ದೇವಾಂಗ ಸಮಾಜದ ಗಣ್ಯರಿಗೆ ಶ್ರೀ ದಯಾನಂದ ಪುರಿ ಸ್ವಾಮೀಜಿಯವರಿಂದ ಸನ್ಮಾನ

WhatsApp Group Join Now

ಬದಾಮಿ ಕರ್ನಾಟಕ ರಾಜ್ಯ ದೇವಾಂಗ ಸಂಘದ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಿಂದ ಅವಿರೋಧವಾಗಿ ಆಯ್ಕೆಯಾದ ರಾಮದುರ್ಗದ ಶ್ರೀ ಶಂಕರಣ್ಣ ಎಮ್. ಮುರುಡಿ ಹಾಗೂ ಶ್ರೀ ಪ್ರಕಾಶ ಸೂಳಿಭಾವಿ ಅವರನ್ನು ಇಂದು ಬನಶಂಕರಿಯಲ್ಲಿರುವ ದೇವಾಂಗ ಶಾಖಾಮಠದಲ್ಲಿ ಶ್ರೀ ಶ್ರೀ ಶ್ರೀ ದಯಾನಂದ ಪುರಿ ಸ್ವಾಮೀಜಿಯವರು ಆಶೀರ್ವದಿಸಿ, ಗೌರವಪೂರ್ವಕವಾಗಿ ಸನ್ಮಾನಿಸಿದರು.

​ಅವಿರೋಧವಾಗಿ ಆಯ್ಕೆಯಾಗಿರುವ ಈ ಇಬ್ಬರೂ ನಾಯಕರು ಸಮಾಜದ ಸಂಘಟನೆ ಮತ್ತು ಅಭಿವೃದ್ಧಿಗೆ ಶ್ರಮಿಸಲಿ ಎಂದು ಪೂಜ್ಯ ಶ್ರೀಗಳು ಈ ಸಂದರ್ಭದಲ್ಲಿ ಹಾರೈಸಿದರು.
​ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಯಕರು, “ದೇವಾಂಗ ಸಮಾಜದ ಬಂಧುಗಳು ನಮ್ಮಿಬ್ಬರ ಮೇಲೆ ಇಟ್ಟಿರುವ ನಂಬಿಕೆ ಹಾಗೂ ಜಗದ್ಗುರುಗಳ ಆಶೀರ್ವಾದದೊಂದಿಗೆ ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಸಮಾಜದ ಹಿತರಕ್ಷಣೆ ಮತ್ತು ಅಭಿವೃದ್ಧಿ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇವೆ,” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ದೇವಾಂಗ ಸಂಘದ ಅಧ್ಯಕ್ಷರಾದ ರವೀಂದ್ರ ಕಲಬುರ್ಗಿ, ರಾಮದುರ್ಗ ದೇವಾಂಗ ಸಮಾಜದ ಅಧ್ಯಕ್ಷರಾದ ಕುಬೇರ ಗರಡಿಮನಿ, ರಾಮದುರ್ಗ ತಾಲ್ಲೂಕಾ ನೇಕಾರ ಒಕ್ಕೂಟದ ಅಧ್ಯಕ್ಷರಾದ ನಾರಾಯಣ ಹೂಲಿ, ರಾಮದುರ್ಗ ಪುರಸಭೆ ಮಾಜಿ ಅಧ್ಯಕ್ಷರಾದ ಶಂಕರಣ್ಣ ಬೆನ್ನೂರ, ಸಂಕಣ್ಣ ಕರಡಿಗುಡ್ಡ, ದುರ್ವಾಸಪ್ಪ ಹೆಬ್ಬಳ್ಳಿ, ಅಶೋಕ ಸೋರಿ, ರುದ್ರಪ್ಪ ಪಾಟೀಲ್, ಚೇತನ ಮುರುಡಿ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

About The Author