ರಾಮದುರ್ಗ ಸ್ವಚ್ಛತೆಯ ಬಗ್ಗೆ ಬೇಜಾರ ವ್ಯಕ್ತಪಡಿಸಿದ ನ್ಯಾಯಾಧೀಶರು ಮಲಪ್ರಭಾ ನದಿಯು ನಮ್ಮ ಭಾಗದ ಜೀವಾಳ ಮತ್ತು ಅಮೂಲ್ಯವಾದ ಆಸ್ತಿ. ಅದನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ ಎಂದು ನ್ಯಾಯಾಧೀಶರು ಶ್ರೀಮತಿ. ಪುಷ್ಪಲತಾ. ಕೆ ಹೇಳಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ರಾಮದುರ್ಗದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ರಾಮದುರ್ಗ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಬೆಳಗಾವಿ ಮತ್ತು ತಾಲೂಕು ಕಾನೂನು ಸೇವಾ ಸಮಿತಿ, ರಾಮದುರ್ಗ, ನ್ಯಾಯವಾದಿಗಳ ಸಂಘ, ರಾಮದುರ್ಗ ಶಿಕ್ಷಣ ಇಲಾಖೆ ರಾಮದುರ್ಗ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ”ಜಾಗೃತಿ ಯೋಜನೆ 2025 ರ ಅಡಿಯಲ್ಲಿ ಯುವ ಶಕ್ತಿಯಿಂದ ಸಭಲ ಭಾರತ “ದ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗ ಜೆ ಎಮ್. ಎಫ್. ಸಿ ರಾಮದುರ್ಗ ಮತ್ತು ಅಧ್ಯಕ್ಷರು ತಾಲೂಕು ಕಾನೂನು ಸೇವಾ ಸಮಿತಿ ರಾಮದುರ್ಗ ಶ್ರೀಮತಿ. ಪುಷ್ಪಲತಾ. ಕೆ ಅವರು ಉದ್ಘಾಟಿಸಿ ಮಾತನಾಡಿದರು.
ಯುವ ದಿನವನ್ನು ಆಗಸ್ಟ್ 12 ರಂದು ವಿವೇಕಾನಂದರ ಜನ್ಮದಿನದಂದು ಆಚರಿಸಬೇಕಾಗಿತ್ತು ಅವತ್ತು ವಿದ್ಯಾರ್ಥಿಗಳಿಗೆ ಎಕ್ಸಾಮ್ ಇರುವುದರಿಂದ ಈ ಕಾರ್ಯಕ್ರಮವನ್ನು ಇವತ್ತು ಹಮ್ಮಿಕೊಳ್ಳಲಾಗಿದೆ ವಿವೇಕಾನಂದರು ಅಲ್ಫಾ ಕಾಲ ಬದುಕಿದ್ದರೂ ಅವರ ಜೀವಿತ ಕಾಲದಲ್ಲೂ ರಾಷ್ಟ್ರಾದ್ಯಂತ ಅಂತರಾಷ್ಟ್ರಾದ್ಯಂತ ತಮ್ಮ ಹೆಸರನ್ನು ಹಾಗೂ ತಮ್ಮ ಕಾರ್ಯವ್ವೆಕರದಿಂದ ಅವರ ಜೀವನದ ಮೌಲ್ಯಾಂಗ ಎಲ್ಲರಿಗೂ ತಲುಪಿಸಬೇಕೆಂಬ ಕಾರಣಕ್ಕೆ ನಾವು ಈ ಕಾರ್ಯಕ್ರಮವನ್ನು ಪ್ರತಿವರ್ಷ ಆಗಸ್ಟ್ 12ಕ್ಕೆ ಹಮ್ಮಿಕೊಳ್ಳಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ 18 ವರ್ಷದ ಒಳಗಿನ ಯುವಕರು ವಾಹನಗಳನ್ನು ಚಲಾವಣೆ ಮಾಡುತ್ತಿದ್ದಾರೆ 18 ವರ್ಷ ತುಂಬುವ ಮುನ್ನ ವಾಹನ ಅಥವಾ ಕಾರುಗಳನ್ನು ಚಲಾಯಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಅಪ್ರಾಪ್ತರು ವಾಹನ ಚಲಾಯಿಸಿ ಸಿಕ್ಕಿಬಿದ್ದರೆ, ಮೋಟಾರು ವಾಹನ ಕಾಯ್ದೆ 2019ರ ಪ್ರಕಾರ ಅವರ ಪೋಷಕರಿಗೆ ಅಥವಾ ವಾಹನದ ಮಾಲೀಕರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಅಪ್ರಾಪ್ತರಿಗೆ ರಸ್ತೆ ನಿಯಮಗಳ ಸರಿಯಾದ ಜ್ಞಾನ ಇರುವುದಿಲ್ಲ ಮತ್ತು ತುರ್ತು ಸಂದರ್ಭಗಳಲ್ಲಿ ವಾಹನವನ್ನು ನಿಯಂತ್ರಿಸುವ ಪ್ರೌಢಿಮೆ ಇರುವುದಿಲ್ಲ. ಕಾನೂನನ್ನು ತಿಳಿದುಕೊಂಡು ಬೇಕಂತಲೇ ಜನರು ತಪ್ಪು ಮಾಡುತ್ತಿದ್ದಾರೆ ವಾಹನ ಸವಾರರು ಹೆಲ್ಮೆಟ್ ಧರಿಸುವುದಿಲ್ಲ. ಬಜಾರದಲ್ಲಿ ನಿಯಮ ಬಾಹಿರ ತ್ರಿಬಲ್ ರೀಡಿಂಗ್ ಮಾಡುವುದು ಇದರಿಂದ ಭೀಕರ ಅಪಘಾತಗಳು ಸಂಭವಿಸುತ್ತವೆ. ಲೈಸೆನ್ಸ್ ಇಲ್ಲದೆ ಅಪಘಾತ ಸಂಭವಿಸಿದರೆ, ಯಾವುದೇ ರೀತಿಯ ವಿಮಾ (Insurance) ಸೌಲಭ್ಯ ಸಿಗುವುದಿಲ್ಲ. ಆಸ್ಪತ್ರೆಯ ಖರ್ಚು ಅಥವಾ ನಷ್ಟವನ್ನು ಪೋಷಕರೇ ಭರಿಸಬೇಕಾಗುತ್ತದೆ. ಕಾಲೇಜಿಗೆ ಬರಬೇಕಾದ ವಿದ್ಯಾರ್ಥಿಗಳು ಕೂಡ ವಾಹನಗಳನ್ನು ತರುವುದು ಆದಷ್ಟು ಬೇಗ ಅದನ್ನ ಅವಾಯ್ಡ್ ಮಾಡಿ ಬಸ್ಸುಗಳಲ್ಲಿ ಪ್ರಯಾಣ ಮಾಡುವುದು ಉತ್ತಮ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಎಲ್ಲೆಂದರಲ್ಲಿ ಗುಟ್ಕಾ, ತಂಬಾಕುಗಳನ್ನು ತಿಂದು ಉಗುಳುವುದು, ಅದರಿಂದ ನಮ್ಮ ಆರೋಗ್ಯಕ್ಕೂ ಒಳ್ಳೆಯದಲ್ಲ ಸಮಾಜಕ್ಕೂ ಒಳ್ಳೆಯದಲ್ಲ ಈ ಹಂತದಲ್ಲೇ ಜನರು ತಿದ್ದಿಕೊಳ್ಳಬೇಕು ಈ ಸಮಾಜದಲ್ಲಿ ಒಳ್ಳೆ ಹೆಸರು ತರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ರಾಮದುರ್ಗ ಮಲಪ್ರಭಾ ನದಿಯು ನಮ್ಮ ಆಸ್ತಿ ಆದರೆ ಆ ನದಿಯೊಳಗೆ ಪ್ಲಾಸ್ಟಿಕ್ ಚೀಲ, ಹರಿದ ಬಟ್ಟೆ, ಕಸಗಳನ್ನು ತಂದು ಎಸೆಯುವುದು ಅದರ ಬದಲಿ ಪುರಸಭೆ ಸ್ವಚ್ಛ ವಾಹಿನಿ ಗಾಡಿಗಳು ಬಂದಾಗ ಅದರಲ್ಲಿ ಕಸ ಹಾಕುವುದು ಉತ್ತಮ ಇದರಿಂದ ನಮ್ಮ ಸುತ್ತಮುತ್ತ ಇರ್ತಕ್ಕಂತ ಜಾಗವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ನ್ಯಾಯಾಧೀಶರು ಶ್ರೀಮತಿ. ಪುಷ್ಪಲತಾ. ಕೆ ಹೇಳಿದರು.
