ಪತ್ರಕರ್ತರನ್ನು ನಿಂದಿಸಿ ಧಮ್ಕಿ ಹಾಕಿದ ನೆಲಮಂಗಲ ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ವಿರುದ್ದ ಪತ್ರಕರ್ತರ ಪ್ರತಿಭಟನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕು ಪತ್ರಕರ್ತರನ್ನು ಬಿಜೆಪಿ ತಾಲ್ಲೂಕು ಅಧ್ಯಕ್ಷ ಜಗದೀಶ್ ಚೌದ್ರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿರುವ ವಿಚಾರವಾಗಿ ನೆಲಮಂಗಲ ತಾಲ್ಲೂಕು ಸ್ವಾಭಿಮಾನಿ ಪತ್ರಕರ್ತರುಗಳು ಪ್ರೆಸ್ ಕ್ಲಬ್ ಕೌನ್ಸಿಲ್ ನೇತೃತ್ವದಲ್ಲಿ ನೆಲಮಂಗಲ ತಾಲ್ಲೂಕು ಕಚೇರಿ ಎದುರು ಜಗದೀಶ್ ಚೌದ್ರಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ರೌಡಿ ಶೀಟರ್ ಜಗದೀಶ್ ಚೌದ್ರಿರವರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿದರು. ನೆಲಮಂಗಲ ಪತ್ರಕರ್ತರ ಪ್ರತಿಭಟನೆಗೆ ವಕೀಲ್ ಸಾಬ್ ಎಂದೇ ಕ್ಯಾತಿಗಳಿಸಿರುವ ಬಿಗ್ ಬಾಸ್ ಸ್ಪರ್ದಿ ಲಾಯೆರ್ ಜಗದೀಶ್ ರವರು…
