WhatsApp Group
Join Now
ವಿಶ್ವಹಿಂದೂ ಪರಿಷತ್ – ಬಜರಂಗದಳ ರಾಮದುರ್ಗ ಪ್ರಖಂಡದ ವತಿಯಿಂದ ಸೇವಾಸಪ್ತಾಹದ ನಿಮಿತ್ತವಾಗಿ ತಾಲೂಕಿನ ಎಲ್ಲ ಸಮಿತಿ ಕೇಂದ್ರಗಳಲ್ಲಿ ವೃಕ್ಷಾರೋಪನ ಕಾರ್ಯಕ್ರಮ ನೆರವೇರಿಸಲಾಯಿತು, ಈ ಭಾಗವಾಗಿ ತಾಲೂಕಿನ ಹಲಗತ್ತಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಪ್ರಜ್ಞೆ ಮೆರೆಯಲಾಯಿತು ಹಾಗೂ ಶಾಲಾ ಮಕ್ಕಳಿಗೆ ಪ್ರಕೃತಿ ಉಳಿಸುವ ಕುರಿತು ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಪದಾಧಿಕಾರಿಗಳು ವಿಜಯೇಂದ್ರ ಜೋಷಿ, ಪ್ರಕಾಶ ಸೂಳಿಬಾವಿ, ಸುನಿತಾ ತಿಮ್ಮನಗೌಡರ, ಅನಸೂಯಾ ಬಸನಗೌಡರ, ಮಾಜಿ ಸೈನಿಕರು ರಮೇಶ ಆರೀಬೆಂಚಿ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ S M ಮಹಾಲಿಂಗಾಪುರ ಅವರ ಆದಿಯಾಗಿ ಶಿಕ್ಷಕರಾದ G H ದಾಸರ, ಶಿವಾನಂದ ಹೊಸಮನಿ, ಶೈಲಾ ಹೆಬಸೂರ, ಗಂಗಪ್ಪ ಗಾರಗಿ, ಮುಂತಾದವರು ಉಪಸ್ಥಿತರಿದ್ದರು.