ದಿವಾಣಿ ನ್ಯಾಯಾಧೀಶರು ಹಾಗೂ ಜೆ. ಎಮ್.ಎಫ್.ಸಿ ರಾಮದುರ್ಗ ಮತ್ತು ಸದಸ್ಯ ಕಾರ್ಯದರ್ಶಿಗಳು, ತಾಲೂಕು ಕಾನೂನು ಸೇವಾ ಸಮಿತಿ ರಾಮದುರ್ಗ ಕುಮಾರಿ. ಭಾಗಶ್ರೀ ಮಾದರ ಮಾತನಾಡಿ ವಿದ್ಯಾರ್ಥಿಗಳು ಅಪರಾಧ ಚಟುವಟಿಕೆಗಳಿಂದ (ಕ್ರೈಂ) ದೂರವಿರುವುದು ಅವರ ಉಜ್ವಲ ಭವಿಷ್ಯಕ್ಕೆ ಅತ್ಯಂತ ಅತ್ಯಗತ್ಯ. ಪೊಲೀಸ್ ಕೇಸ್ ಆದರೆ ಉದ್ಯೋಗ ಸಿಗುವುದು ಕಷ್ಟವಾಗುತ್ತದೆ. ಕೋರ್ಟ್, ಕಚೇರಿ ಅಲೆದಾಟದಿಂದ ಜೀವನದ ಶಾಂತಿ ಹಾಳಾಗುತ್ತದೆ. ಹೆತ್ತವರಿಗೆ ಮತ್ತು ಕುಟುಂಬಕ್ಕೆ ಸಮಾಜದಲ್ಲಿ ತಲೆತಗ್ಗಿಸುವಂತಾಗುತ್ತದೆ. ಜಗಳ, ಗಲಾಟೆಗಳಿಂದ ದೂರವಿದ್ದು, ಕೋಪವನ್ನು ನಿಯಂತ್ರಿಸಲು ಕಲಿಯಿರಿ. ನಿಮ್ಮ ಸಂಪೂರ್ಣ ಗಮನವನ್ನು ವೃತ್ತಿಜೀವನ ರೂಪಿಸಿಕೊಳ್ಳುವುದರ ಕಡೆಗೆ ಹರಿಸಿ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಅನ್ನು ಜಾಸ್ತಿ ಉಪಯೋಗ ಮಾಡುತ್ತಿದ್ದಾರೆ ಇದರಿಂದ ಹಾಳಾಗುವುದೇ ಜಾಸ್ತಿ, ಮೊಬೈಲನ್ನು ಉಪಯೋಗ ಮಾಡಬೇಡಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ಅಪ್ರಾಪ್ತ ವಯಸ್ಸಿನವರು ಲೈಸೆನ್ಸ್ ಇಲ್ಲದೆ ವಾಹನ ಚಲಾವಣೆ ಮಾಡಬೇಡಿ ಅಕಸ್ಮಾತ್ ಏನಾದರೂ ಅಪಘಾತ ಸಂಭವಿಸಿದಲ್ಲಿ ನಿಮ್ಮ ತಂದೆ ತಾಯಿಯವರಿಗೆ ಶಿಕ್ಷೆ ಅನುಭವಿಸುತ್ತಾರೆ ನಿಮ್ಮ ಶಿಕ್ಷಣ ಹಾಳಾಗುತ್ತದೆ ಕೋರ್ಟ ಕಚೇರಿ ಎಂದು ಅಲೆದಾಡಬೇಕಾಗುತ್ತದೆ, ಹದಿಹರೆಯದ ಆಕರ್ಷಣೆಗಳು ತಾತ್ಕಾಲಿಕವಾಗಿರಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಪ್ರಬುದ್ಧತೆ ಇರಲಿ. ನಿಮ್ಮನ್ನು ಓದಿಸಲು ಪೋಷಕರು ಪಡುವ ಕಷ್ಟ ಮತ್ತು ಅವರ ನಂಬಿಕೆಯನ್ನು ಉಳಿಸಿಕೊಳ್ಳಿ. ವಿದ್ಯಾರ್ಥಿ ಜೀವನವು ಅತ್ಯಂತ ಅಮೂಲ್ಯವಾದದ್ದು. ಈ ಹಂತದಲ್ಲಿ ಪ್ರೀತಿ, ಪ್ರೇಮದಂತಹ ವಿಷಯಗಳಿಗೆ ಮರುಳಾಗದೆ ತಮ್ಮ ಭವಿಷ್ಯದ ಕಡೆಗೆ ಗಮನ ಹರಿಸುವುದು ಮುಖ್ಯ ಎಂದು ನ್ಯಾಯಾಧೀಶರು ಹೇಳಿದರು.
ಯುವಕರ ಹಕ್ಕು ಮತ್ತು ಕರ್ತವ್ಯಗಳು ಕುರಿತು ಆಕಾಶ ಆರ್ ವಜ್ಜರಮಟ್ಟಿ ವಕೀಲರು ಉಪನ್ಯಾಸ ನೀಡಿದರು
ಕೆ. ವಾಯ್. ಪಾಟೀಲ್ ಅವರು ವಂದರ್ನಾರ್ಪಣೆ ನೆರವೇರಿಸಿದರು.
ಈ ಸಂದರ್ಭದಲ್ಲಿ ರಾಮದುರ್ಗ ನ್ಯಾಯವಾದಿಗಳ ಸಂಘ,ಅಧ್ಯಕ್ಷರು ಎ. ಎ ಮುದಕವಿ, ಸಹಾಯಕ ಸರಕಾರಿ ಅಭಿಯೋಜಕರು ಮತ್ತು ಕಾರ್ಯನಿರತ ಕಾರ್ಯದರ್ಶಿಗಳು, ತಾಲೂಕು ಕಾನೂನು ಸೇವಾ ಸಮಿತಿ ರಾಮದುರ್ಗ ಡಿ. ಎಮ್. ನದಾಫ್. ರಾಮದುರ್ಗ ಸರಕಾರಿ ಪದವಿ ಪೂರ್ವ ಕಾಲೇಜು ಅಧ್ಯಕ್ಷರು ಪ್ರಾಂಶುಪಾಲರು, ಡಿ ಡಿ ಮುಜಾವರ, PSI ಸಂತೋಷ ದೂಳಖೆಡ, ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು



