ದಿನಾಂಕ ೨೬-೦೪-೨೦೨೬ ರಂದು ೪೧೨ ನೇ ಶಂಕರ ತತ್ವ ಮಾಸಿಕ ಚಿಂತನ ಸಂಭ್ರಮದಲ್ಲಿ “ಸಂಗೀತ ಭಾರತಿ” ಆದಿ ಗುರು ಶ್ರೀ ಶಂಕರ ಸಾಹಿತ್ಯ ಪರಿಷತ್ತು- ಹೊಸಪೇಟೆ, ಇವರಿಂದ ಕೊಡ ಮಾಡುವ ರಾಷ್ಟ್ರೀಯ ಮಟ್ಟದ ಸಾಹಿತ್ಯ ಸೇವಾ ಭಾರ್ಗವ ಪ್ರಶಸ್ತಿ-೨೦೨೬ ಹಾಗೂ ರಾಜ್ಯಮಟ್ಟದ ಆದಿ ಗುರು ಶ್ರೀ ಶಂಕರ ಅನುಗ್ರಹ ಪುರಸ್ಕಾರ-೨೦೨೬ ಪ್ರಶಸ್ತಿಗಳನ್ನು ಹೊಸಪೇಟೆಯ ಕವಿ ಸಾಹಿತಿಯಾದ ದೀಪಕ ಬಿಳ್ಳೂರ ಅವರಿಗೆ ನೀಡಿ ಗೌರವಿಸಲಾಗಿದೆ, ದೀಪಕ ಬಿಳ್ಳೂರ ಅವರ ಸೃಜನಶೀಲ ಸಾಹಿತ್ಯ, ಆಧ್ಯಾತ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಸೇವೆಯನ್ನು ಗುರುತಿಸಿ ಈ ಎರಡು ಪ್ರಶಸ್ತಿಗಳನ್ನು ನೀಡಲಾಗಿದೆ ಎಂದು ಸಂಗೀತ ಭಾರತೀಯ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಆದ ಹೆಚ್. ಪಿ. ಕಲ್ಲಂಭಟ್ ಇವರು ಪತ್ರಿಕಾ ಮಾಧ್ಯಮಕ್ಕೆ ತಿಳಿಸಿರುತ್ತಾರೆ.
ದೀಪಕ ಬಿಳ್ಳೂರ ಇವರು ಬಿ. ಇ. ಮೆಕ್ಯಾನಿಕಲ್ ಪದವೀಧರರು. ಇವರು ಏಳು ಕವನ ಸಂಕಲನಗಳನ್ನು ಹಾಗೂ ಒಂದು ಪ್ರಬಂಧ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆ ಮಾಡಿದ್ದಾರೆ.ಇವರಿಗೆ ರಾಜ್ಯದ ಅನೇಕ ಪ್ರಶಸ್ತಿಗಳು ಕೂಡ ಬಂದಿವೆ. ೨೦೨೪ ನೇ ಸಾಲಿನ ಕ.ಸಾ.ಪ. ಬೆಂಗಳೂರು ಇವರಿಂದ “ದೀಪಗಳು- ಬೆಳಕಿನತ್ತ ಪಯಣ” ಎಂಬ ಕವನ ಸಂಕಲನಕ್ಕೆ ಪುಸ್ತಕ ದತ್ತಿ ಪ್ರಶಸ್ತಿ ಬಂದಿದೆ.
ಸಂಗೀತ ಭಾರತೀಯ ಕಛೇರಿಯಲ್ಲಿಯೇ ಎರಡನೆe ಮುದ್ರಣ ಗೊಂಡ “ದೀಪಗಳು- ಬೆಳಕಿನತ್ತ ಪಯಣ” ಎಂಬ ಕವನ ಸಂಕಲನವನ್ನು ಸಂಗೀತ ಭಾರತೀಯ ಶ್ರಿe ಹೆಚ್. ಪಿ. ಕಲ್ಲಂಭಟ್ ಇವರು ಕನ್ನಡ ಸಾರಸ್ವತ ಲೋಕಕ್ಕೆ ಲೋಕಾರ್ಪಣೆ ಮಾಡಿದರು.
ಈ ಸಮಾರಂಭದಲ್ಲಿ ಶ್ರೀ ವೆಂಕಟೇಶ್ ಬಡಿಗೇರ್, ಶ್ರೀ ಎಚ್. ಎಮ್. ಜಂಬುನಾಥ, ಶ್ರೀ ಎಮ್. ವೀರೇಶ ಹಾಗೂ ಗಣ್ಯಮಾನ್ಯರೆಲ್ಲರೂ ಪಾಲ್ಗೊಂಡಿದ್ದರು.



