಹಿರಿಯರು ಹಾಗೂ ಯುವಕರು ಹಾಜರಿದ್ದರು.



