
WhatsApp Group
Join Now
ವಿಜಯಪುರ: ಅಯೋಧ್ಯೆಯಲ್ಲಿ ರಾಮ ಮಂದಿರದ
ಉದ್ಘಾಟನೆ ಹಿನ್ನೆಲೆಯಲ್ಲಿ ವಿಜಯಪುರದ ಖಾಸಗಿ
ಆಸ್ಪತ್ರೆಯೊಂದು ಗುರುವಾರದಿಂದ (ಜ.18) ಜನವರಿ 22ರವರೆಗೆ
ಉಚಿತ ಹೆರಿಗೆ ಮಾಡಿಸುವುದಾಗಿ ಘೋಷಿಸಿದೆ.
ವಿಜಯಪುರದಲ್ಲಿ ಜೆಎಸ್ಎಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ನಡೆಸುತ್ತಿರುವ ‘ಶ್ರೀ ಸಿದ್ದೇಶ್ವರ ಲೋಕ ಕಲ್ಯಾಣ ಚಾರಿಟೆಬಲ್
ಟ್ರಸ್ಟ್’ ಈ ನಿರ್ಧಾರ ಪ್ರಕಟಿಸಿದೆ.
ಅಯೋಧ್ಯೆಯಲ್ಲಿ ಇದೇ ಸೋಮವಾರ(ಜ.22) ನಡೆಯಲಿರುವ
‘ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ’ಯನ್ನು ಆಚರಿಸಲು
ಇಂದಿನಿಂದ(ಗುರುವಾರ) ಜನವರಿ 22 ರವರೆಗೆ ನಮ್ಮ
ಆಸ್ಪತ್ರೆಯಲ್ಲಿ ಎಲ್ಲಾ ಹೆರಿಗೆಯನ್ನು ಉಚಿತವಾಗಿ
ಮಾಡಲಾಗುತ್ತದೆ. ಐದು ದಿನಗಳ ನಿರ್ದಿಷ್ಟ ಅವಧಿಗೆ ನಮ್ಮ
ಆಸ್ಪತ್ರೆಯಲ್ಲಿ ನಡೆಯುವ ಎಲ್ಲಾ ಹೆರಿಗೆಗಳನ್ನು ಉಚಿತವಾಗಿ
ಮಾಡಲಾಗುತ್ತದೆ ಎಂದು ಆಸ್ಪತ್ರೆಯ ಸಿಬ್ಬಂದಿಯೊಬ್ಬರು
ತಿಳಿಸಿದ್ದಾರೆ.