ಹಲವಾರು ವರ್ಷಗಳಿಂದ ಪ್ರತ್ಯೇಕವಾಗಿದ್ದು ವಿಚ್ಛೇದನ ಪ್ರಕರಣ ಎದುರಿಸುತ್ತಿದ್ದ ಜೋಡಿ ದಂಪತಿಗಳನ್ನು ಒಂದು ಗೂಡಿಸುವ ಮೂಲಕ ರಾಮದುರ್ಗ ನ್ಯಾಯಾಲಯ ಗಮನ ಸೆಳೆದಿದೆ.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, ರಾಮದುರ್ಗ ತಾಲೂಕಾ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸಹಯೋಗದೊಂದಿಗೆ ದಿನಾಂಕ- 11/07/2026 ರಂದು ನಡೆದ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ನಲ್ಲಿ ರಾಮದುರ್ಗ ನ್ಯಾಯಾಲಯದಲ್ಲಿ ಗೌರವಾನ್ವಿತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಮಂಜುನಾಥ ನಾಯಕ ಹಾಗೂ ಹಿರಿಯ ದಿವಾಣಿ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀಮತಿ ಪುಷ್ಪಲತಾ ಕೆ ಮತ್ತು ದಿವಾಣಿ ನ್ಯಾಯಾಧೀಶರಾದ ಗೌರವಾನ್ವಿತ ಭಾಗ್ಯಶ್ರೀ ಮಾದರ ಇವರ ಸಮ್ಮುಖದಲ್ಲಿ ರಾಜಿ ಸಂಧಾನದ ಮೂಲಕ ಒಂದಾದ ಪತಿ ಪತ್ನಿ.
ಲೋಕ ಅದಾಲತ್ನಲ್ಲಿ ಸಾಮಾನ್ಯವಾಗಿ ವಿಚ್ಛೇದನ ಅಥವಾ ಕೌಟುಂಬಿಕ ಕಲಹದ ಕಾರಣದಿಂದ ದೂರಾಗಿದ್ದ ಜೋಡಿಗಳಿಗೆ ನ್ಯಾಯಾಧೀಶರು, ವಕೀಲರು ಮತ್ತು ಸಂಧಾನಕಾರರು ಸೂಕ್ತ ಸಮಾಲೋಚನೆ ನಡೆಸಿ, ಅವರ ಮನವೊಲಿಸುವ ಮೂಲಕ ಮತ್ತೆ ಒಂದಾಗಲು ದಾರಿ ಮಾಡಿಕೊಡುತ್ತಾರೆ.



