ಸೌಕರ್ಯೇ.. ಧಣಿಗಳೇ.. ಅವ್ವಾರೇ.. ಜಲ್ದೀ ಬೆಣ್ಣೆ ಕಾಳು ಕಡಿ.. ದಕ್ಷಿಣೆ ಕೊಡ್ರೆವ್ವೋ… ಎಂದು ಮನೆ ಬಾಗಿಲಲ್ಲಿ ಕುಳಿತು… ತನ್ನಿರವ್ವ, ಅಡ್ಡಡ್ಡ ಮಳೆ ಬಂದ್ ದೊಡ್ಡ ದೊಡ್ಡ ಕೆರೆಗಳೆಲ್ಲಾ ಒಡೆದಾವೂ…” ಎಂದು ಮಹಿಳೆಯರು ಜೋಕುಮಾರನ ಪದಗಳನ್ನು ಹಾಡುತ್ತಾ ಬೇಡಿಕೊಳ್ಳುತ್ತಾರೆ ಜೋಕುಮಾರ ಅಥವಾ ಜೋಕುಮಾರ ಸ್ವಾಮಿ ಎಂದರೆ ಕರ್ನಾಟಕದ ಗ್ರಾಮೀಣ ಭಾಗದಲ್ಲಿ, ಮುಖ್ಯವಾಗಿ ಉತ್ತರ ಹಾಗೂ ಮಧ್ಯ ಕರ್ನಾಟಕದಲ್ಲಿ ಮಳೆ, ಸಮೃದ್ಧ ಫಸಲು ಮತ್ತು ಒಳಿತನ್ನು ಬಯಸಿ ಆಚರಿಸಲಾಗುವ ಪ್ರಮುಖ ಜನಪದ ಹಬ್ಬ ಹಾಗೂ ಸಾಂಪ್ರದಾಯಿಕ ಆಚರಣೆ.
ಗಣೇಶ ಹಬ್ಬದ ವಿಸರ್ಜನೆ ಅಥವಾ ಭಾದ್ರಪದ ಮಾಸದ ಅಷ್ಟಮಿಯ ನಂತರ ಜೋಕುಮಾರನ ಹಬ್ಬ ಹಾಗೂ ಗ್ರಾಮ ಪರ್ಯಟನೆ ಆರಂಭವಾಗುತ್ತದೆ.
ಮಳೆಗಾಗಿ ಪ್ರಾರ್ಥನೆ: ಭೂಮಿಯಲ್ಲಿ ಮಳೆಯ ಅಭಾವ ನೀಗಿಸಲು ಶಿವನು ಭೂಲೋಕಕ್ಕೆ ಕಳುಹಿಸಿದ ದೇವದೂತರಲ್ಲಿ ಜೋಕುಮಾರನೂ ಒಬ್ಬ ಎಂಬ ನಂಬಿಕೆಯಿದೆ. “ಬೇಗನೇ ಬೆಣ್ಣೆಯ ತನ್ನಿರವ್ವ, ಅಡ್ಡಡ್ಡ ಮಳೆ ಬಂದ್ ದೊಡ್ಡ ದೊಡ್ಡ ಕೆರೆಗಳೆಲ್ಲಾ ಒಡೆದಾವೂ…” ಎಂದು ಮಹಿಳೆಯರು ಜೋಕುಮಾರನ ಪದಗಳನ್ನು ಹಾಡುತ್ತಾ ಬೇಡಿಕೊಳ್ಳುತ್ತಾರೆ.ಮೂರ್ತಿಯ ತಯಾರಿಕೆ: ಜೇಡಿಮಣ್ಣಿನಿಂದ ಜೋಕುಮಾರನ ಮುಖವನ್ನು ತಯಾರಿಸಿ, ಕಪ್ಪು ಬಣ್ಣ ಬಳಿದು, ಬೇವಿನ ಎಲೆಗಳ ಮಧ್ಯೆ ಕೂರಿಸಿ ಸಂಪ್ರದಾಯದಂತೆ ಪೂಜಿಸಲಾಗುತ್ತದೆ.ಗ್ರಾಮ ಸಂಚಾರ ಮತ್ತು ಅಂತ್ಯ: ಹಬ್ಬದ ದಿನಗಳಲ್ಲಿ ಜೋಕುಮಾರನ ಮೂರ್ತಿಯನ್ನು ಹೊತ್ತು ಮನೆಮನೆಗೆ ತಿರುಗಿ ಧಾನ್ಯ ಹಾಗೂ ದಕ್ಷಿಣೆ ಪಡೆಯಲಾಗುತ್ತದೆ. ಕೊನೆಯಲ್ಲಿ ಈ ಮೂರ್ತಿಯನ್ನು ನೀರಿನಲ್ಲಿ (ಬಾವಿ ಅಥವಾ ನದಿ) ವಿಸರ್ಜಿಸಲಾಗುತ್ತದೆ. ಜೋಕುಮಾರ ಗಂಗೆಯಲ್ಲಿ ವಿಲೀನಗೊಂಡು ಸ್ವರ್ಗಕ್ಕೆ ತೆರಳುತ್ತಾನಂತೆ , ಆತ ಗಂಗೆ ಪಾರ್ವತಿಯೊಡಗೂಡಿರುವ ಪರಮೇಶ್ವರನಿಗೆ. ಭೂ ಲೋಕದಲ್ಲಿ ಭಾರೀ ಬರ ಅವರಿಸಿದ್ದು , ಮಳೆ ಬೆಳೆಯ ಅನಿವಾರ್ಯವಿದೆ ಎಂದು ವರದಿ ಒಪ್ಪಿಸುತ್ತಾನಂತೆ. ಅಗ ಪರಮೇಶ್ವರ ದೇವರು , ಗಂಗೆಯನ್ನು ಭೂಮಿಯ ಪಾತಾಳದಿಂದ ಭೂಮಂಡಲದ ಮೇಲ್ಭಾಗಕ್ಕೆ ತೆರಳುವಂತೆ ಸೂಚಿಸುತ್ತಾನಂತೆ. ಹಾಗೂ ವರಣನಿಗೆ ಮೊಡದ ಮೂಲಕ ಸಾಕಷ್ಟು ಮಳೆಯನ್ನೀಡೆಂದು ಸೂಚಿಸುತ್ತಾನಂತೆ. ಜೋಕುಮಾರನ ಜಾನಪದೀಯ ಕಥೆಗಳು , ಹಾಗೂ ಜೋಕಪ್ಪನನ್ನು ಅರಾಧಿಸುವ ಜಾನಪದ ಹಾಡುಗಳು ಈ ಸಾರಂಶವನ್ನು ಸಾರುತ್ತವೆ. ಕಾಕತಾಳೀಯವೋ ಪವಾಡವೋ ಎಂಬಂತೆ ಜೋಕುಮಾರ ಗಂಗೆ ಕಂಡ ಮರುದಿನಗಳಲ್ಲಿ , ಬಹುತೇಕ ಕಡೆ ದಾಖಲು ಎಂದೆಂದೂ ಕಂಡರಿಯದ ಪ್ರಮಾಣದಷ್ಟು ಮಳೆ ಬರುತ್ತದೆ. ಕೆಲವೆಡೆಗಳಲ್ಲಿ ಹವಾಮಾನ ಸನ್ನಿವೇಶ ತದ್ವಿರುದ್ಧವಾಗಿದ್ದರೂ ಕೂಡ , ದಿಢೀರ್ ಹವಾಮಾನ ಬದಲಾವಣೆಗೊಂಡು ಮಳೆ ಭೂಮಿಗೆರೆದು ತಂಪನ್ನೀಡಿರುವ ಸನ್ನಿವೇಶಗಳಿವೆಯಂತೆ.



