ರೈತರ ಹೋರಾಟಕ್ಕೆ ಸವದತ್ತಿ ವಕೀಲರ ಸಂಘದಿಂದ ಬೆಂಬಲ

WhatsApp Group Join Now

ಸವದತ್ತಿ ತಾಲೂಕಿನಾದ್ಯಂತ ಕಬ್ಬು ಬೆಳೆಗೆ ಬೆಲೆ ಹೆಚ್ಚಳ ಕುರಿತು ಪ್ರತಿಭಟನೆಯನ್ನು ಮಾಡಲಾಯಿತು. ಅದೇ ರೀತಿಯಾಗಿ ಸವದತ್ತಿಯಲ್ಲಿ ರೈತರು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಗೆ ಸವದತ್ತಿಯ ವಕೀಲರ ಸಂಘದಿಂದ ಪ್ರತಿಭಟನೆಗೆ ಬೆಂಬಲ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀ ಜೆ ಬಿ ಮುನವಳ್ಳಿ ವಕೀಲರು ಮತ್ತು ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಸ್ ಎಸ್ ಕಾಳಪ್ಪನವರ, ಶ್ರೀ ಎಂ ಎಂ ಎಲಿಗಾರ, ವಿ ವಾಯ್ ಹನಗೋಜಿ, ಶಿರಹಟ್ಟಿಮಠ , ಆರ್ ಬಿ ಮುತ್ತಗಿ , ಎಮ್ ಎಫ್ ಬಾಡಿಗೇರ ಶ್ರೀಮತಿ ನಿರ್ಮಲ ವಂಟಮುರಿ ಶ್ರೀಮತಿ ವಿನೋದಾ ಪಾಟೀಲ್, ಶ್ರೀಮತಿ ರೇಣುಕಾ ತೋಟಗಿ , ಪ್ರತಿಭಾ ಉಪ್ಪಾರ, ಕುಮಾರಿ ಪೂಜಾ ಗೊರವಿನಕೊಳ್ಳ , ಎ ಆಯ್ ಜಂಗ್ಲೀಸಾಬನವರ ಜೆ ಎಂ ತಾಂಬೋಳಿ, ವಿವೇಕ ಮುನವಳ್ಳಿ , ಎಚ್ ಎನ್ ಹುಡೆದ ಮತ್ತು ಪ್ರಶಾಂತ ನೇಗೂರ , ಸೊನ್ನದ ವಕೀಲರು ಪ್ರತಿಭಟನೆಯಲ್ಲಿ ಹಾಜರಾಗಿದ್ದರು.

ಪ್ರತಿಭಟನೆಯನ್ನು ಉದ್ದೇಶಿಸಿ ಶ್ರೀ ಬಿ ಕೆ ಕಟಕೋಳ, ಕುಮಾರಿ ಜಾಸ್ಮಿನ್ ಎಸ್ ಕಾಂಗ್ರೇಸಕೊಪ್ಪ , ಶ್ರೀಮತಿ ಎಸ್ ವಾಯ ಶಿಬಾರಗಟ್ಟಿ ಅಧ್ಯಕ್ಷರಾದ ಶ್ರೀ ಜೆ ಬಿ ಮುನವಳ್ಳಿ ವಕೀಲರ ಸಂಘದ ಕಾರ್ಯದರ್ಶಿಗಳಾದ ಶ್ರೀ ಎಸ್ ಎಸ್ ಕಾಳಪ್ಪನವರ ವಕೀಲರು ಒಬ್ಬೊಬ್ಬರಾಗಿ ಮಾತನಾಡಿ ರಾಜ್ಯದಲ್ಲಿ ರೈತರಿಗೆ ಅವರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಅದರಲ್ಲೂ ಕಬ್ಬು ಬೆಳೆಗಾರಿಗೆ ತುಂಬಾ ಅನ್ಯಾಯವಾಗುತ್ತಿದೆ ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸಬೇಕು ಅನ್ನದಾತರಿಗೆ ಅನ್ಯಾಯ ಆಗಬಾರದೆಂದು ಇದು ತುಂಬಾ ದಿನಗಳ ಬೆಡಿಕೆಯಾಗಿದೆ ಕಾರಣ ಸರ್ಕಾರ ಈ ಕುರಿತು ಎಚ್ಚೆತ್ತುಕೊಂಡು ಸೂಕ್ತ ಬೆಲೆ ಕೂಡಲೇ ನಿಗದಿಪಡಿಸಬೇಕೆಂದು ಮಾತನಾಡಿ ಸವದತ್ತಿ ತಹಶೀಲ್ದಾರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.

ಸವದತ್ತಿಯ ವಕೀಲರ ಸಂಘದಿಂದ ಎಲ್ಲ ರೈತರಿಗೂ ಸದಾಕಾಲ ಬೆಂಬಲಿಸುತ್ತೇವೆಂದು ತಿಳಿಸಲಾಯಿತು.

About The Author