ಸುಗೂರ ಎನ್ ಗ್ರಾಮದಲ್ಲಿ ಶ್ರೀ ಭೋಜಲಿಂಗೇಶ್ವರರ ಹಾಗೂ ಅಂಭಾ ಭವಾನಿ ಪಲ್ಲಕ್ಕಿ ಉತ್ಸವಕ್ಕೆ ಹರಿದು ಬಂದ ಭಕ್ತಸಾಗರ

WhatsApp Group Join Now

ಸಡಗರ-ಸಂಭ್ರಮದಿಂದ ನಡೆದ ಪಲ್ಲಕ್ಕಿ ಉತ್ಸವ; ಭಕ್ತರ ಭಕ್ತಿಸಂಭ್ರಮಕ್ಕೆ ಸಾಕ್ಷಿಯಾದ ಸುಗೂರ ಎನ್

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ಹೋಬಳಿ ವ್ಯಾಪ್ತಿಯ ಸುಗೂರ ಎನ್ ಗ್ರಾಮದ ಹೊರವಲಯದಲ್ಲಿರುವ ಸುಪ್ರಸಿದ್ಧ ಪವಾಡ ಪುರುಷ, ಸಚ್ಚಿದಾನಂದ ನಿತ್ಯ ನಿರಂಜನ ಸ್ವಯಂಸಿದ್ಧ ಶರಣ ಸದ್ಗುರು ಶ್ರೀ ಭೋಜಲಿಂಗೇಶ್ವರರ ಹಾಗೂ ಅಂಭಾ ಭವಾನಿ ದೇವಿಯ ಪಲ್ಲಕ್ಕಿ ಉತ್ಸವ ಮತ್ತು ಶ್ರೀಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಹಿರಗಪ್ಪ ತಾತನವರ ಭವ್ಯ ಶೋಭಾಯಾತ್ರೆ ಸೋಮವಾರ ಸೀಗೆ ಹುಣ್ಣಿಮೆ ದಿನದಂದು ಅಪಾರ ಭಕ್ತಸಾಗರದ ಮಧ್ಯೆ ಅದ್ದೂರಿಯಾಗಿ ಜರುಗಿತು.

ಮಧ್ಯಾಹ್ನ ಪೂಜ್ಯರ ನಿವಾಸದಲ್ಲಿ ಶ್ರೀ ಭೋಜಲಿಂಗೇಶ್ವರ ಹಾಗೂ ಅಂಭಾ ಭವಾನಿ ದೇವಿಯ ಪಲ್ಲಕ್ಕಿ ಪೂಜೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಗಣ್ಯರು ಹಾಗೂ ಭಕ್ತರ ಸಮ್ಮುಖದಲ್ಲಿ ನೆರವೇರಿತು. ಬಳಿಕ ಸಕಲ ಮಂಗಳ ವಾದ್ಯಗಳೊಂದಿಗೆ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಭಕ್ತರು ಮೆರವಣಿಗೆಯುದ್ದಕ್ಕೂ ಹೂಮಳೆಗೈದು ಜಯಘೋಷಣೆ ಮಾಡುವುದರ ಮೂಲಕ ಭಕ್ತಿ ಸಮರ್ಪಿಸಿದರು. ಪಲ್ಲಕ್ಕಿ ಮೆರವಣಿಗೆಯು ಪೂಜ್ಯರ ನಿವಾಸದಿಂದ ಆರಂಭಗೊಂಡು ಗ್ರಾಮದ ಪ್ರಮುಖ ರಸ್ತೆಗಳು, ಆಟೋ ಚೌಕ್, ಧ್ಯಾವಮ್ಮ ದೇವಸ್ಥಾನ ಚೌಕ್, ಮಲ್ಕಣ್ಣಪ್ಪ ದೇವಸ್ಥಾನ ಹಾಗೂ ಊರ ಅಗಸಿ ಕಮಾನ ವರೆಗೊ ಯಾದಗಿರ ಮಡಿವಾಳ ಸಮಾಜದ ವತಿಯಿಂದ ಪೂಜ್ಯರು ಕಾಲ್ನಡಿಗೆ ಹೋಗುವಾಗ ದಾರಿಯುದ್ದಕ್ಕೂ ಸೀರೆ(ರವಿಕೆ) ಹಾಸಿದರು. ಈ ಎಲ್ಲಾ ಸೇರಿದಂತೆ ವಿವಿಧ ಪ್ರಮುಖ ಬೀದಿಗಳ ಮೂಲಕ ಸಾಗಿತು. ಸಂಜೆ 6.30ಕ್ಕೆ ಶ್ರೀ ಭೋಜಲಿಂಗೇಶ್ವರ ದೇವಸ್ಥಾನವನ್ನು ತಲುಪಿತು.

