ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ಹೊಸೂರು ಓಣಿಯಲ್ಲಿ ಶಿರಸಂಗಿ ನವಲಗುಂದ ಲಿಂಗರಾಜ ಟ್ರಸ್ಟ ನ ಕಲ್ಯಾಣ ಮಂಟಪ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸುಮಾರು 15 ವರ್ಷ ಹಿಂದೆನೇ ಈ ಕಲ್ಯಾಣ ಮಂಟಪವನ್ನು ಬೆಳಗಾವಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿರ್ಮಾಣವಾಗಿದ್ದು ಇದುವರೆಗೂ ಸಾರ್ವಜನಿಕರಿಗೆ ಅನುಕೂಲವಾಗದೆ ಹಾಳು ಬಿದ್ದ ಕಲ್ಯಾಣ ಮಂಟಪವಾಗಿದ್ದು ಕಲ್ಯಾಣ ಮಂಟಪದ ಕಿಟಕಿ ಹಾಗೂ ಬಾಗಿಲುಗಳು ಒಡೆದು ಹೋಗಿವೆ.ಮೇಲ್ಚಾವಣಿ ಕೂಡ ದುರಸ್ತಿಯಲ್ಲಿದೆ ಹಾಗೂ ಈ ಕಲ್ಯಾಣ ಮಂಟಪಕ್ಕೆ ಸರಿಯಾಗಿ ರಸ್ತೆ ಕೂಡ ಇಲ್ಲವೆಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.

ಆದಷ್ಟು ಬೇಗ ಶಿರಸಂಗಿ ನಲಗುಂದ ಲಿಂಗರಾಜ ಟ್ರಸ್ಟಿನ ಅಧ್ಯಕ್ಷರಾದ ಬೆಳಗಾವಿ ಜಿಲ್ಲಾಧಿಕಾರಿಗಳು ಹಾಗೂ ಟ್ರಸ್ಟಿನ ಎಲ್ಲಾ ಪದಾಧಿಕಾರಿಗಳು ಇದರ ಕಡೆ ಗಮನ ಹರಿಸಿ ಶಿರಸಂಗಿ ಗ್ರಾಮದ ಜನರಿಗೆ ಅನುಕೂಲ ಕಲ್ಪಿಸಬೇಕೆಂದು ಶಿರಸಂಗಿ ಗ್ರಾಮದ ಗ್ರಾಮಸ್ಥರು ಮನವಿ ಮಾಡಿದರು.

ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿಯವರ ವಾಡೆಯನ್ನು ಸಂಪೂರ್ಣವಾಗಿ ದುರಸ್ತಿಯನ್ನು ಮಾಡಿ ಪ್ರವಾಸಿಗರಿಗೆ ನೋಡಲು ಅನುಕೂಲ ಮಾಡಿಕೊಡಬೇಕು ಹಾಗೂ ವಾಡೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕೆಂದು ಶಿರಸಂಗಿ ಗ್ರಾಮಸ್ಥರು ಹಾಗೂ ಲಿಂಗರಾಜ ದೇಸಾಯಿ ಅವರ ಅಭಿಮಾನಿಗಳು ಶಿರಸಂಗಿ ನವಲಗುಂದ್ ಅಧ್ಯಕ್ಷರಾದ ಮಾನ್ಯ ಬೆಳಗಾವಿ ಜಿಲ್ಲಾಧಿಕಾರಿಗಳು ಹಾಗೂ ಎಲ್ಲಾ ಪದಾಧಿಕಾರಿಗಳು ಮನವಿ ಮಾಡಿಕೊಂಡರು.

ಬಡ ಮಕ್ಕಳ ಶಿಕ್ಷಣಕ್ಕಾಗಿ ಸಮಸ್ತ ಶಿರಸಂಗಿ ನವಲಗುಂದ ಸಮಸ್ತ ಆಸ್ತಿಯನ್ನು ತ್ಯಾಗ ವೀರ ಶಿರಸಂಗಿ ಲಿಂಗರಾಜ ದೇಸಾಯಿ ಅವರು ದಾನ ಮಾಡಿರುತ್ತಾರೆ. ಇಂತಹ ದೇಸಾಯಿಯವರ ಶಿರಸಂಗಿಯಲ್ಲಿ ಯಾವುದೇ ಉನ್ನತ ಶಾಲಾ ಕಾಲೇಜುಗಳು, ಡಿಪ್ಲೋಮ, ಇಂಜಿನಿಯರ್ ಕಾಲೇಜುಗಳು ಯಾವುದೇ ಸರ್ಕಾರಿ ಹಾಸ್ಟೆಲುಗಳು ಇಲ್ಲದೆ ಇರುವುದು ಮತ್ತು ಸರ್ಕಾರ ಇಂತಹ ತ್ಯಾಗವೀರ ಶಿರಸಂಗಿ ಲಿಂಗರಾಜರ ಗ್ರಾಮದಲ್ಲಿ ಸರ್ಕಾರ ಗಮನಹರಿಸದೆ ಇರುವುದು ಮತ್ತು ಶಿರಸಂಗಿ ನವಲಗುಂದ ಟ್ರಸ್ಟ್ ನವರು ಗಮನಹರಿಸದೇ ಇರುವುದು ಲಿಂಗರಾಜ ಅಭಿಮಾನಿಗಳಿಗೆ ಹಾಗೂ ಗ್ರಾಮಸ್ಥರಿಗೆ ದುಃಖದ ಸಂಗತಿಯಾಗಿದೆ ಎಂದು ಹೇಳಿದರು