12 August 2026
Advertisement
ರಾಜ್ಯ

ಮತದಾನ ಜಾಗೃತಿ ಜಾಥಾಕ್ಕೆ ತಾಲೂಕಾ ಪಂಚಾಯತ್, ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರ ಚಾಲನೆ ನೀಡಿದರು.

WhatsApp Group Join Now

ರಾಮದುರ್ಗ ತಾಲೂಕಾ ಸ್ವೀಪ್ ಸಮಿತಿ, ತಾಲೂಕಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯ ಪ್ರಯುಕ್ತ ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಜಾಥಾಕ್ಕೆ ತಾಲೂಕಾ ಪಂಚಾಯತ್, ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರ ಚಾಲನೆ ನೀಡಿ ಮಾತನಾಡಿದ ಅವರು, ಚುನಾವಣೆ ದೇಶದ ಭವಿಷ್ಯ ಹಾಗೂ ಪ್ರಜಾಪ್ರಭುತ್ವದ ಯಶಸ್ವಿಗೆ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕರೆ ನೀಡಿ, ಪ್ರಜ್ಞಾವಂತ ಪ್ರಜೆಗಳಿಂದ ಮಾತ್ರ ಪ್ರಜಾ ಪ್ರಭುತ್ವದ ಯಶಸ್ವಿ ಸಾಧ್ಯವಿದೆ. ಎಲ್ಲರೂ ತಪ್ಪದೇ ತಮ್ಮ ಭೂತ್‌ಗೆ ಬಂದು ಮತದಾನ ಮಾಡಬೇಕು ಎಂದು ತಿಳಿಸಿದರು.
ಪಟ್ಟಣದ ಮಿನಿ ವಿಧಾನಸೌಧ ಆವರಣದಿಂದ ಹೊರಟ ಮತದಾನ ಜಾಗೃತಿ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಹಳೇ ಬಸ್ ನಿಲ್ದಾಣದ ಹತ್ತಿರ ಮಾನವ ಸರಪಳಿ ನಿರ್ಮಿಸಿ, ಕಡ್ಡಾಯ ಮತದಾನ ಘೋಷಣೆ ಕೂಗಿದರು.
ಈ ಸಂದರ್ಭಧಲ್ಲಿ ತಾಲೂಕಾ ಮಟ್ಟದ ವಿವಿಧ ಅಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಕಾರ್ಯಕರ್ತರು ಹಾಗೂ ಅಧಿಕಾರಿಗಳು ಇದ್ದರು.

About The Author