ಕಟಕೋಳ ಗ್ರಾಮದಲ್ಲಿ ಉಪಯೋಗವಿಲ್ಲದ ಸ್ವಚ್ಛ ವಾಹಿನಿ ವಾಹನ! ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಎಂ.ಬಿ. ಬೈಲವಾಡ ಅವರ ನಿರ್ಲಕ್ಷತೆ ಕಾರಣವಾಗಿದೆ.


ಕಟಕೋಳ ಸ್ವಚ್ಛತಾ ವಾಹನಗಳು ಬಳಕೆಯಾಗದೆ ನಿಂತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಸ ವಿಲೇವಾರಿ ಮಾಡುವ ಉದ್ದೇಶದಿಂದ ಸರ್ಕಾರ ಸ್ವಚ್ಛ ಭಾರತ ಯೋಜನೆಯಡಿ ಪ್ರತಿ ಮನೆ ಮನೆಯಿಂದ ಒಣ, ಹಸಿ ಕಸ ಹಾಕಲು ಗ್ರಾಮ ಪಂಚಾಯಿತಿಗಳಿಗೆ ವಾಹನ ವ್ಯವಸ್ಥೆ ಮಾಡಿದೆ. ಆದರೆ, ವಾಹನ ಬಳಕೆಯಾಗದೆ ನಿಂತಲ್ಲಿ ನಿಂತು ತುಕ್ಕು ಹಿಡಿಯುತ್ತಿದೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮ ಪಂಚಾಯತಿಯ KA 69 0590 ಸ್ವಚ್ಛ ವಾಹಿನಿ ವಾಹನವು ಸುಮಾರು ಎರಡು ವರ್ಷದಿಂದ ಕಟಕೋಳದ ಪಶು ಆಸ್ಪತ್ರೆಯ ಪಕ್ಕದಲ್ಲಿ ನಿಂತಿರುತ್ತದೆ.
ಹಾಗೂ ಈ ವಾಹನ ನೋಡಿದರೆ ಮುಂದಿನ ಪ್ರೆಂಟ್ ಗ್ಲಾಸ್ ಒಡೆದುಹೋಗಿದೆ ಹಾಗೂ ಡೋರ್ ಗ್ಲಾಸ್ ಕೂಡ ಇರುವುದಿಲ್ಲ ವಾಹನದ ಬ್ಯಾಟರಿ ಕೂಡ ಇರುವುದಿಲ್ಲ ಈ ವಾಹನವನ್ನು ನೋಡಿದರೆ ಗ್ರಾಮ ಪಂಚಾಯತಿಯವರು ಗುಜರಿ ಗಾಡಿ ತಂದಿದ್ದಾರೆ ಎಂದು ಅನಿಸುತ್ತದೆ ಅಷ್ಟು ನಿರ್ಲಕ್ಷದಿಂದ ಅದನ್ನು ನೋಡಿ ಕೊಳ್ಳುತ್ತಿದ್ದಾರೆ.
ಕಟಕೋಳ ಗ್ರಾಮದಲ್ಲಿ ಸ್ವಚ್ಛ ವಾಹಿನಿ ವಾಹನವು ಉಪಯೋಗವಿಲ್ಲದೆ ನಿಂತಿರುವುದು ನಿಜಕ್ಕೂ ಸಾರ್ವಜನಿಕ ಹಣದ ಪೋಲು ಮತ್ತು ಗ್ರಾಮೀಣ ನೈರ್ಮಲ್ಯದ ನಿರ್ಲಕ್ಷ್ಯಕ್ಕೆ ಒಂದು ಸ್ಪಷ್ಟ ಉದಾಹರಣೆಯಾಗಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸುಮಾರು 4 ವರ್ಷ ಹಿಂದೇನೆ ಈ ವಾಹನವನ್ನು ಗ್ರಾಮ ಪಂಚಾಯಿತಿಗೆ ಮನೆ ಮನೆಯಿಂದ ಒಣ ಹಾಗೂ ಹಸಿ ಕಸವನ್ನು ಸಂಗ್ರಹಿಸಲು ಸರ್ಕಾರವು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಈ ವಾಹನಗಳನ್ನು ಗ್ರಾಮ ಪಂಚಾಯಿತಿಗಳಿಗೆ ವಿತರಿಸಿದೆ. ಆದರೆ ಸೂಕ್ತ ನಿರ್ವಹಣೆ ಇಲ್ಲದೆ ಇವುಗಳು ಮೂಲೆ ಸೇರುತ್ತಿವೆ
ಸ್ವಚ್ಛವಾಹಿನಿ ಎನ್ನುವುದು ಗ್ರಾಮೀಣ ಪ್ರದೇಶಗಳಲ್ಲಿ ಮನೆ-ಮನೆಯಿಂದ ಕಸ ಸಂಗ್ರಹಿಸಲು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಜಾರಿಗೆ ತಂದ ವಾಹನವಾಗಿದೆ.
ಹಳ್ಳಿಗಳಲ್ಲಿ ಸ್ವಚ್ಛತೆ ಕಾಪಾಡುವುದು ಮತ್ತು ಕಸದ ವೈಜ್ಞಾನಿಕ ವಿಲೇವಾರಿ. ಮನೆ ಬಳಿ ಬಂದು ಕಸ ಪಡೆಯುವುದು ಹಾಗೂ ಜಿಪಿಎಸ್ ಮೂಲಕ ವಾಹನಗಳ ಚಲನವಲನಗಳ ಮೇಲೆ ನಿಗಾ ಇಡುವುದು.
ಈ ವಾಹನ ಮುಂದಿನ ಪ್ರೆಂಟ್ ಗ್ಲಾಸ್ ಒಡೆದುಹೋಗಿದೆ ಹಾಗೂ ಡೋರ್ ಗ್ಲಾಸ್ ಕೂಡ ಇರುವುದಿಲ್ಲ ವಾಹನದ ಬ್ಯಾಟರಿ ಕೂಡ ಇರುವುದಿಲ್ಲ ಇದಕ್ಕೆ ಹೊನೆಗಾರರು ಯಾರು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ ?
