ಧಾರವಾಡ ಜಿಲ್ಲೆಯ ಪಿಯುಸಿ ದ್ವಿತೀಯ ಫಲಿತಾಂಶದಲ್ಲಿ ಸುಧಾರಣೆ; 23 ನೇ ರ್ಯಾಂಕ್‍ದಿಂದ ರಾಜ್ಯಕ್ಕೆ 17 ನೇ ರ್ಯಾಂಕ್‍ಗೆ ಬಡ್ತಿ; ಮಿಷನ್ ವಿದ್ಯಾಕಾಶಿಯಲ್ಲಿ ಪ್ರಾಥಮಿಕ ಮತ್ತು ಪಿಯುಸಿ ಶಿಕ್ಷಣಕ್ಕೆ ಈ ವರ್ಷ ಹೆಚ್ಚು ಆದ್ಯತೆ: ಜಿಲ್ಲಾಧಿಕಾರಿ ದಿವ್ಯ ಪ್ರಭು
ಧಾರವಾಡ ಜಿಲ್ಲೆಯಲ್ಲಿ ಶೈಕ್ಷಣಿಕ ಸುಧಾರಣೆ ಆರಂಭವಾಗಿದ್ದು, ಕಳೆದ ವರ್ಷ ಧಾರವಾಡ ಜಿಲ್ಲೆ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶದಲ್ಲಿ 23ನೇ ರ್ಯಾಂಕನಲ್ಲಿತ್ತು; ಆದರೆ ಈ ವರ್ಷ ಅದು ರಾಜ್ಯಕ್ಕೆ 17ನೇ ರ್ಯಾಂಕ್‍ಗೆ ಬಡ್ತಿ ಪಡೆದಿದೆ. ಜೊತೆಗೆ ರಾಜ್ಯಕ್ಕೆ ಕಲಾ ವಿಭಾಗದಲ್ಲಿ 2, ವಾಣಿಜ್ಯ ವಿಭಾಗದಲ್ಲಿ 2 ಮತ್ತು ವಿಜ್ಞಾನ ವಿಭಾಗದಲ್ಲಿ 5 ರ್ಯಾಂಕ್‍ಗಳನ್ನು ಜಿಲ್ಲೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದು, ಒಟ್ಟು ಒಂಬತ್ತು ರ್ಯಾಂಕ್‍ಗಳು ಜಿಲ್ಲೆಗೆ ಬಂದಿದೆ ಎಂದು ಮಿಷನ್ ವಿದ್ಯಾಕಾಶಿ ಯೋಜನೆಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು…
