
ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಸುವ ಕಾರ್ಯ-ಶಾಲಾ ಸಂತೆ
ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ,ಜಾಧವನಗರ ಟಕ್ಕಳಕಿ.ತಾ/ತಿಕೋಟಾ ಜಿ/ವಿಜಯಪುರ.
ಶಾಲಾ ಸಂತೆ ಕಾರ್ಯಕ್ರಮವನ್ನು,ವಿಶ್ವಜಿತ.ಜಾಧವ,ಶಿಕ್ಷಣಪ್ರೇಮಿಗಳು ಉದ್ಘಾಟಿಸಿದರು.ಗೋವಿಂದ.ಘಾಟಗೆ,ಎಸ್.ಡಿ.ಎಮ್.ಸಿ ಸದಸ್ಯರು
ಶಾಲಾ ಸಂತೆ ಕುರಿತು ಮಾರ್ಮಿಕವಾಗಿ ವಿವರಿಸಿದರು. ತೂಕ,ಅಳತೆ,ಲಾಭ,ನಷ್ಟ,ಗಣಿತ ವಿಷಯದ ಲೆಕ್ಕಾಚಾರದ ಕುರಿತು ವಿವರಿಸಿದರು.
ಶಿಲ್ಪಾ.ಹಂಜಿ ಗುರುಮಾತೆಯರು,ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು,ಎಂಬಂತೆ ಚಿಕ್ಕಂದಿನಲ್ಲಿರುವಾಗಲೇ,ಮಕ್ಕಳಲ್ಲಿ ಪ್ರಾಯೋಗಿಕ ವ್ಯವಹಾರ ಜ್ಞಾನ,ಶಾಲಾ ಸಂತೆಯಿಂದ ಉಂಟಾಗುತ್ತದೆ ಎಂದು ವಿವರಿಸಿದರು.
ಶಾಲಾ ಸಂತೆ ಕಾರ್ಯಕ್ರಮದಲ್ಲಿ,ಕಾಯಿಪಲ್ಲೆ,ಹಣ್ಣುಗಳಾದ,ನಿಂಬೆ,ದ್ರಾಕ್ಷಿ,ಪೇರು,ಚಿಕ್ಕು,ಹುಣಸೆ ಅಂಗಡಿಗಳು,ಕಿರಾಣಾ ಸಾಮಾನಿನ ಅಂಗಡಿಗಳು,ನೋಟ್‌ಬುಕ್,ಪೆನ್ನು,ಚೂಡಾ,ಎಳನೀರು,ಮಡಿಕೆ ಕಾಳು,ಕೋತಂಬರಿ,ಕರೀಬೇವು,ಬದನೆ , ನುಗ್ಗೆಕಾಯಿ,ಶೇಂಗಾ,ಮುಂತಾದವುಗಳನ್ನು ತಂದು ಮಕ್ಕಳು ಭಜ೯ರಿಯಾಗಿ ಮಾರಾಟ ಮಾಡಿದರು.
ಎಸ್.ಡಿ.ಎಮ್.ಸಿ ಅಧ್ಯಕ್ಷರಾದ,ಜಾಲೀಂದ್ರ.ಘಾಟಗೆ,ಸದಸ್ಯರಾದ ಅಶೋಕ. ನಿಂಬಾಳಕರ,ಮಹಾದೇವ.ಘಾಟಗೆ,ಅಮಿತ.ಚವ್ಹಾಣ,ಸುಭಾಷ.ಜಾಧವ,ಅಣ್ಣಾಸಾಬಗೌಡ.ಬಿರಾದಾರ.ಪೈಗಂಬರ.ಮುಲ್ಲಾ.ಕೃಷ್ಣಾಬಾಯಿ.ಚವ್ಹಾಣ,ಗಂಗೂಬಾಯಿ.ಘಾಟಗೆ,ಪ್ರಜ್ಞಾ.ಜಾಧವ,ಮಯೂರಿ.ಜಾಧವ,ಶೇವಲಾಬಾಯಿ.ಪವಾರ,ವಷಾ೯.ಜಾಧವ,ಮೀನಾಕ್ಷಿ.ಜಾಧವ,ಸೀಮಾಬಾಯಿ.ಲಮಾಣಿ ಮುಂತಾದ ಪಾಲಕರು ಸಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಬಿ.ಎಸ್.ಹಾಲಳ್ಳಿ ಮುಖ್ಯಗುರುಗಳು ಸ್ವಾಗತಿಸಿದರು.ವಿ.ಎಮ್.ಮುಳಗುಂದ ಗುರುಮಾತೆಯರು ವಂದಿಸಿದರು. ಡಿ.ಎನ್.ಘೋಣಸಗಿ ಗುರುಗಳು ನಿರೂಪಿಸಿದರು.



