ಸವದತ್ತಿಯಲ್ಲಿ ಉಚಿತ ಆರೋಗ್ಯ ತಪಾಸನಾ ಶಿಬಿರ,

WhatsApp Group Join Now

ಸವದತ್ತಿ, ತಾಲೂಕಾ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಜೆಂಟ್ಸ್ ಗ್ರುಫ್, ಜೆಂಟ್ಸ್ ಗ್ರುಫ್ ಆಫ್ ರೇಣುಕಾ ಸಹೇಲಿ, ಶ್ರೀ ಎಲುಬು ಮತ್ತು ಕೀಲು ಆಸ್ಪತ್ರೆ, ಹಾಗೂ ಪ್ರೇಮ ಬಿಂದು ರಕ್ತ ನಿಧಿ ಕೇಂದ್ರ, ವಿದ್ಯಾನಗರ, ಹುಬ್ಬಳ್ಳಿ ಇವರಗಳ ಸಂಯುಕ್ತ ಆಶ್ರಯದಲ್ಲಿ “ಉಚಿತ ಆರೋಗ್ಯ ತಪಾಸನಾ ಶಿಬಿರ, ಉಚಿತ ಮೂಳೆ ಸಾಂದ್ರತೆ (BMD) ತಪಾಸನೆ” ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ನ್ಯಾಯವಾದಿಗಳ ಸಂಘದ ಸಬಾಭವನದಲ್ಲಿ ಹವ್ಮಿುಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್‍ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಶ್ರೀ. ಸಿದ್ದರಾಮ ರವರು ಸಸಿಗೆ ನೀರೆರೆಯುವುದರ ಮೂಲಕ ಉದ್ಪಾಟನೆ ನೆರವೇರಿಸಿದರು. ನಂತರ ಮಾತನಾಡಿದ ಅವರು ಆರೋಗ್ಯವೇ ಭಾಗ್ಯ ಎನ್ನುವ ಹಾಗೆ ಎಲ್ಲರಿಗೂ ಸಂತೋಲನದ ಜೀವನ ಬೇಕು. ಸಾಕಷ್ಟು ಕಡೆ ನಾವು ಅಪಘಾತಗಳನ್ನು ನೋಡುತ್ತಿರುತ್ತೇವೆ ಅಪಘಾತದ ಸಂದರ್ಭಗಳಲ್ಲಿ ಹೆಚ್ಚಾಗಿ ರಕ್ತದ ಅವಶ್ಯಕತೆ ಇರುತ್ತದೆ ಅಲ್ಲದೇ ರಕ್ತದಾನದಿಂದ ಅನೇಕ ತೆರನಾದ ಉಪಯೋಗಗಳಿವೆ ಅದರಿಂದ ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳುವ ಸಲುವಾಗಿ ಈ ಶಿಬಿರದ ಉಪಯೋಗವನ್ನು ಪಡೆದುಕೊಳ್ಳಿ ಎಂದು ಹೇಳಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ನ್ಯಾಯವಾದಿಗಳಾದ ಶ್ರೀ. ಎಮ್.ಬಿ. ದ್ಯಾಮನಗೌಡರ ರವರು ಮಾತನಾಡಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಸಾಮಾನ್ಯವಾಗಿ ಕೆಲವು ಸ್ಥಳೀಯ ಸಂಸ್ಥೆಗಳು, ಆಸ್ಪತ್ರೆಗಳು ಅಥವಾ ಸರ್ಕಾರಿ ಇಲಾಖೆಗಳಿಂದ ಆಯೋಜಿಸಲ್ಪಡುತ್ತವೆ. ಇಂತಹ ಶಿಬಿರಗಳಲ್ಲಿ, ವೈದ್ಯರು ವಿವಿಧ ಆರೋಗ್ಯ ಸಮಸ್ಯೆಗಳಿಗಾಗಿ ಉಚಿತವಾಗಿ ತಪಾಸಣೆ ಮಾಡುತ್ತಾರೆ ಮತ್ತು ಅಗತ್ಯವಿದ್ದರೆ ಚಿಕಿತ್ಸೆ ಅಥವಾ ಸಲಹೆ ನೀಡುತ್ತಾರೆ. ಈ ಶಿಬಿರಗಳು ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆರೋಗ್ಯ ಸಮಸ್ಯೆಗಳನ್ನು ಮೊದಲ ಹಂತದಲ್ಲೇ ಪತ್ತೆಹಚ್ಚಲು ಸಹಾಯ ಮಾಡುತ್ತವೆ ಎಂದು ಹೇಳಿದರು.

ಉಪನ್ಯಾಸ ಭಾಷಣ ಮಾಡಿದ ಪ್ರೇಮ ಬಿಂದು ರಕ್ತ ಕೇಂದ್ರ, ಹುಬ್ಬಳ್ಳಿಯ ವೈಧ್ಯಾಧಿಕಾರಿಗಳಾದ ಡಾ. ವೀರಗಂಗಾಧರ ನಿಟ್ಟಾಲಿ, ರವರು ಮಾತನಾಡಿ ರಕ್ತದಾನವು ದೇಹವು ಅದರ ಪೂರೈಕೆಯನ್ನು ಪುನಃ ತುಂಬಿಸಲು ಶಕ್ತಗೊಳಿಸುತ್ತದೆ ಮತ್ತು ಒಟ್ಟಾರೆ ಕಾರ್ಯವನ್ನು ಸುಧಾರಿಸುತ್ತದೆ. ಹೆಚ್ಚಿನ ಜನರು ಪ್ರತಿ 56 ದಿನಗಳಿಗೊಮ್ಮೆ ದಾನ ಮಾಡಬಹುದು. ಆಗಾಗ್ಗೆ ರಕ್ತದಾನವು ಹೃದಯಾಘಾತ ಮತ್ತು ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ, ಹೃದಯರಕ್ತನಾಳದ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡುತ್ತದೆ ಅಂತಾ ರಕ್ತದಾನದಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರಿಸಿದರು.

ಅತಿಥಿ ಭಾಷಣ ಮಾಡಿದ ಶ್ರೀ. ಅರ್ಥೋಪೇಡಿಕ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಞರಾದ ಡಾ. ಹೇಮಂತ ಭಸ್ಮೆರವರು ಮಾತನಾಡಿ ಬಿಎಂಡಿ ಅಥವಾ ಮೂಳೆ ಖನಿಜ ಸಾಂದ್ರತೆ ಪರೀಕ್ಷೆಯು ಜನರು ತಮ್ಮ ಮೂಳೆಯ ಪ್ರದೇಶದಲ್ಲಿ ಹೊಂದಿರುವ ಕ್ಯಾಲ್ಸಿಯಂ ಮತ್ತು ಇತರ ರೀತಿಯ ಖನಿಜಗಳ ಪ್ರಮಾಣವನ್ನು ಮೌಲ್ಯಮಾಪನ ಮಾಡಲು ಒಂದು ರೋಗನಿರ್ಣಯ ವಿಧಾನವಾಗಿದೆ. ಈ ಪರೀಕ್ಷೆಯು ಒಬ್ಬ ವ್ಯಕ್ತಿಗೆ ಆಸ್ಟಿಯೊಪೊರೋಸಿಸ್ ಇದೆಯೇ ಎಂದು ಕಂಡುಹಿಡಿಯಲು ಸಹಾಯ ಮಾಡುತ್ತದೆ ಮತ್ತು ಮೂಳೆ ಮುರಿತದ ಅಪಾಯವನ್ನು ಊಹಿಸುತ್ತದೆ. 65 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಮಹಿಳೆಯೂ ನಿಯಮಿತವಾಗಿ ಬಿಎಂಡಿ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕೆಂದು ಹೇಳಿದರು.

ಅಧ್ಯಕ್ಷತೆ ಭಾಷಣ ಮಾಡಿದ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಶ್ರೀ. ಜೆ.ಬಿ. ಮುನವಳ್ಳಿ ರವರು ಮಾತನಾಡಿ ಜನರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಈ ಉಚಿತ ಆರೋಗ್ಯ ತಪಾಸನಾ ಶಿಬಿರವನ್ನು ಆಯೋಜಿಸಲಾಗಿದೆ. ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಂಡು ಜೀವ ಶೈಲಿ ಸಾಧ್ಯವಾದಷ್ಟು ಬದಲಾವಣೆ ಮಾಡಿಕೊಳ್ಳುವುದು ಉತ್ತಮ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್‍ ನ್ಯಾಯಾಧೀಶರಾದ ಸಿದ್ರಾಮ ರೆಡ್ಡಿ, ಹೆಚ್ಚುವರಿ ಸಿವಿಲ್‍ ನ್ಯಾಯಾಧೀಶರಾದ ಕೃಷ್ಣಪ್ಪ ಪಮ್ಮಾರ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷರಾದ ಎಮ್.ಎಸ್.ಹುಬ್ಬಳ್ಳಿ, ಜೈಂಟ್ಸ ಗ್ರುಪಿನ ಅಧ್ಯಕ್ಷರಾದ ನಾಗರಾಜ ಬೊನಗೇರಿ, ಜೈಂಟ್ಸ ಗ್ರುಪ ರೇಣುಕಾ ಸಹೇಲಿಯ ಅಧ್ಯಕ್ಷರಾದ ಹಸೀನಾ ಯಲಿಗಾರ ಇತರರು ಉಪಸ್ಧ್ತರಿದ್ದರು.

ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಎಮ್.ಬಿ.ದ್ಯಾಮನಗೌಡರ ಸ್ವಾಗತಿಸಿದರು. ಎಸ್.ಎಸ್.ಕಾಳಪ್ಪನವರ ನಿರೂಪಿಸಿ ವಂದಿಸಿದರು.

About The Author