ಸವದತ್ತಿ ತಾಲೂಕಿನ ಮುರಗೋಡ ಶ್ರೀ ಮಹಾಂತ ದುರದುಂಡೇಶ್ವರ ಶ್ರೀ ಮಠದ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಮಧ್ಯವರ್ಜನ ಶಿಬಿರ ಸಮಾರೋಪ ಕಾರ್ಯಕ್ರಮ ಜರುಗಿತು
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ ನೀಲಕಂಠ ಮಹಾಸ್ವಾಮಿಗಳು ಮಾತನಾಡಿ ಇದು ಕೇವಲ ಶಿಬಿರವಲ್ಲ, ಕುಟುಂಬಗಳನ್ನು ಕಟ್ಟುವ ಹಾಗೂ ಹೆಣ್ಣುಮಕ್ಕಳ ಕಣ್ಣೀರು ಒರೆಸುವ ಪವಿತ್ರ ಕಾರ್ಯ. ಅಂಧಕಾರದಲ್ಲಿದ್ದ ಬಾಳಿಗೆ ಬೆಳಕು ನೀಡುವ ಈ ಕಾರ್ಯ ಸಮಾಜಕ್ಕೆ ಮಾದರಿ ಎಂದು ಮನ್ ನಿರಂಜನ ಪ್ರಣವ ಸ್ವರೂಪಿ ನೀಲಕಂಠ ಮಹಾ ಸ್ವಾಮೀಜಿ ತಿಳಿಸಿದರು..
ಪಟ್ಟಣದ ಶ್ರೀ ಮಹಾಂತ ದುರದುಂಡೇಶ್ವರ ಮಠದ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ‘2064ನೇ ಮದ್ಯವರ್ಜನ ಶಿಬಿರ’ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ನಂತರ ಮಾತನಾಡಿದ .ಹೆಚ ಆರ್ ಲವಕುಮಾರ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬೆಳಗಾವಿ ಸಂಸಾರದಲ್ಲಿ ಸರಸ, ವಿರಸಗಳು ಬಂದು ಹೋಗುತ್ತವೆ. ಇವುಗಳ ನಡುವೆ ದಂಪತಿಗಳು ದುಶ್ಚಟಗಳಿಂದ ದೂರವಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಬಗ್ಗೆ ಸದಾ ಚಿಂತಿಸಬೇಕು. ಆಗ ಮಾತ್ರ ಸಂಸಾರದಲ್ಲಿ ಶಾಶ್ವತ ನೆಮ್ಮದಿ ದೊರಕುತ್ತದೆ ಎಂದು ಹೇಳಿದರು.
ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಮಹಾಂತೇಶ್ ಮಾತನಾಡಿ“ತಂದೆ-ತಾಯಿಯನ್ನು ಪ್ರೀತಿಸಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಗೌರವದಿಂದ ಬದುಕಿ” ಎಂದು ಕಿವಿಮಾತು ಹೇಳಿದರು.
ಶ್ರೀ ಮಠದ ಧರ್ಮದರ್ಶಿಗಳಾದ ವಿ ಬಿ ದೇಸಾಯಿ ಮಾತನಾಡಿ ಉತ್ತಮ ವ್ಯಕ್ತಿತ್ವ ನಿರ್ಮಾಣದ ಬಗ್ಗೆ ಮಾರ್ಗದರ್ಶನ ನಿಮಗಾಗಲಿ.. ಚಿರ ಸುಖ ಶಾಂತಿ ನಲಿದಾಡಲಿ ಎಂದು ಹಾರೈಸಿದರು
ನಂತರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ವತಿಯಿಂದ…” ಭಾವಪೂರ್ಣ ಹಾಡುಗಳೊಂದಿಗೆ, ಕುಡಿತ ಬಿಟ್ಟವರ ಹೊಸ ಬದುಕು ಪ್ರಜ್ವಲಿಸಲಿ ಎಂದು ಶುಭಕೋರಲಾಯಿತು. ನಂತರ ಶಿಬಿರಾರ್ಥಿಗಳಿಗೆ ಪುನರ್ಜನ್ಮ ನೀಡುವ ಮೂಲಕ ಹಾಗೂ ಸತಿ ಪತಿಯನ್ನು ಒಂದುಗೂಡಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಭಾವಚಿತ್ರದ ಮುಂದೆ ಎಲ್ಲ ಹಿರಿಯರ ಸಮ್ಮುಖದಲ್ಲಿ ವಿವಾಹ ಮಾಡಲಾಯಿತು.
9 ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ಪಾಲ್ಗೊಂಡಿದ್ದವರು, ಕುಡಿತವನ್ನು ಸಂಪೂರ್ಣವಾಗಿ ಬಿಟ್ಟು, ಹೊಸ ಬಟ್ಟೆ ಧರಿಸಿ ಮದುಮಕ್ಕಳಂತೆ ಕಂಗೊಳಿಸುತ್ತಿದ್ದರು. ಇವರನ್ನು ನೋಡಿ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.ಶಿಬಿರದ ಸಂಸ್ಥಾಪಕ ಸಮಿತಿಯ ಯೋಗ ಗುರುಗಳಾದ ಶ್ರೀ ಗುರು ಮಹಾಂತೇಶ್ ಹಿರೇಮಠ ಕರವೇ ತಾಲೂಕು ಉಪಾಧ್ಯಕ್ಷರಾದ ವಿನಯ್ ಪಾಸಲಕರ , ಯೋಜಾಧಿಕಾರಿ ಶ್ರೀಕಾಂತ್ ಎಂ ಮೇಲ್ವಿಚಾರಕಿ ಶ್ರೀಮತಿ ಮಂಜುಳಾ ಡಿ ಯೋಜನೆ ಕಾರ್ಯಕರ್ತರು ಬಸವರಾಜ್ ಶ್ರೀಮತಿ ನೀಶಾ ಆದಿತ್ಯ ಸತೀಶ್ ಬಸವರಾಜ್ ಕೋಮಲ್ ಉಮೇಶ್ ಈ ಒಂದು ಮಧ್ಯ ವರ್ಜನ ಶಬೀರ ಸಮಾರೋಪ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು



