ಚಿಕ್ಕೋಡಿ : ಅಕ್ರಮ ಸಂಬಂಧಕ್ಕೆ ಗಂಡನನ್ನು ಕೊಲೆಗೈದ ಹೆಂಡತಿ.

WhatsApp Group Join Now

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ಘಟನೆ ನಡೆದಿದೆ.

ಸುಮಾರು 6 ತಿಂಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪ್ರಿಯಕರನ ಜೊತೆ ಸೇರಿ ಪತಿಗೆ ಚಟ್ಟ ಕಟ್ಟಿದ ಕಿರಾತಕಿ ಪತ್ನಿ.

ರಾಘು ಗಾವಡೆ (40) ಹೆಂಡತಿಯಿಂದಲೇ ಕೊಲೆಯಾದ ದುರ್ದೈವಿ ಪತಿ.

ಬಂಗಾರಿ ಗಾವಡೆ ಕೊಲೆ ಮಾಡಿದ ಪತ್ನಿ, ರಾಮಾ ರಾಣಗೆ ಆಕೆಯ ಪ್ರಿಯಕರ.

ಖಡಕಲಾಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ.

ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ ಖಡಕಲಾಟ ಠಾಣೆಯ ಪೊಲೀಸರು.

ರಾಘು ಗಾವಡೆ ಸಹೋದರ ಸಂಬಂಧಿಯಾಗಿದ್ದ
ರಾಮಾ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಬಂಗಾರಿ.

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನೇ ಮುಗಿಸಲು ಸಂಚು
ಕೂಲಿ ಕೆಲಸ ಹಾಗೂ ಕುರಿ ಕಾಯುವ ಕೆಲಸ ಮಾಡಿಕೊಂಡಿದ್ದ ರಾಘು ಗಾವಡೆ.

ಗಂಡನ್ನು ಹೊಲಕ್ಕೆ ಕರೆಯಿಸಿ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿ ಶವ ಹೊತ್ತಿರುವ ಪತ್ನಿ.

ಗಂಡ ಕುರಿ ಕಾಯಲು ಬೇರೆ ಜಿಲ್ಲೆಗೆ ಹೋಗಿದ್ದಾನೆ ಎಂದು ನಂಬಿಸಿದ್ದ ಚಾಲಕಿ ಪತ್ನಿ.

ಕಳೆದ ಆರು ತಿಂಗಳಿಂದ ನಂಬಿಸಿದ ಪತ್ನಿಗೆ ಕಾದಿತ್ತು ಕಂಟಕ.

ರಾಘು ಅಣ್ಣ ಅನುಮಾನದಿಂದ ಗ್ರಾಮದ ಹಿರಿಯರಿಗೆ ಹೇಳಿ ವಿಚಾರಿಸಿದ

ವಿಚಾರಣೆ ಬಳಿಕ ವಿಧಿಯಿಲ್ಲದೆ ಸತ್ಯ ಬಾಯಿಬಿಟ್ಟ ಪತ್ನಿ ಬಂಗಾರಿ
ಕೂಡಲೇ ಪೋಲಿಸ್ ಠಾಣೆಗೆ ತೆರಳಿ ಕಂಪ್ಲೇಟ್ ಕೊಟ್ಟ ಸಹೋದರ ಲಗಮಣ್ಣ.

About The Author