ಹುಕ್ಕೇರಿಯಲ್ಲಿ ಅಕ್ರಮ ಪಡಿತರ ದಾಸ್ತಾನು ಮೇಲೆ ದಾಳಿ 7.14 ಲಕ್ಷ ಮೌಲ್ಯದ 420 ಚೀಲಗಳುಳ್ಳ 210 ಕ್ವಿಂಟಲ್ ಪಡಿತರ ಅಕ್ಕಿ ವಶ


ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು
ಹುಕ್ಕೇರಿ ಪಟ್ಟಣ ಹೊರವಲಯದ ಬಸ್ತವಾಡ ರಸ್ತೆ ಬಳಿಯ ತೋಟದ ಮನೆಯೊಂದರ ಮೇಲೆ ದಾಳಿ ನಡೆಸಿದರು. ದಾಳಿ ವೇಳೆ ಅಕ್ರಮವಾಗಿ ಕೂಡಿಟ್ಟ
7.14 ಲಕ್ಷ ಮೌಲ್ಯದ 420 ಚೀಲಗಳುಳ್ಳ 210
ಕ್ವಿಂಟಲ್ ಪಡಿತರ ಅಕ್ಕಿ ಹಾಗೂ 15 ಲಕ್ಷ ಬೆಲೆಬಾಳುವ
ಲಾರಿ ವಶಪಡಿಸಿಕೊಂಡು
ಇಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಹುಕ್ಕೇರಿ ಪಟ್ಟಣದ ರವಿ ಶಿವಾನಂದ ಗಜಬರ ಹಾಗೂ ರಾಯಬಾಗ ತಾಲೂಕು ನಿಪನಾಳ ಗ್ರಾಮದ ಲಾರಿ ಚಾಲಕ ಸಂತೋಷ ಶಿವಾಜಿ ಕುರಣಿ ಎಂಬುವವರ ಮೇಲೆದೂರು ದಾಖಲಾಗಿದೆ.
ಆರೋಪಿ ರವಿ ಗಜಬರ ಈತ ಪ್ಲಾಸ್ಟಿಕ್ ಚೀಲಗಳಲ್ಲಿ
ತುಂಬಿದ ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ
ದಾಸ್ತಾನು ಮಾಡಿ ಲಾರಿಯಲ್ಲಿ ಮಾರಾಟ ಮಾಡಲು
ಸಾಗಿಸುತ್ತಿದ್ದ ವೇಳೆ ಮಾಲು ಸಮೇತ ಸಿಕ್ಕಿಬಿದ್ದಿದ್ದಾನೆ ಎಂದು
ಪೊಲೀಸರು ತಿಳಿಸಿದ್ದಾರೆ.
ಆಹಾರ ನಿರೀಕ್ಷಕ ವೀರಭದ್ರ ಶೇಬನ್ನವರ ಅವರು
ಆರೋಪಿಗಳ ಮೇಲೆ ಕರ್ನಾಟಕ ಅಗತ್ಯ ವಸ್ತುಗಳ ಕಾಯಿ
1955ರ ಕಲಂ 3 ಮತ್ತು 7ನೇ ಅಡಿಯಲ್ಲಿ ದೂರು
ನೀಡಿದ್ದಾರೆ. ಈ ಕುರಿತು ಹುಕ್ಕೇರಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದ್ದು ತನಿಖೆ ನಡೆದಿದೆ
