ರೈತನೇ ದೇಶದ ಬೆನ್ನೆಲುಬು ಅನ್ನದಾತ ಎಂದು ಬರಿ ಬಾಯಿ ಮಾತಿನಲ್ಲಿ ಸರಕಾರ ಹಾಗೂ ರಾಜಕಾರಣಿಗಳು ಹೇಳೋದಷ್ಟೇ ಅನ್ನ ನೀಡುವ ಅನ್ನದಾತರು ಬೀದಿಗೆ ಬಂದು ಹೋರಾಟ ಮಾಡುವ ಕೂಗು ಕೇಳುತ್ತಿಲ್ಲವೇ ರೈತರು ಕಣ್ಣೀರು ಹಾಕುತ್ತಿದ್ದಾರೆ ಮುಂದೊಂದು ದಿನ ಕಷ್ಟ ಅನುಭವಿಸುವ ಕಾಲ ಬರುತ್ತದೆ ಎಚ್ಚರವಿರಿ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ರೈತರಿಗೆ ಒಂದಾದರೂ ಯೋಜನೆ ನೀಡಿದ್ದರೆ ರೈತರು ನಿಮ್ಮನ್ನು ಎಂದಿಗೂ ಮರೆಯುತ್ತಿರಲಿಲ್ಲ ಎಂದು ಮುಖಂಡ ಲಕ್ಷ್ಮಣ ಸಪ್ತಸಾಗರ ಆಕ್ರೋಶ ವ್ಯಕ್ತಪಡಿಸಿದರು.
ಹಳ್ಳೂರ ಗ್ರಾಮದ ಗುಬ್ಬಿ ಬಸ್ ಸ್ಟ್ಯಾಂಡ್ ಮುಧೋಳ ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಕರ್ನಾಟಕ ಬಂದ್ ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ನಡೆದ ರೈತ ಪ್ರತೀ ಭಟನೆಯಲ್ಲಿ ನೂರಾರು ಜನ ರೈತರು,ಎತ್ತುಗಳ ಬಂಡಿ, ಹೆಣ್ಮುಕ್ಕಳು ರಸ್ತೆ ಮೇಲೇ ಕುಳಿತು ಹೆದ್ದಾರಿ ಬಂದ ಮಾಡಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಅಣ್ಣೇಶ ಬಾಗೊಡಿ ಮಾತನಾಡಿ ನಾವೆಲ್ಲ ರೈತ ಕುಟುಂಬದವರು ಹೆಚ್ಹು ಕಬ್ಬು ಬೆಳೆಯುತ್ತಿದ್ದೇವೆ ಸೂಕ್ತ ಬೆಲೆ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು. ಗ್ರಾಮದಲ್ಲಿ ಸ್ವಯಂ ಪ್ರೇರಿತವಾಗಿ ಬೆಳಗ್ಗೆಯಿಂದಲೇ ಅಂಗಡಿ-ಮುಂಗಟ್ಟು ಬಂದ್! ಮಾಡಿ ಬೆಂಬಲ ಸೂಚಿಸಿ ದರು. ವ್ಯಾಪಾರ ವಹಿವಾಟು ಶನಿವಾರ ಸಂತೆ ಸ್ಥಗಿತಗೊಳಿಸಿದರು.
ಕಬ್ಬು ಬೆಳೆಗಾರರ ವಿವಿಧ
ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ಗೆ ಹಳ್ಳೂರ ಗ್ರಾಮದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಗ್ರಾಮದಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಅಂಗಡಿ-ಮುಂಗಟ್ಟುಗಳು ಹಾಗೂ ವ್ಯಾಪಾರ ವಹಿವಾಟು ಸ್ಥಗಿತಗೊಳಿಸುವ ಮೂಲಕ ಹಾಗೂ ರಸ್ತೆಗಳನ್ನು ಸಹ ಬಂದ ಮಾಡಿ ಬಂದ ಕರೆಗೆ ಬೆಂಬಲ ಸೂಚಿಸಲಾಗಿದೆ.
ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸಬೇಕು ಹಾಗೂ ರೈತರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಗ್ರಾಮದಲ್ಲಿ ರೈತರು ಸ್ವಯಂಪ್ರೇರಿತವಾಗಿ ಬಂದ್ಗೆ ಬೆಂಬಲ ಸೂಚಿಸಿ, ಹೋರಾಟದಲ್ಲಿ ಭಾಗವಹಿಸುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆದು ಪ್ರತಿ ಟನ್ ಕಬ್ಬಿಗೆ 5500 ಬೆಂಬಲ ಬೆಲೆ ನೀಡಬೇಕೆಂದು ಸರಕಾರವನ್ನು ಒತ್ತಾಯಿಸಿದರು.
ಕಬ್ಬು ಬೆಳೆಗಾರರ ಹೋರಾಟಕ್ಕೆ ವಿವಿಧ ಸಂಘಟನೆಗಳು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿರುವುದು ಕಂಡು ಬಂದಿದೆ. ಈ ಸಮಯದಲ್ಲಿ ರಮೇಶ ಲೋಕನ್ನವರ. ಲಕ್ಷ್ಮಣ ಕತ್ತಿ.ಈರಪ್ಪ ಪಾಲಬಾಂವಿ.ಶಂಕರ ಅಂಗಡಿ.ಗಂಗಪ್ಪ ಕಾಪಸಿ.ಪ್ರಕಾಶ ರಾಮದುರ್ಗ.ಲಕ್ಕಪ್ಪ ಸಪ್ತಸಾಗರ.ಶ್ರೀಕಾಂತ ಕೌಜಲಗಿ. ಯಲ್ಲಪ್ಪ ಮರಿಚಂಡಿ.ಶಿವಪ್ಪ ಲೋಕನ್ನವರ. ಕೆಂಪಣ್ಣ ತೋಟಗಿ.ಪ್ರಶಾಂತ ಪಾಲಬಾಂವಿ.ಸಂಗಪ್ಪ ಕೊಂಗಾಲಿ. ಬಾಳಪ್ಪ ಬಾಗೊಡಿ. ಸುಜಾತಾ ಹಿರೇಮಠ. ಮಾದೇವಿ ಯಕ್ಕುಂಡಿ.ಶಾಂತವ್ವ ಬಡಿಗೇರ. ನೀಲವ್ವ ಹಿರೇಮಠ.ನಾಗಪ್ಪ ಬಿಸನಾಳ ಸೇರಿದಂತೆ ಆನೇಕ ರೈತ ಬಾಂದವರಿದ್ದರು.ಸರ್ವರಿಗೂ ಊಟದ ವ್ಯವಸ್ಥೆ ನಡೆಯಿತು.ಮೂಡಲಗಿ ಹಾಗು ಗೋಕಾಕ ತಾಲೂಕಿನ ಮುಖ್ಯರಸ್ತೆ ತೋಟ, ಕಾಲು ದಾರಿ ಕಿನಾಲ್ ರಸ್ತೆ ಅಲ್ಲಲ್ಲೇ ರಸ್ತೆ ಮೇಲೆ ಮುಳ್ಳಿನ ಕಂಟಿ ,ಟ್ರ್ಯಾಕ್ಟರ್ ನಿಲ್ಲಿಸಿ ರಸ್ತೆ ಬಂದ್ ಮಾಡಿದ್ದು ಕಂಡುಬಂದಿತ್ತು. ಸಾರ್ವಜನಿಕರು ಅಲೆದಾಡುವ ಪರಿಸ್ಥಿತಿ ಬಂದಿತು. ಜನರು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದರು.