ಮೆರವಣಿಗೆಯಲ್ಲಿ ಬ್ಯಾಂಡ್-ಬಾಜಾ, ಭಜಂತ್ರಿ, ಡೊಳ್ಳು ಕುಣಿತ, ಕೋಲಾಟ ಹಾಗೂ ಡಿಜೆ ಸೌಂಡ್‌ಗೆ ಯುವಕರು ಕುಣಿದು ಕುಪ್ಪಳಿಸಿದರು. ವಿವಿಧ ಬಣ್ಣಗಳ ಧ್ವಜಗಳು, ಭಜನಾ ತಂಡಗಳು ಹಾಗೂ ಸುಮಂಗಲೆಯರು ಹೊತ್ತ ಕಳಸಗಳು ಭಕ್ತರ ಗಮನ ಸೆಳೆದವು. ಸುಗೂರ ಎನ್ ಗೆಳೆಯರ ಬಳಗದವರ ಕುಣಿತವೂ ನೋಡುಗರಿಗೆ ವಿಶೇಷ ಆಕರ್ಷಣೆಯಾಗಿತ್ತು.

ಸುಮಾರು ಆರು ಗಂಟೆಗಳ ಕಾಲ ನಡೆದ ಪಲ್ಲಕ್ಕಿ ಮೆರವಣಿಗೆಯಲ್ಲಿ ಭಕ್ತರು ಉತ್ಸಾಹದಿಂದ ಪಾಲ್ಗೊಂಡರು. ಶ್ರೀ ಹನುಮಾನ್ ದೇವಸ್ಥಾನದ ಆವರಣದಲ್ಲಿ ಸುಗೂರ ಎನ್ ಗೆಳೆಯರ ಬಳಗದ ವತಿಯಿಂದ ಭಕ್ತರಿಗೆ ಅನ್ನಪ್ರಸಾದ ಸೇವೆ ವ್ಯವಸ್ಥೆ ಮಾಡಲಾಗಿತ್ತು.

ದೇವಸ್ಥಾನಕ್ಕೆ ಆಗಮಿಸಿದ ಪಲ್ಲಕ್ಕಿಯು ಗರ್ಭಗುಡಿಗೆ ಐದು ಸುತ್ತು ಪ್ರದಕ್ಷಿಣೆ ಹಾಕಿತು. ಬೆಳಗ್ಗೆಯಿಂದಲೇ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಮಹಾರಾಷ್ಟ್ರ, ಮುಂಬೈ ಸೇರಿದಂತೆ ವಿವಿಧ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ಭೋಜಲಿಂಗೇಶ್ವರ ಹಾಗೂ ಅಂಭಾ ಭವಾನಿ ದೇವಿಯ ದರ್ಶನ ಪಡೆದರು.

ನೈವೇದ್ಯ ಸಲ್ಲಿಸಲು ಹಾಗೂ ದರ್ಶನ ಪಡೆಯಲು ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ದೇವಸ್ಥಾನದ ಸುತ್ತಮುತ್ತ ಭಕ್ತರಿಂದ ಕಿಕ್ಕಿರಿದ ಜನಸ್ತೋಮ ಕಂಡುಬಂತು. ದೇವಸ್ಥಾನವು ವಿಶೇಷ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಶ್ರೀಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಹಿರಗಪ್ಪ ತಾತನವರ ದರ್ಶನ ಪಡೆದು ಪುನೀತರಾದರು.

