ರಾಜ್ಯ ಕ್ರಿಕೆಟ್ ತಂಡಕ್ಕೆ ಶ್ರೇಯಾ ಚವ್ಹಾಣ ಆಯ್ಕೆ.

WhatsApp Group Join Now

ವಿಜಯಪೂರ : 19 ವಯಸ್ಸಿನ ಕರ್ನಾಟಕ ರಾಜ್ಯ ಮಹಿಳಾ ಟಿ-20 ಹಾಗೂ ಏಕದಿನ ಸರಣಿಗೆ ವಿಜಯಪೂರ ನಗರದ ಪ್ರತಿಷ್ಟಿತ ಎಸ್.ಜೆ.ಬಿ. ಪಿ.ಯು. ಕಾಲೇಜಿನಲ್ಲಿ ಪ್ರಥಮ ಪಿ.ಯು. ವಿಜ್ಞಾನ
ವಿಭಾಗದಲ್ಲಿ ಓದುತ್ತಿರುವ ಶ್ರೇಯಾ ಚವ್ಹಾಣ ಆಯ್ಕೆಯಾಗಿದ್ದಾರೆ.

ಅಕ್ಟೋಬರ್-1 ರಿಂದ ಚೆನೈಯಲ್ಲಿ ನಡೆಯಲಿರುವ ರಾಜ್ಯ ಮಹಿಳಾ ಅಂಡರ-19 ತಂಡದಲ್ಲಿ
ಆಡಲಿದ್ದಾರೆ. ತಂಡವು ಗುಜರಾತ, ಬರೋಡಾ, ಛತ್ತಿಸಗಡ, ಮಿಜೊರಾಮ ಹಾಗೂ ಮಹಾರಾಷ್ಟ್ರ ತಂಡದ
ಜೋತೆಗೆ ಏಕದಿನ ಶ್ರೇಣಿ ಪಂದ್ಯಗಳನ್ನು ಜನೇವರಿ 2025 ರಲ್ಲಿ ಅಸ್ಲಾಂ, ಮಿಜೊರಾಮ ಮತ್ತು ಛತ್ತಿಸಗಡ
ರಾಜ್ಯಗಳ ತಂಡಗಳೊಂದಿಗೆ ಸೆಣೆಸಲಿದ್ದಾರೆ.

ಕಳೆದ ವರ್ಷ ರಾಜಕೋಟನಲ್ಲಿ ನಡೆದ ಮಹಿಳಾ ಟಿ-20 ಟ್ರೋನಿಯಲ್ಲಿ ಕರ್ನಾಟಕ ರಾಜ್ಯವು ಟಿ-
20 ಚಾಂಪಿಯನ ಆಗಿ ಹೊರ ಹೊಮ್ಮುವಲ್ಲಿ ಶ್ರೇಯಾ ಪ್ರಮುಖ ಪಾತ್ರ ವಹಿಸಿದ್ದಾರೆ. ಸರಣಿಯಲ್ಲಿ
ಉತ್ತಮ ಪ್ರದರ್ಶನ ನೀಡುವುದರೊಂದಿಗೆ 5-ಪಂದ್ಯಗಳಲ್ಲ 257 ರನ್ ಗಳಿಸಿ, ಹಲವು ಕ್ಯಾಚ ಹಾಗೂ
ಸ್ಪಂಪಿಂಗ ಮಾಡಿದ್ದಾಳೆ. ಏಕ ದಿನ ಪಂದ್ಯಗಳಲ್ಲಿಯೂ 267 ರನ ಗಳನ್ನು ಗಳಿಸಿ ತಂಡವನ್ನು
ಉತ್ತಮವಾಗಿ ನಡೆಸಿದ್ದಾಳೆ.
ಶ್ರೀ ಜಗತಜ್ಯೋತಿ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು, ಪುಲಕೇಶಿ ನಗರ,
ವಿಜಯಪೂರ ಇಲ್ಲಿ ಪ್ರಥಮ ಪಿ.ಯು.ಸಿ. ಯಲ್ಲಿ ಓದುತ್ತಿರುವ ಕುಮಾರಿ ಶ್ರೇಯಾ ಚವ್ಹಾಣ ಇವಳು
ಅಂಡರ-19 ವಿಭಾಗದಲ್ಲಿ ಭಾರತೀಯ ಕ್ರಿಕೇಟ ಟಿಂ ಗೆ ಆಯ್ಕೆ ಆಗಿ ಸಂಸ್ಥೆಗೆ ಕಿರ್ತಿ ತಂದಿದ್ದಕ್ಕಾಗಿ
ಅಧ್ಯಕ್ಷರಾದ ಶ್ರೀಮತಿ
ಪಾಟೀಲ, ಆಡಳಿತಾಧಿಕಾರಿಗಳಾಧ ಎಲ್.ಬಿ. ಪಾಟೀಲ,
ಕಾರ್ಯದರ್ಶಿಗಳಾದ ಸಂತೋಷ ರೆಡ್ಡಿ ಎಲ್. ಪಾಟೀಲ, ಪ್ರಾಚಾರ್ಯರಾದ ಎಲ್.ಎಸ್. ಜಾಲವಾದಿ,
ದೈಹಿಕ ಉಪನ್ಯಾಸಕರಾದ ಎಂ.ಟಿ. ಶೇಭಾನಿ ಹಾಗೂ ಎಲ್ಲಾ ಉಪನ್ಯಾಸಕರು ಹಾಗೂ ಬೋಧಕೇತರ
ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

About The Author