ರಾಮದುರ್ಗ ಡಿವೈಎಸ್ಪಿ ಚಿದಂಬರ ಮಡಿವಾಳರ ನೇತೃತ್ವದಲ್ಲಿ ಕಳೆದುಹೋದ ಮೊಬೈಲನ್ನು ಮಾಲೀಕರಿಗೆ ಹಿಂತಿರುಗಿಸಿದರು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ರಾಮದುರ್ಗ ಪೊಲೀಸ್ ಠಾಣೆ ಆವರಣಗಳಲ್ಲಿ ಡಿವೈಎಸ್ಪಿ ಚಿದಂಬರ ಮಡಿವಾಳರ ನೇತೃತ್ವದಲ್ಲಿ CEIR ಪೋರ್ಟಲ್ ಬಳಸಿ, ಸಾರ್ವಜನಿಕರು ಕಳೆದುಕೊಂಡಿದ್ದ ವಿವಿಧ ಕಂಪನಿಗಳ ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಿ, ಅವುಗಳ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. ತಂತ್ರಜ್ಞಾನದ ನೆರವಿನಿಂದ ಈ ಮೊಬೈಲ್ಗಳನ್ನು ತಾಂತ್ರಿಕವಾಗಿ ಟ್ರ್ಯಾಕ್ ಮಾಡಿ, ಮರಳಿ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
CEIR ಪೋರ್ಟಲ್ ಈಗ ಅಟೋ ಜನರೇಟಾಗಿ ನಮಗೆ ಈ ಮೊಬೈಲ್ ಒಳಗೆ ಇಂತಹ ನಂಬರ್ ಇದೆ ಎಂದು ತೋರಿಸುತ್ತದೆ . ಈ ಮೊಬೈಲ್ ಕಳ್ಳತನ ಮಾಡಿದವರು ಯಾರಿಗೋ ಸಾವಿರ ಎರಡು ಸಾವಿರ ರೂಪಾಯಿ ಕೊಡುವಂಥ ಸಂದರ್ಭ ಇದೆ.
ಕಳ್ಳತನ ಮಾಡಿದ ಮೊಬೈಲ್ ಅವರು ಉಪಯೋಗ ಮಾಡುವುದಿಲ್ಲ. ಆಟೋಮೆಟಿಕ್ ಆಗಿ ಒಂದು ಸಿಮ್ ಇನ್ಸರ್ಟ್ ಮಾಡ್ಬಿಟ್ರೆ ಮುಗಿದು ಹೋಯಿತು. 10000 ಮೊಬೈಲನ್ನು 2 ಸಾವಿರ ರೂಪಾಯಿಗೆ ಕೊಡುತ್ತಾರೆ ಅಂದ್ರೆ ಯಾರೋ ತೆಗೆದುಕೊಂಡು ಬಿಡುತ್ತಾರೆ.
ಕೇಂದ್ರ ಸರ್ಕಾರದ CEIR (Central Equipment Identity Register) ಪೋರ್ಟಲ್ ಮೂಲಕ ಮೊಬೈಲ್ ಪತ್ತೆ.
ಕಳೆದುಹೋದ/ಕಳುವಾದ ಹಲವು ದುಬಾರಿ ಸ್ಮಾರ್ಟ್ಫೋನ್ಗಳು.
ದೂರು ದಾಖಲಿಸಿದ ನಂತರ, IMEI ಸಂಖ್ಯೆ ಮೂಲಕ ಮೊಬೈಲ್ ಟ್ರ್ಯಾಕ್ ಮಾಡಲಾಗಿದೆ.
ಪತ್ತೆಯಾದ 51 ಮೊಬೈಲ್ಗಳನ್ನು ಅಸಲಿ ಮಾಲೀಕರಿಗೆ ಕೊಟ್ಟಿದ್ದೇವೆ ಎಂದು ಹೇಳಿದರು
ಪೊಲೀಸರ ಈ ಕಾರ್ಯ ಸಾರ್ವಜನಿಕರಲ್ಲಿ ವಿಶ್ವಾಸವನ್ನು ಹೆಚ್ಚಿಸಿದ್ದು, ತಂತ್ರಜ್ಞಾನದ ಸಮರ್ಪಕ ಬಳಕೆಯ ಮಹತ್ವವನ್ನು ಮತ್ತೊಮ್ಮೆ ತೋರಿಸಿದೆ.
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸೂಚನೆ ನೀಡಿರುವ ಪೊಲೀಸರು, ಮೊಬೈಲ್ ಕಳೆದುಹೋದ ಸಂದರ್ಭದಲ್ಲಿ ತಕ್ಷಣವೇ ಸಂಬಂಧಿಸಿದ ದಾಖಲಾತಿಗಳು ಮತ್ತು ಗುರುತಿನ ಪುರಾವೆಗಳೊಂದಿಗೆ KSP ಮೊಬೈಲ್ ಆಪ್ ಮೂಲಕ ದೂರು ದಾಖಲಿಸಿ, ನಂತರ CEIR ವೆಬ್ ಪೋರ್ಟಲ್ https://www.ceir.gov.in⁠ ನಲ್ಲಿ ವರದಿ ಸಲ್ಲಿಸುವಂತೆ ಮನವಿ ಮಾಡಿದ್ದಾರೆ.
ಇದರಿಂದ ಕಳೆದುಹೋದ ಮೊಬೈಲ್ಗಳನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಈ ವೇಳೆ ರಾಮದುರ್ಗ ವೃತ್ತದ ಪೊಲೀಸ್ ನಿರೀಕ್ಷಕರು (ಸಿಪಿಐ) ವಿನಾಯಕ ಬಡಿಗೇರ, ರಾಮದುರ್ಗ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಸವಿತಾ ಮುನ್ಯಾಳ, ಹಾಗೂ ಪೋಲಿಸ್ ಇಲಾಖೆ ಸಿಬ್ಬಂದಿಗಳು, ಸಾರ್ವಜನಿಕರು ಇದ್ದರು.

About The Author