ಉತ್ಸವದ ಹಿನ್ನೆಲೆಯಲ್ಲಿ ಸಮಸ್ತ ಸುಗೂರ ಎನ್ ಗ್ರಾಮದ ಭಕ್ತರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಹಾಗೂ ಅಗತ್ಯ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ದೇವಸ್ಥಾನದಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಮಲಿಂಗಯ್ಯ ಸ್ವಾಮಿ, ಜಗದೀಶ್ ಶಾಸ್ತ್ರಿ ಹಲಕಟ್ಟಿ. ಸೋಮಣ್ಣಗೌಡ ತುಮಕೂರು, ಶರಣಗೌಡ ಬೆನಕನಹಳ್ಳಿ, ಮಹೇಶ ಪಾಟೀಲ್, ಭೀಮರೆಡ್ಡಿಗೌಡ ಕುರಾಳ, ವಿಶ್ವನಾಥ ರೆಡ್ಡಿ ಸುಗೂರ ಎನ್, ಶರಣಗೌಡ ವಕೀಲರು, ಸಿದ್ದುಗೌಡ ಬೆನಕನಹಳ್ಳಿ, ಶರಣಗೌಡ ತುಮಕೂರು, ಸಂಗಾರೆಡ್ಡಿಗೌಡ ಮಾಲಿಪಾಟೀಲ್, ಪರ್ವತರೆಡ್ಡಿಗೌಡ ಕರಣಗಿ, ಬಸ್ಸುಗೌಡ ಮಾಲಿಪಾಟೀಲ್, ಮಹಾದೇವ ರೆಡ್ಡಿ ತುಮಕೂರು, ಬಸ್ಸು ಪಾಟೀಲ್ ಮಾರಡಗಿ, ಈರಣ್ಣ ಬಲಕಲ್ ಎಲ್‌ಐಸಿ ಯಾದಗಿರಿ, ಮಲ್ಲಪ್ಪ ಅರಿಕೇರಿ ಯಾದಗಿರಿ, ಶಂಕರಗೌಡ ಮಾಸ್ತರ ಲಿಂಗಸುಗೂರು, ಮಹಾಂತೇಶಗೌಡ ಲಿಂಗಸುಗೂರು, ಪ್ರಭು ಹೂಗಾರ, ನರೇಂದ್ರ ಗುತ್ತಿ, ಮಹಾದೇವಪ್ಪ ಸಾಹುಕಾರ್, ಮಲ್ಲಿನಾಥ ಚಿನ್ನಾಪೊಟೋ ಸ್ಟುಡಿಯೋ, ಬಸವರಾಜ ಹಡಪದ ಸುಗೂರ, ಸಾಬಣ್ಣ ಚಿತ್ರಕಲಾ ಶಿಕ್ಷಕರು, ಸಿದ್ದುಗೌಡ ಕುರಾಳ, ಪ್ರವೀಣ ಪಾಟೀಲ್ ತುಮಕೂರು, ಭಾಬು ಪಾಟೀಲ್, ರಾಜೇಂದ್ರ ನಾಯ್ಕೋಡಿ, ಶಂಕರ ಬೇನಿಗಿಡ, ಅಯ್ಯಪ್ಪ ಪೂಜಾರಿ. ಬಾಸುಮೀಯ್ಯಾ ಬಂಟ್ನಳ್ಳಿ, ಯಮನಪ್ಪ ತಳವಾರ, ಬಸವರಾಜ ಹವಾಲ್ದಾರ ಯಾದಗಿರಿ, ಬಸವರಾಜ ಕುಂಬಾರ. ಶಮ್ಮು ಗೌಂಡಿ, ಸಾಬಣ್ಣ ಹಂಗನಹಳ್ಳಿ, ವಿಶ್ವನಾಥ ಸ್ವಾಮಿ ಯಾದಗಿರಿ, ಮಲ್ಲಿಕಾರ್ಜುನ ನಾನಾಕಳ್ಳಿ.ಸಂಗಣ್ಣ ಮಂಡ್ನಾಳ. ಹೈಮದ್ ತುನ್ನೂರ, ವಿರುಪಾಕ್ಷಿ ಭಾವಿ, ಮಲ್ಲಿಕಾರ್ಜುನ ಹೊಳಮಾರಡಗಿ, ಅನೀಲಕುಮಾರ ಚವ್ಹಾಣ, ಭೋಜಪ್ಪ ಚಿಗರಳ್ಳಿ, ಭೀಮು ಸುಗೂರ ಯಾದಗಿರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author